ಬೆಳ್ತಂಗಡಿ :ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸೇವಾ ಟ್ರಸ್ಟ್, ರೋಟರಿ ಬೆಂಗಳೂರು ಇಂದಿರಾ ನಗರ,ಕ್ಯಾನ್ ಪಿನ್ ಹೋಮ್ಸ್ ಲಿಮಿಟೆಡ್ ಇದರ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ರೋಟರಿ ಸೇವಾ ಭವನ ಅರಳಿ ಕಾಶಿಬೆಟ್ಟುವಿನಲ್ಲಿ ಆ.5 ರಂದು ನಡೆಯಿತು.
ಸುಮಾರು 12 ಲಕ್ಷ ವೆಚ್ಚದಲ್ಲಿ ಕ್ಯಾನ್ ಫೀನ್ ಹೋಮ್ಸ್ ಸಂಸ್ಥೆ ಹಾಗೂ ರೋಟರಿ ಬೆಂಗಳೂರು ಇಂದಿರಾ ನಗರ ಸಹಭಾಗಿತ್ವದಲ್ಲಿ ತಾಲೂಕಿನ 135 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕ್ಯಾನ್ ಫೀನ್ ಹೋಮ್ಸ್ ಸಂಸ್ಥೆಯ ಡಿಜಿಎಂ ಪ್ರಶಾಂತ್ ಜೋಷಿ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಹಸ್ತಾಂತರಿಸಿ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ವಹಿಸಿದ್ದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸ್ಥಾಪಕರಾದ ಮೋಹನ್ ಕುಮಾರ್ ಉಜಿರೆ, ರೋಟರಿ ಜಿಲ್ಲೆ 3181 ಜೋನ್ ರೋ.ಡಾ.ರಮೇಶ್, ರೋಟರಿ ಬೆಂಗಳೂರು ಇಂದಿರಾ ನಗರದ ಪೂರ್ವಾಧ್ಯಕ್ಷ ರೋ. ಜಗದೀಶ್ ಮುಗುಳಿ, ರೋಟರಿ ಜೋನ್ ರೋ.ಯಶವಂತ ಪಟವರ್ಧನ್,ರೋ.ಡೈರೆಕ್ಟರ್ ಸ್ಪೀಚ್ ಡಿ.ಎಂ ಗೌಡ ಉಪಸ್ಥಿತರಿದ್ದರು.
ನ್ಯಾಯವಾದಿ ರೋ.ದನಂಜಯ್ ರಾವ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು, ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಜಯಕುಮಾರ್ ನಿರೂಪಿಸಿದರು. ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು ವಂದಿಸಿದರು.
ಬೆಳ್ತಂಗಡಿ ರೋಟರಿ ಕ್ಲಬ್ ಪದಾಧಿಕಾರಿಗಳು ಸಹಕರಿಸಿದರು.