25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ ಸ. ಪ್ರೌ. ಶಾಲೆಯ ಶಿಕ್ಷಕ ಜಗದೀಶ್ ಬಿ.ಎಸ್ ಹಾಗೂ ಗೌರವ ಶಿಕ್ಷಕಿ ಸಾಧನ ರವರಿಗೆ ಬೀಳ್ಕೊಡುಗೆ ಸಮಾರಂಭ

ಅಳದಂಗಡಿ ಸರಕಾರಿ ಪ್ರೌಡ ಶಾಲೆಯ ಶಿಕ್ಷಕ ಜಗದೀಶ್ ಬಿ.ಎಸ್ ಹಾಗೂ ಅತಿಥಿ ಶಿಕ್ಷಕಿ ಸಾಧನ ರವರಿಗೆ ಬೀಳ್ಕೊಡುಗೆ ಸಮಾರಂಭವು ಇತ್ತೀಚೆಗೆ ಶಾಲೆಯಲ್ಲಿ ನಡೆಯಿತು.

ಶಾಲೆಯಲ್ಲಿ ಸುಮಾರು 15 ವರ್ಷ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ದಾರಿದೀಪವಾದ ಜಗದೀಶ್ ಬಿ.ಎಸ್ ರವರು ಇತ್ತೀಚೆಗೆ ನಡೆದ ಶಿಕ್ಷಕರ ವರ್ಗಾವಣೆಯಲ್ಲಿ ಅವರ ಹುಟ್ಟೂರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹುಲಿಕಲ್ ಪ್ರೌಢ ಶಾಲೆಗೆ ವರ್ಗಾವಣೆ ಪಡೆದುಕೊಂಡಿರುತ್ತಾರೆ.


ಶಾಲೆಯಲ್ಲಿ ಸಮಾಜ ವಿಜ್ಞಾನ ವಿಷಯದ ಗೌರವ ಶಿಕ್ಷಕಿ ಶ್ರೀಮತಿ ಸಾಧನ ರವರು ವಿದ್ಯಾರ್ಥಿ ಗಳಿಗೆ ಪಾಠ ಬೋಧನೆಯ ಜೊತೆಗೆ ಸಹ ಪಠ್ಯ ಚಟುವಟಿಕೆಯ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳ ಪಾಲಿನ ಅಚ್ಚು ಮೆಚ್ಚಿನ ಶಿಕ್ಷಕಿಯಾಗಿದ್ದಾರೆ.


ಶಿಕ್ಷಕರಿಗೆ ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳು, ಶಾಲಾ ಮುಖ್ಯೋಪಾಧ್ಯಯರು, ಶಿಕ್ಷಕರು, ವಿದ್ಯಾರ್ಥಿಗಳ ಸಮ್ಮುಖದಲ್ಲಿ, ರಮೇಶ್ ದೇವಾಡಿಗ ರವರ ಅಧ್ಯಕ್ಷತೆಯಲ್ಲಿ ಗೌರವ ಸನ್ಮಾನದೊಂದಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಹಲವಾರು ವಿದ್ಯಾರ್ಥಿಗಳು ಶಿಕ್ಷಕರ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿ ನೆನಪಿನ ಕಾಣಿಕೆಗಳನ್ನು ನೀಡಿದರು. ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಶಿಕ್ಷಕರು, ಇತರ ಶಾಲೆಗಳಿಂದ ಆಗಮಿಸಿದ ಚಿತ್ರಕಲಾ ಶಿಕ್ಷಕರು, ನಿವೃತ್ತ ಮುಖ್ಯ ಶಿಕ್ಷಕರು ಯಶೋಧರ ಸುವರ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮನೋಹರ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪ್ರೌಡ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಹಮ್ಮದ್ ರಿಯಾಜ್ ರವರು ವರ್ಗಾವಣೆಯಾದ ಶಿಕ್ಷಕರಿಗೆ ಶುಭ ಹಾರೈಸಿದರು.
ಶ್ರೀಮತಿ ಲಲಿತಾ ಹಾಗೂ ಜಗದೀಶ್ ರವರು ಸನ್ಮಾನ ಪತ್ರವನ್ನು ವಾಚಿಸಿದರು.

ಗಣಿತ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಸಿಲ್ವಿಯ ಡಿಕೋಸ್ತ ರವರು ಕಾರ್ಯಕ್ರಮ ನಿರೂಪಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾಂತಿ ಮರಿಯಾ ಸಾಲ್ದಾನ್ಹ ಸ್ವಾಗತಿಸಿ, ಹಿಂದಿ ಶಿಕ್ಷಕಿ ಶ್ರೀಮತಿ ಲಿಲ್ಲಿ ಮ್ಯಾಥ್ಯುರವರು ವಂದಿಸಿದರು.

Related posts

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಿಂದ ಕೊಲ್ಲಿ ಶ್ರೀ ದುರ್ಗಾದೇವಿ ಸನ್ನಿಧಿಯವರೆಗೆ ಶಿಲಾಮಯ ಧ್ವಜ ಸ್ತಂಭದ ವಿಜೃಂಭಣೆಯ ಮೆರವಣಿಗೆ

Suddi Udaya

ಕಳೆಂಜ: ಶ್ರೀ ಶಾಸ್ತಾರ ದೇವರ ಗರ್ಭ ಗುಡಿಯ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರುಗೊಂಡ ರೂ.3 ಲಕ್ಷ ಮೊತ್ತದ ಡಿಡಿ ಹಸ್ತಾಂತರ

Suddi Udaya

ಕೊಕ್ಕಡದಲ್ಲಿ ವ್ಯಾಪಾರ ಆಭಿವೃದ್ಧಿ ಯೋಜನೆಯ ತರಬೇತಿ ಕಾರ್ಯಕ್ರಮ

Suddi Udaya

ಕಾಪಿನಡ್ಕದಲ್ಲಿ ಗೆಳೆಯರ ಬಳಗದಿಂದ ಶ್ರೀ ಕೃಷ್ಣಾಷ್ಟಮಿ‌ ಸಂಭ್ರಮ : ಸಾಧಕರಿಗೆ ಸನ್ಮಾನ, ಶಾಲೆಗೆ ಗೊದ್ರೇಜ್ ಹಸ್ತಾಂತರ, ಕ್ರೀಡಾಕೂಟ

Suddi Udaya

ಫೆ.25-ಮಾ.1: ದೇಯಿ ಬೈದೈತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜಾತ್ರಾ ಮಹೋತ್ಸವ: ಮಡಿಲು ಸೇವೆ ವಿಶೇಷ- ಮಾತೆ, ಮಕ್ಕಳ ಪುನೀತ ಸಮಾಗಮ- ಬೈದರ್ಕಳ ದರ್ಶನ

Suddi Udaya

ನೇತ್ರಾವತಿ ನದಿಗೆ ಬಿದ್ದು ಸಾಯುತ್ತೇನೆ ಎಂದು ಪತಿಗೆ ಕರೆ ಮಾಡಿದ್ದ ಬೆಂಗಳೂರಿನ ಮಹಿಳೆಯನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ

Suddi Udaya
error: Content is protected !!