23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಚ್ಚಿನ ಗ್ರಾ.ಪಂ. ನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ

ಮಚ್ಚಿನ : ಮಚ್ಚಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಾದ ಗ್ರಾಮ ಪಂಚಾಯತ್ ಸ್ವಚ್ಛ ಸಂಕೀರ್ಣ ಘಟಕ, ಹಿಂದೂ ರುಧ್ರಭೂಮಿ ಲೋಕಾರ್ಪಣೆ, ಅಮೃತ ಉದ್ಯಾನವನ, ಗ್ರಾಮ ಪಂಚಾಯತ್ ಕಚೇರಿಗೆ ಸೋಲಾರ್ ಅಳವಡಿಕೆ, ಗ್ರಾಮ ಫಮಚಾಯತ್ ನೂತನ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ, ಪೆಟ್ರೊನೆಟ್ ಸಂಸ್ಥೆಯಿಂದ ನೀಡಲಾದ ಸ್ವಚ್ಛ ವಾಹಿನಿ ಲೋಕಾರ್ಪಣೆ, ಮಚ್ಚಿನ ಗ್ರಾಮದ ವಾಣಿಜ್ಯ ಮಳಿಗೆಗಳಿಗೆ ಕಸದ ಬುಟ್ಟಿ ವಿತರಣೆ ಕಾರ್ಯಕ್ರಮಗಳ ಲೋಕಾರ್ಪಣೆ ಹಾಗೂ ಭಾರತೀಯ ರೆಡ್‍ಕ್ರಾಸ್ ಸೊಸೈಟಿ, ಮಂಗಳೂರು ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭವು ಆ.9 ರಂದು ನಡೆಯಿತು.


ಕಾರ್ಯಕ್ರಮವನ್ನು ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ನಿಡ್ಡಾಜೆ ಉದ್ಘಾಟಿಸಿ ಮಾತನಾಡಿ ನನಗೆ ಸಂಪೂರ್ಣ ಸಹಕಾರ ನೀಡಿ ನಮ್ಮ ಆಡಳಿತಾವಧಿಯಲ್ಲಿ ಅನುದಾನವನ್ನು ಒದಗಿಸಿಕೊಟ್ಟು ಶಾಸಕರಿಗೂ ಗ್ರಾಮದ ಗ್ರಾಮಸ್ಥರಿಗೂ ಅಭಿನಂದನೆಯನ್ನು ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಮಚ್ಚಿನ ಗ್ರಾ.ಪಂ ಉಪಾಧ್ಯಕ್ಷೆ ಶ್ರೀಮತಿ ಡೀಕಮ್ಮ, ಬಳ್ಳಮಂಜ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ, ಬಜಾಜ್ ಅಲಾಯನ್ಸ್ ಲೈಫ್ ಇನ್ಸುರೆನ್ಸ್ ಮಂಗಳೂರು ಇದರ ಚೀಫ್ ರೀಜನಲ್ ಮ್ಯಾನೇಜರ್ ಬಿ.ಪದ್ಮನಾಭ ಸುವರ್ಣ, ಮಚ್ಚಿನ ಹಿಂದೂ ರುಧ್ರಭೂಮಿ ಗೌರವಾಧ್ಯಕ್ಷರಾದ ಡಾ.ಕೆ.ಎಂ ಮಾಧವ ಶೆಟ್ಟಿ, ಶ್ರೀ ಕ್ಷೇತ್ರ.ಧ.ಮಂ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಮಚ್ಚಿನ ಪ್ರಾ.ಕೃ.ಪ.ಸೇ.ಸಹಕಾರಿ ಬ್ಯಾಂಕ್‍ನ ಅಧ್ಯಕ್ಷರಾದ ಪದ್ಮನಾಭ ಸಾಲಿಯಾನ್ ಭಾಗವಹಿಸಿದ್ದರು.

ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿದ ನಾರಾಯಣ ನಾವುಡ, ಆನಂದ ದೇವಾಡಿಗ, ಸದಾನಂದ ಹೆಗಡೆ ಇವರನ್ನು ಹಾಗೂ ಹಿಂದೂ ರುದ್ರ ಭೂಮಿ, ಡಿಜಿಟಲ್ ಲೈಬ್ರೆರಿಗೆ ಧನ ಸಹಾಯ ಮಾಡಿದ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯರಾದ ಚಂದ್ರಶೇಖರ ಬಿ.ಎಸ್., ಮಚ್ಚಿನ ಶ್ರೀಮತಿ ಪ್ರತಿಭಾ ರೈ, ಗ್ರಾಮಚ್ಚಿನ ಶ್ರೀಮತಿ ರುಕ್ಕಿಣಿ, ಪ್ರಮೋದ್ ಕುಮಾರ್, ಶ್ರೀಮತಿ ಜಯಶ್ರೀ, ವಿಶ್ವರಾಜ್ ಹೆಗ್ಡೆ, ರವಿಚಂದ್ರ, ಶ್ರೀಮತಿ ರಮ್ಯಶ್ರೀ ಕೆ., ಶ್ರೀಮತಿ ಸೋಮಾವತಿ, ಶ್ರೀಮತಿ ತಾರಾ, ಚೇತನ್, ಶುಭಕರ ಉಪಸ್ಥಿತರಿದರು.

ಚಂದ್ರಕಾಂತ ನಿಡ್ಡಾಜೆ ಸ್ವಾಗತಿಸಿ, ವಸಂತ ಮರಕಡ ನಿರೂಪಿಸಿ, ಪಿಡಿಒ ಗೌರಿ ಶಂಖರ್ ಧನ್ಯವಾದವಿತ್ತರು.

Related posts

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಧತ್ತಿ ನಿಧಿಯಿಂದ ಉಚಿತ ಪುಸ್ತಕ ವಿತರಣೆ

Suddi Udaya

ಉಜಿರೆ ಶ್ರೀ ಧ.ಮಂ.ಪ.ಪೂ. ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

Suddi Udaya

ಡಿ. 8: ನಮ್ಮೂರ ಜಾತ್ರೆ ಕುಂಭಶ್ರೀ ವೈಭವ ಹಾಗೂ ಮಾತ-ಪಿತಾ-ಗುರುದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮ

Suddi Udaya

ಮಹಾಶಿವರಾತ್ರಿ: ಧಮ೯ಸ್ಥಳಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಪಾದಯಾತ್ರಿಗಳು

Suddi Udaya

ನಾವರ ಪ್ರಗತಿ ಬಂಧು ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಫೆ.13: ಅರೆಮಲೆಬೆಟ್ಟ ಜಾತ್ರಾ ಮಹೋತ್ಸವ

Suddi Udaya
error: Content is protected !!