ಮಾಲಾಡಿ: ಕುತೂಹಲ ಕೆರಳಿಸಿದ ಮಾಲಾಡಿ ಗ್ರಾಮ ಪಂಚಾಯತ್ ನ ಚುನಾವಣೆಯಲ್ಲಿ ಮುಂದಿನ ಎರಡೂವರೆ ವರ್ಷಗಳಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ಎ ಗೆ ಮೀಸಲಾಗಿದ್ದು ಅಧ್ಯಕ್ಷರಾಗಿ ಪುನೀತ್ ಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಉಪಾಧ್ಯಕ್ಷರಾಗಿ ಸೆಲೆಸ್ಟಿನ್ ಡಿಸೋಜ ಇವರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಪುನೀತ್ ಕುಮಾರ್, ದಿನೇಶ್ ಕರ್ಕೇರ,ತುಳಸಿಯವರು ನಾಮಪತ್ರ ಸಲ್ಲಿಸಿದ್ದರು. ಕೊನೆ ಕ್ಷಣದಲ್ಲಿ ತುಳಸಿ ನಾಮಪತ್ರ ಹಿಂತೆಗೆದು ಪುನೀತ್ ಕುಮಾರ್ ಮತ್ತು ದಿನೇಶ್ ಕರ್ಕೇರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಪುನೀತ್ ಕುಮಾರ್ 10 ಮತ ಪಡೆದು ಜಯಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ದಿನೇಶ್ ಕರ್ಕೇರ 8 ಮತಗಳನ್ನು ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ಸೆಲೆಸ್ಟಿನ್ ಡಿಸೋಜ ಮತ್ತು ಜಯಂತಿ ನಾಮಪತ್ರ ಸಲ್ಲಿಸಿ ಚುನಾವಣೆಯಲ್ಲಿ ಸೆಲೆಸ್ಟಿನ್ 11 ಮತಗಳನ್ನು ಪಡೆದು ವಿಜಯಿಯಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಜಯಂತಿ 7 ಮತಗಳನ್ನು ಪಡೆದರು.
ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಸ್ ಚಂದ್ರಶೇಖರ ಚುನಾವಣಾ ಪಕ್ರೀಯೇ ನಿರ್ವಹಿಸಿದರು, ಪಂ.ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿವರ್ಗದವರು ಸಹಕರಿಸಿದರು.