24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾರಾವಿ ತುಳು ಶಿವಳ್ಳಿ ವಲಯದ ಆಟಿಡೊಂಜಿ ದಿನ

ಅಳದಂಗಡಿ : “ತುಳುವರ ಆಷಾಡ ಮಾಸವು ವಿಶಿಷ್ಟ ಪೂರ್ಣ ಆಚರಣೆಯಾಗಿದ್ದು ಈ ಮಾಸದಲ್ಲಿ ಅನುಸರಿಸುವ ಸಂಪ್ರದಾಯವು ನಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಕೆಸುವಿನ ಪತ್ರೋಡೆ, ಪಾಲೆಯ ಕಷಾಯದಂತಹ ಆಹಾರಗಳು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್ ನಂತಹ ಮಾಧ್ಯಮಗಳಿಂದ ನಾವು ನಮ್ಮ ಸಂಪ್ರದಾಯವನ್ನು ಮರೆಯುತ್ತಿದ್ದೇವೆ. ಇದು ಮುಂದಿನ ಪೀಳಿಗೆ ಅಪಾಯಕಾರಿ ಬೆಳವಣಿಗೆಯಾಗಿದೆ.” ಎಂದು ತಮ್ಮ ಅಭಿಪ್ರಾಯವನ್ನು ಪ.ರಾ, ಶಾಸ್ತ್ರಿಗಳು ವ್ಯಕ್ತಪಡಿಸಿದರು.

ಇವರು ನಾರಾವಿ ತುಳು ಶಿವಳ್ಳಿ ವಲಯದ ಆಟಿಡೊಂಜಿ ದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಬಳಂಜದ ಈಶ್ವರ ಭಟ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯದ ಸದಸ್ಯರಿಗೆ ವಿವಿಧ ಮನರಂಜನಾ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಬಿಲ್ಲೀಸ್ ಆಡುವ ಮೂಲಕ ಹಿರಿಯ ಉದ್ಯಮಿಗಳಾದ ಕೆ ಕೃಷ್ಣ ಸಂಪಿಗೆತ್ತಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಲ್ಲರಿಗೂ ಶುಭ ಹಾರೈಸಿದರು.

ವಲಯದ ವಿವಿಧ ಸದಸ್ಯರ ಮನೆಗಳಲ್ಲಿ ತಯಾರಿಸಿದ ಆಷಾಡದ ವಿಶಿಷ್ಟ ಖಾದ್ಯಗಳನ್ನು ಸಂಗ್ರಹಿಸಿ ಹಂಚಲಾಯಿತು. ಅಪರಾಹ್ನ ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ವತಿಯಿಂದ ವಿಧುರಾತಿಥ್ಯ ಎಂಬ ಕಥಾ ಭಾಗದ ಗಮಕ ವೈಭವವನ್ನು ಹಮ್ಮಿಕೊಳ್ಳಲಾಯಿತು. ಪ್ರೌಢಶಾಲಾ ಶಿಕ್ಷಕರಾದ ಶ್ರೀಮತಿ ಸುಮಾ, ಶ್ರೀಮತಿ ಮೇಧಾ ವಾಚನದಲ್ಲಿ ಸಹಕರಿಸಿದರೆ, ಶ್ರೀ ಗೌರೀಶ್ ಭಟ್ ವ್ಯಾಖ್ಯಾನವನ್ನು ನಿರ್ವಹಿಸಿದರು.

ಸಭಾ ಕಾರ್ಯಕ್ರಮದಲ್ಲಿ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಸಾಧಕರಾದ ಪ.ರಾಮಕೃಷ್ಣ ಶಾಸ್ತ್ರಿಗಳಿಗೆ ಅಳದಂಗಡಿ ನಾರಾವಿ ತುಳು ಶಿವಳ್ಳಿ ವಲಯದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು.

ನಿವೃತ್ತ ಶಿಕ್ಷಕರಾದ ಕೆ ವಸಂತ ರಾವ್ ಸುಕ್ಕೇರಿಯವರು ಶಾಸ್ತ್ರಿಗಳಿಗೆ ಅಭಿನಂದನ ನುಡಿಗಳನ್ನು ಸಲ್ಲಿಸಿದರು. ಮಹಿಳಾ ಘಟಕದ ಕಾರ್ಯದರ್ಶಿಯಾದ ಶ್ರೀಮತಿ ಮಾನಸ ಭಟ್ ಸ್ವಾಗತಿಸಿ, ತುಳು ಶಿವಳ್ಳಿ ಸಭಾದ ಕಾರ್ಯದರ್ಶಿಯಾದ ರಘುರಾಮ ಭಟ್ ವಂದಿಸಿದರು. ಶಿಕ್ಷಕರಾದ ರಾಮಕೃಷ್ಣ ಭಟ್‌ ಕಾರ್ಯಕ್ರಮವನ್ನು ನಿರೂಪಿಸಿದರು. ತುಳು ಶಿವಳ್ಳಿ ಸಭಾದ ತಾಲೂಕು ಅಧ್ಯಕ್ಷರಾದ ರಾಘವೇಂದ್ರ ಬೈಪಡಿತ್ತಾಯ, ಕಾರ್ಯದರ್ಶಿಗಳಾದ ರಾಜಪ್ರಸಾದ್ ಪೋಳ್ಳಾಯ, ಅಳದಂಗಡಿ ನಾರಾವಿ ವಲಯದ ಅಧ್ಯಕ್ಷರಾದ ಸತೀಶ್‌ ಪೋಳ್ಳಾಯ, ಅತಿಥಿಗಳಾದ ನಿವೃತ್ತ ಶಿಕ್ಷಕ ಪ್ರಭಾಕರ ಪೋಳ್ಳಾಯ, ಪ್ರೊ. ಮಧೂರು ಮೋಹನ ಕಲ್ಲೂರಾಯ ಮತ್ತಿತರರು ಉಪಸ್ಥಿತರಿದ್ದರು.

Related posts

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಸರಕಾರಿ ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

Suddi Udaya

ಅಂಡಿಂಜೆ: 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಆರ್ಯಭಟ ಪ್ರಶಸ್ತಿ ಪುರಸ್ಕೃತ ದೇವೇಂದ್ರ ಹೆಗ್ಡೆ ಕೊಕ್ರಾಡಿ ರವರಿಗೆ ಸನ್ಮಾನ

Suddi Udaya

ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ತ್ರೋಬಾಲ್ ಪಂದ್ಯಾಟದಲ್ಲಿ ಜೈ ಶ್ರೀ ರಾಮ್ ಫ್ರೆಂಡ್ಸ್ ಮುರ ತಂಡ ದ್ವಿತೀಯ ಸ್ಥಾನ

Suddi Udaya

ಬೆಳ್ತಂಗಡಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಾಲೂಕು ಮಟ್ಟದ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ನೀಡುವಂತೆ ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್ ಶಿವರಾಂರಿಂದ ಅರಣ್ಯ ಸಚಿವರಿಗೆ ಮನವಿ

Suddi Udaya

ನೆಟ್ ಬಾಲ್ ಸೀನಿಯರ್ ನ್ಯಾಷನಲ್ ಚಾಂಪಿಯನ್ ಶಿಪ್ ಪಂದ್ಯಾಟ: ಎಸ್ ಡಿ ಎಂ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ

Suddi Udaya
error: Content is protected !!