31.8 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ “ಅಮೃತ” ಗ್ರಾಮ ಪಂಚಾಯತ್ ವಿವಿಧ ಕಾಮಗಾರಿಗಳ ಉದ್ಘಾಟನೆ

ಕೊಕ್ಕಡ: ಕೊಕ್ಕಡ “ಅಮೃತ” ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಯು ಆ.9ರಂದು ಜರುಗಿತು.

ಕೆಂಗುಡೇಲು ಎಂಬಲ್ಲಿ ನೂತನವಾಗಿ ನಿರ್ಮಿಸಿದ ಬಸ್‍ಸ್ಟಾಂಡ್‍ನ್ನು ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ ಉದ್ಘಾಟಿಸಿ, ಶುಭಹಾರೈಸಿದರು.

ಪಂಚಾಯತ್ ಉಪಾಧ್ಯಕ್ಷೆ ಪವಿತ್ರಾ ಗುರುಪ್ರಸಾದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಠಲ ಕುರ್ಲೆ ಧನ್ಯವಾದವಿತ್ತರು.

ಉಪ್ಪಾರಪಳಿಕೆ ಹಿ.ಪ್ರಾ.ಶಾಲೆಯಲ್ಲಿ ಗ್ರಾ.ಪಂ ಅನುದಾನದಲ್ಲಿ ನಿರ್ಮಿಸಿದ ಹುಡುಗಿಯರ ಶೌಚಾಲಯವನ್ನು ಪಂಚಾಯತ್ ಉಪಾಧ್ಯಕ್ಷೆ ಪವಿತ್ರಾ ಗುರುಪ್ರಸಾದ್ ಉದ್ಘಾಟಿಸಿ, ಶುಭಹಾರೈಸಿದರು. ಶಿಕ್ಷಕಿ ಸರಸ್ವತಿ ಸ್ವಾಗತಿಸಿ, ಧನ್ಯವಾದವಿತ್ತರು. ಶಿಕ್ಷಕ ದಾಮೋದರ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು.

ಪುದ್ಯಂಗ ಎಂಬಲ್ಲಿ ನಿರ್ಮಿಸಿದ ಬಸ್‍ಸ್ಟ್ಯಾಂಡ್‍ನ್ನು ಗ್ರಾ.ಪಂ ಅಧ್ಯಕ್ಷ ಯೋಗೀಶ ಆಲಂಬಿಲ ಉದ್ಘಾಟಿಸಿ , ಶುಭಹಾರೈಸಿದರು. ವಿಠಲ ಕುರ್ಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀನಾಥ್ ಬಡಕಾೈಲು ವಂದಿಸಿದರು.

ಹಳ್ಳಿಂಗೇರಿ ಎಂಬಲ್ಲಿ ನಿರ್ಮಿಸಿದ ಬಸ್‍ಸ್ಟ್ಯಾಂಡ್‍ನ್ನು ನಿವೃತ್ತ ಸೈನಿಕ ಪದ್ಮಯ ಗೌಡ ತಿಪ್ಪೆಮಜಲು ಉದ್ಘಾಟಿಸಿದರು. ಸದಸ್ಯ ಜಗದೀಶ ಕೆಂಪಕೋಡಿ ಸ್ವಾಗತಿಸಿ, ಸದಸ್ಯ ವಿಶ್ವನಾಥ ಕಕ್ಕುದೋಳಿ ಧನ್ಯವಾದವಿತ್ತರು. ಉಪಾಧ್ಯಕ್ಷೆ ಪವಿತ್ರಾ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಕೊಕ್ಕಡ ಗ್ರಾ.ಪಂ ವ್ಯಾಪ್ತಿಯಲ್ಲಿ ಎರಡೂವರೆ ವರ್ಷದಲ್ಲಿ ನಡೆಸಿರುವ ವಿವಿಧ ಕಾಮಗಾರಿಗಳ ವಿವರಗಳನ್ನೊಳಗೊಂಡ ಪತ್ರಿಕೆಯನ್ನು ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಬಿಡುಗಡೆಗೊಳಿಸಿದರು. ಗ್ರಾ.ಪಂ ಸದಸ್ಯರಾದ ಪ್ರಭಾಕರ ಗೌಡ ಮಲ್ಲಿಗೆಮಜಲು, ವಿಶ್ವನಾಥ ಕಕ್ಕುದೋಳಿ, ಜಗದೀಶ ಕೆಂಪಕೋಡಿ, ಶ್ರೀಮತಿ ಬೇಬಿ, ಕಾರ್ಯದರ್ಶಿ ಭಾರತಿ, ಬೂತ್ ಸಮಿತಿ ಅಧ್ಯಕ್ಷ ಶ್ರೀನಾಥ ಬಡಕಾೈಲು, ಕಾರ್ಯದರ್ಶಿಗಳಾದ ವಿಠಲ ಕುರ್ಲೆ, ಶ್ರೀಮತಿ ಅಶ್ವಿನಿ ಉಪಸ್ಥಿತರಿದ್ದರು.

Related posts

ಅಂಬರ ಮರ್ಲೆರ್” ರಿಟರ್ನ್ಸ್ ತುಳು ಧಾರಾವಾಹಿಯ ತಂಡಕ್ಕೆ ಶಾಸಕ ಹರೀಶ್ ಪೂಂಜರವರಿಂದ ಶುಭ ಹಾರೈಕೆ

Suddi Udaya

ಉಜಿರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಕೊಲ್ಪಾಡಿ ಶಾಲೆಯ ವಿದ್ಯಾರ್ಥಿನಿ ತನಿಷ್ಕ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ರಾಜ-ಮಹಾರಾಜ ಜೋಡುಕರೆ ಕಂಬಳ: ಮುಳಿಯ ಜ್ಯುವೆಲ್ಸ್ ನಿಂದ ಆಭರಣಗಳ ಪ್ರದರ್ಶನ: ಮುಳಿಯ ಪ್ರಾಪರ್ಟೀಸ್‌ ಬಗ್ಗೆ ಮಾಹಿತಿ ಕೇಂದ್ರ

Suddi Udaya

ಬೆಳ್ತಂಗಡಿಯ ಮಾಚಾರ್ ನ ಶಿವರಾಮ ಗೌಡ ಪಿ. ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Suddi Udaya

ಪತಿಯೊಂದಿಗೆ ಕೋಪಗೊಂಡು ಆತ್ಮಹತ್ಯೆಗೆ ಯತ್ನ: ನದಿ ಹಾರಲು ಯತ್ನಿಸಿದ ಮಹಿಳೆಯ ಜೀವ ಕಾಪಾಡಿದ ಸಾಕು ನಾಯಿ

Suddi Udaya

ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರನ್ನು ಭೇಟಿ ಮಾಡಿದ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿಗಳು

Suddi Udaya
error: Content is protected !!