ಬೆಳ್ತಂಗಡಿ: ಪ್ರತಿ ವರ್ಷ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಮುಳಿಯ ಸಂಸ್ಥೆಯು ಗ್ರಾಹಕರಿಗೆ ಆಯೋಜನೆ ಮಾಡುತ್ತಿದ್ದು ಆಗಸ್ಟ್ 5 ರಂದು ಬೆಳಿಗ್ಗೆಯಿಂದ ವಿವಿಧ ಕಾರ್ಯಕ್ರಮಗಳು ಜರುಗಿದವು.
ಆಟಿಕೂಟದ ಉದ್ಘಾಟನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಾ.ದಿವಾ ಕೊಕ್ಕಡ ತೆಂಗಿನ ಗರಿಯನ್ನು ಬಿಡಿಸುವ ಮೂಲಕ ನೇರವೇರಿಸಿ ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಳಿಯ ಜ್ಯುವೆಲ್ಕರ್ಸ್ ನ ಮಾರ್ಕೆಟಿಂಗ್ ಕನ್ಸಲ್ಸ್ಟೆಂಟ್ ವೇಣು ಶರ್ಮ ವಹಿಸಿದ್ದರು.ವೇದಿಕೆಯಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಉಪನ್ಯಾಸಕಿ ಕವಿತಾ ಉಮೇಶ್,ಪುತ್ತೂರು ಮುಳಿಯ ಜ್ಯುವೆಲ್ಸ್ ನ ಉಪಶಾಖಾ ಪ್ರಬಂಧಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.ತಾಲೂಕಿನ ಸಾಧಕರಿಗೆ ಸನ್ಮಾನನಾಟಿ ವ್ಯೆದ್ಯಕೀಯ ಕ್ಷೇತ್ರದಲ್ಲಿ ಬೇಬಿ ಪೂಜಾರಿ ಪುಣ್ಕೆತ್ಯಾರು ಪಿಲ್ಯ,ಕಂಬಳ ಕ್ಷೇತ್ರದ ಸಾಧಕ ರವಿ ಕುಮಾರ್ ಅಳದಂಗಡಿ,ನಾಟಕ ಕ್ಷೇತ್ರದ ಅಪ್ರತಿಮ ಸಾಧಕ ಧರ್ಣಪ್ಪ ಕರ್ಕೇರ ಹುಣ್ಸೆಕಟ್ಟೆ,ದೈವರಾಧನೆ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದ ಬೇಬಿ ಪರವ ನಾಲ್ಕೂರು,ಯಕ್ಷಗಾನ ಕ್ಷೇತ್ರದ ಸಾಧಕ ಸುಂದರ ಬಂಗಾಡಿ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ನಿರೂಪಿಸಿದರು.ರಶ್ಮಿ ಶರ್ಮ,ದೀಪಾ ಶಣೈ,ಕೌಶಿಕ್,ವಿನೀತ್ ಅವರನ್ನು ಗೌರವಿಸಲಾಯಿತು.
ವಿಶೇಷವಾಗಿ ಗ್ರಾಹಕರ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಬೆಳ್ತಂಗಡಿಯಲ್ಲಿ ಮುಳಿಯ ಸಂಸ್ಥೆ ಆಯೋಜಿಸಿ ಬೆಳಿಗ್ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಪದಪಂತೋಲು, ಮಧ್ಯಾಹ್ನ ಸಾರ್ವಜನಿಕ ವಿಭಾಗಕ್ಕೆ ತುಳು ಪಾಡ್ದನ, ಮಹಿಳೆಯರಿಗೆ ತುಳುನಾಡ ಖಾದ್ಯ, ಸಾರ್ವಜನಿಕರಿಗೆ ಸಿರಿವಂತರ ಕರಕುಶಲತೆ ನಡೆಯಿತು.ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನ ಶಾಖಾ ಪ್ರಬಂಧಕ ಅಶೋಕ್ ಬಂಗೇರ ಸ್ವಾಗತಿಸಿದರು.ಆರ್ಯಭಟ ಪ್ರಶಸ್ತಿ ಪುರಸ್ಕೃತ ಉದಯ್ ಕುಮಾರ್ ಲಾಯಿಲ ಪ್ರಾರ್ಥನೆ ಹಾಡಿದರು.ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.