September 6, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹಲ್ಲೆಗೆ ಯತ್ನ: ಸೌಜನ್ಯ ತಾಯಿ ಕುಸುಮಾವತಿರವರಿಂದ ಬೆಳ್ತಂಗಡಿ ಠಾಣೆಗೆ ದೂರು

ಬೆಳ್ತಂಗಡಿ: ಅಪರಿಚಿತ ವ್ಯಕ್ತಿ ಹಾಗೂ ಇತರರು ತನ್ನ ಮೇಲೆ ಮಾನಹಾನಿಗೆ ಯತ್ನಿಸಿದ ಕುರಿತು ಹಾಗೂ ತನ್ನ ಮಗನಿಗೆ ಹಲ್ಲೆ ನಡೆಸಿದ ಬಗ್ಗೆ ಧರ್ಮಸ್ಥಳ ಗ್ರಾಮದ ಪಾಂಗಾಳದ ಚಂದಪ್ಪಗೌಡ ಎಂಬವರ ಪತ್ನಿ ಕುಸುಮಾವತಿ (48ವ)ರವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆ.4 ರಂದು ದೂರು ನೀಡಿದ್ದಾರೆ.

ತನ್ನ ಮಗಳು ಸೌಜನ್ಯಾ 11 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದಳು. ಕೃತ್ಯದ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುವಂತೆ ನಾನು 11 ವರ್ಷದಿಂದ ಹೋರಾಟ ನಡೆಸುತ್ತಿದ್ದು, ಅದೇ ಉದ್ದೇಶದಿಂದ ಆ. 4ರಂದು ಉಜಿರೆಯಲ್ಲಿ ಸಭೆಯೊಂದನ್ನು ಆಯೋಜಿಸಿರುವುದನ್ನು ತಿಳಿದು ನ್ಯಾಯಕ್ಕಾಗಿ ಕುಟುಂಬದೊಂದಿಗೆ ತೆರಳಿದ್ದೆ. ಈ ಸಂದರ್ಭ ಅಪರಿಚಿತ ವ್ಯಕ್ತಿಗಳು, ಇತರರೊಂದಿಗೆ ಸೇರಿಕೊಂಡು ತನ್ನನ್ನು ತಡೆದು ಮಾನಹಾನಿಗೆ ಯತ್ನಿಸಿದ್ದಲ್ಲದೆ, ತನ್ನ ಮಗ ಜಯರಾಮನಿಗೂ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Related posts

ತೆಂಕಕಾರಂದೂರು: ಪೆರಾಲ್ದರಕಟ್ಟೆ ಮಸೀದಿಯಲ್ಲಿ ಮುಸ್ಲಿಮರ ಪವಿತ್ರ ಹಬ್ಬ ಈದುಲ್ ಪಿತ್ರ್ ಆಚರಣೆ

Suddi Udaya

ಬೆಳ್ತಂಗಡಿ ಜೆಸಿಐ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ ತಾಲೂಕು ಮಟ್ಟದ ಸಭೆ

Suddi Udaya

ಧರ್ಮಸ್ಥಳ ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಪ್ರಶಸ್ತಿ

Suddi Udaya

ಶಾಸಕ ಹರೀಶ್ ಪೂಂಜರ ವಿರುದ್ಧ ಪ್ರಕರಣ: ಎರಡೂ ಕೇಸುಗಳ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

Suddi Udaya

ಪಡಂಗಡಿ ಕಾರ್ಯನ ಮುಟ್ಟಿಯವರಿಗೆ ಸಂತೋಷ್ ಕುಮಾರ್ ಜೈನ್ ರವರ ನೇತೃತ್ವದಲ್ಲಿ ದಿನಸಿ ಸಾಮಾಗ್ರಿ ವಿತರಣೆ

Suddi Udaya
error: Content is protected !!