23.9 C
ಪುತ್ತೂರು, ಬೆಳ್ತಂಗಡಿ
May 17, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಮಗು ಸಾವು: ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ವಸಂತ ಬಂಗೇರ ಸೂಕ್ತ ತನಿಖೆಗೆ ಒತ್ತಾಯ

ಬೆಳ್ತಂಗಡಿ: ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ವೇಳೆ ನರ್ಸ್ ಗಳು ಆರೈಕೆ ಮಾಡಿರುವುದರಿಂದ ಒಂದೂವರೆ ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ ಎಂದು ಮಗುವಿನ ಹೆತ್ತವರು ಆರೋಪಿಸಿದ್ದಾರೆ.

ಧರ್ಮಸ್ಥಳ ಗ್ರಾಮದ ಮುಳಿಕಾರ್ ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಯ ಒಂದೂವರೆ ತಿಂಗಳ ಹೆಣ್ಣು ಮಗು ಅಂಶಿಕಾ ಸಾವನ್ನಪ್ಪಿದ ಘಟನೆ ಆ.8ರಂದು ನಡೆದಿದೆ.


ಘಟನೆಯ ಬಗ್ಗೆ ಮಾಹಿತಿ ತಿಳಿದು ಮಾಜಿ ಶಾಸಕ ವಸಂತ ಬಂಗೇರ ಆಗಮಿಸಿ, ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಆಪ್ತ ಕಾರ್ಯದರ್ಶಿ ಗೆ ದೂರವಾಣಿ ಕರೆ ಮಾಡಿ ವಿಷಯವನ್ನು ತಿಳಿಸಿ ಯಾರಿಂದ ತೊಂದರೆ ಆಗಿದೆಯೋ ಅವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮಗುವನ್ನು ತಾಯಿ ಸವಿತಾ ನೆರಿಯದ ತನ್ನ ಅಕ್ಕ ಲೀಲಾವತಿ ಅವರ ಮನೆಯಲ್ಲಿದ್ದುಕೊಂಡು ಆರೈಕೆ ಮಾಡಿಕೊಂಡಿದ್ದರು. ಆಗಸ್ಟ್ 8 ರಂದು ಮಗುವಿಗೆ ಕಫ ಆಗಿತ್ತು ಎಂದು ಬೆಳಿಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮಕ್ಕಳ ವೈದ್ಯರು ಮತ್ತು ದಾದಿಯರು ಸರಿಯಾಗಿ ಆರೈಕೆ ಮಾಡದಿರುವುದರಿಂದ ಮಗು ಸಾವನ್ನಪ್ಪಿದೆ ಎಂದು ಮಗುವಿನ ಮನೆಯವರು ಆರೋಪಿಸಿದ್ದಾರೆ.


ಕರ್ತವ್ಯ ನಿರ್ವಹಿಸಿದ ಮಕ್ಕಳ ತಜ್ಞೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಹೋಗಲು ತಿಳಿಸಿದರು. ಮಗುವನ್ನು ಕರೆದುಕೊಂಡು ಬಂದ ಪೋಷಕರು ಇಲ್ಲಿಯೇ ಆರೈಕೆ ಮಾಡಿ ಎಂದು ತಿಳಿಸಿದರಿಂದ ಮಗುವಿಗೆ ಅಲ್ಲಿಯೇ ಚಿಕಿತ್ಸೆ ನೀಡಿದರು .ಮಗುವಿಗೆ ಶ್ವಾಸಕೋಶದ ತೊಂದರೆ ಇದ್ದುದರಿಂದ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

Related posts

ಗೋಪಾಲಕೃಷ್ಣ ದೇವಸ್ಥಾನ ಬೆಂದ್ರಾಳ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಆಟೋಟ ಸ್ಪರ್ಧೆ

Suddi Udaya

ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ

Suddi Udaya

ಅಂಗಾಂಗ ದಾನ ನೋಂದಾವಣೆ ಕಾರ್ಯಕ್ರಮ ಮುಂದೂಡಿಕೆ

Suddi Udaya

ಉಜಿರೆ : ಪ್ರಗತಿ ಮಹಿಳಾ ಮಂಡಲ ನೇತೃತ್ವದಲ್ಲಿ ಚಿಲಿಪಿಲಿ 2024 ಬೇಸಿಗೆ ಶಿಬಿರದ ಸಮಾರೋಪ

Suddi Udaya

ಶಿಬಾಜೆ: ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚೌತಿ- ನವರಾತ್ರಿಯ ಬಗ್ಗೆ ಪೂರ್ವಭಾವಿ ಸಭೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಕಾರು ಅಪಘಾತ: ಉಜಿರೆಯ ಸರೋಜಿನಿ ಶೆಟ್ಟಿ ಮೃತ್ಯು

Suddi Udaya
error: Content is protected !!