September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾರಾವಿ ತುಳು ಶಿವಳ್ಳಿ ವಲಯದ ಆಟಿಡೊಂಜಿ ದಿನ

ಅಳದಂಗಡಿ : “ತುಳುವರ ಆಷಾಡ ಮಾಸವು ವಿಶಿಷ್ಟ ಪೂರ್ಣ ಆಚರಣೆಯಾಗಿದ್ದು ಈ ಮಾಸದಲ್ಲಿ ಅನುಸರಿಸುವ ಸಂಪ್ರದಾಯವು ನಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಕೆಸುವಿನ ಪತ್ರೋಡೆ, ಪಾಲೆಯ ಕಷಾಯದಂತಹ ಆಹಾರಗಳು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್ ನಂತಹ ಮಾಧ್ಯಮಗಳಿಂದ ನಾವು ನಮ್ಮ ಸಂಪ್ರದಾಯವನ್ನು ಮರೆಯುತ್ತಿದ್ದೇವೆ. ಇದು ಮುಂದಿನ ಪೀಳಿಗೆ ಅಪಾಯಕಾರಿ ಬೆಳವಣಿಗೆಯಾಗಿದೆ.” ಎಂದು ತಮ್ಮ ಅಭಿಪ್ರಾಯವನ್ನು ಪ.ರಾ, ಶಾಸ್ತ್ರಿಗಳು ವ್ಯಕ್ತಪಡಿಸಿದರು.

ಇವರು ನಾರಾವಿ ತುಳು ಶಿವಳ್ಳಿ ವಲಯದ ಆಟಿಡೊಂಜಿ ದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಬಳಂಜದ ಈಶ್ವರ ಭಟ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯದ ಸದಸ್ಯರಿಗೆ ವಿವಿಧ ಮನರಂಜನಾ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಬಿಲ್ಲೀಸ್ ಆಡುವ ಮೂಲಕ ಹಿರಿಯ ಉದ್ಯಮಿಗಳಾದ ಕೆ ಕೃಷ್ಣ ಸಂಪಿಗೆತ್ತಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಲ್ಲರಿಗೂ ಶುಭ ಹಾರೈಸಿದರು.

ವಲಯದ ವಿವಿಧ ಸದಸ್ಯರ ಮನೆಗಳಲ್ಲಿ ತಯಾರಿಸಿದ ಆಷಾಡದ ವಿಶಿಷ್ಟ ಖಾದ್ಯಗಳನ್ನು ಸಂಗ್ರಹಿಸಿ ಹಂಚಲಾಯಿತು. ಅಪರಾಹ್ನ ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ವತಿಯಿಂದ ವಿಧುರಾತಿಥ್ಯ ಎಂಬ ಕಥಾ ಭಾಗದ ಗಮಕ ವೈಭವವನ್ನು ಹಮ್ಮಿಕೊಳ್ಳಲಾಯಿತು. ಪ್ರೌಢಶಾಲಾ ಶಿಕ್ಷಕರಾದ ಶ್ರೀಮತಿ ಸುಮಾ, ಶ್ರೀಮತಿ ಮೇಧಾ ವಾಚನದಲ್ಲಿ ಸಹಕರಿಸಿದರೆ, ಶ್ರೀ ಗೌರೀಶ್ ಭಟ್ ವ್ಯಾಖ್ಯಾನವನ್ನು ನಿರ್ವಹಿಸಿದರು.

ಸಭಾ ಕಾರ್ಯಕ್ರಮದಲ್ಲಿ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಸಾಧಕರಾದ ಪ.ರಾಮಕೃಷ್ಣ ಶಾಸ್ತ್ರಿಗಳಿಗೆ ಅಳದಂಗಡಿ ನಾರಾವಿ ತುಳು ಶಿವಳ್ಳಿ ವಲಯದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು.

ನಿವೃತ್ತ ಶಿಕ್ಷಕರಾದ ಕೆ ವಸಂತ ರಾವ್ ಸುಕ್ಕೇರಿಯವರು ಶಾಸ್ತ್ರಿಗಳಿಗೆ ಅಭಿನಂದನ ನುಡಿಗಳನ್ನು ಸಲ್ಲಿಸಿದರು. ಮಹಿಳಾ ಘಟಕದ ಕಾರ್ಯದರ್ಶಿಯಾದ ಶ್ರೀಮತಿ ಮಾನಸ ಭಟ್ ಸ್ವಾಗತಿಸಿ, ತುಳು ಶಿವಳ್ಳಿ ಸಭಾದ ಕಾರ್ಯದರ್ಶಿಯಾದ ರಘುರಾಮ ಭಟ್ ವಂದಿಸಿದರು. ಶಿಕ್ಷಕರಾದ ರಾಮಕೃಷ್ಣ ಭಟ್‌ ಕಾರ್ಯಕ್ರಮವನ್ನು ನಿರೂಪಿಸಿದರು. ತುಳು ಶಿವಳ್ಳಿ ಸಭಾದ ತಾಲೂಕು ಅಧ್ಯಕ್ಷರಾದ ರಾಘವೇಂದ್ರ ಬೈಪಡಿತ್ತಾಯ, ಕಾರ್ಯದರ್ಶಿಗಳಾದ ರಾಜಪ್ರಸಾದ್ ಪೋಳ್ಳಾಯ, ಅಳದಂಗಡಿ ನಾರಾವಿ ವಲಯದ ಅಧ್ಯಕ್ಷರಾದ ಸತೀಶ್‌ ಪೋಳ್ಳಾಯ, ಅತಿಥಿಗಳಾದ ನಿವೃತ್ತ ಶಿಕ್ಷಕ ಪ್ರಭಾಕರ ಪೋಳ್ಳಾಯ, ಪ್ರೊ. ಮಧೂರು ಮೋಹನ ಕಲ್ಲೂರಾಯ ಮತ್ತಿತರರು ಉಪಸ್ಥಿತರಿದ್ದರು.

Related posts

ಉದ್ಯಮಿ ಶಶಿಧರ ಶೆಟ್ಟಿ ಬರೋಡರಿಂದ ಕಾಶಿ ಶೆಟ್ಟಿಯವರ ಸ್ಮರಣಾರ್ಥ ಬಡ ಬಂಟ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು

Suddi Udaya

ನಿಡ್ಲೆ: ನವೋದಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಅನುಗ್ರಹ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

Suddi Udaya

ಬೆಳ್ತಂಗಡಿ ಮಾರಿಗುಡಿ ಬಳಿ ದುರ್ನಾತ ಬೀರುವ ಒಳ ಚರಂಡಿ

Suddi Udaya

ಪುತ್ತಿಲ: ಆಟೋ ಚಾಲಕ ದೀಕ್ಷಿತ್ ಬಿ. ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿಯ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಟೀಚರ್ಸ್ ಡೇ ಮತ್ತು ಓಣಂ ಹಬ್ಬದ ಆಚರಣೆ

Suddi Udaya
error: Content is protected !!