ಕೊಕ್ಕಡ: ಕೊಕ್ಕಡ ವ್ಯಾಪ್ತಿಯಲ್ಲಿನ ಹಾಗೂ ತಾಲೂಕಿನ ಇತರ ಭಾಗಗಳ ಎಂಡೋಸಲ್ಫಾನ್ ಸಂತ್ರಸ್ತ ವಿಶೇಷ ಚೇತನರಿಗೆ ಸರ್ಕಾರದಿಂದ ನೀಡುವ ಉಚಿತ ಬಸ್ ಪಾಸನ್ನು ವಿತರಣಾ ಶಿಬಿರವು ಆ.9ರಂದು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಈ ಶಿಬಿರದಲ್ಲಿ ತಾಲೂಕಿನ 170 ಜನ ಎಂಡೋ ಪೀಡಿತ ವಿಶೇಷ ಚೇತನರು ತಮ್ಮ ಉಚಿತ ಪಾಸನ್ನು ನವೀಕರಣ ಮಾಡಿಸಿ ಪ್ರಯೋಜನ ಪಡೆದುಕೊಂಡರು. ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಲು ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಹತ್ತು ಜನ ಕಾರ್ಯಕರ್ತ ಸಿಬ್ಬಂದಿಯವರು ಸಹಕಾರ ನೀಡಿ ನಡೆಸುವುದರೊಂದಿಗೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಯ 3 ಜನ ಸಿಬ್ಬಂದಿಯವರು ಇದ್ಧು ಉಚಿತ ಬಸ್ ಪಾಸ್ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವೈಧ್ಯಾಧಿಕಾರಿ ಕಛೇರಿಯ ಡಾ| ನವೀನ್ ಕುಲಾಲ್ ರವರು ಹಾಗೂ ಜಿಲ್ಲಾ ಎಂಡೋ ಸೆಲ್ ನ ನೋಡಲ್ ಅಧಿಕಾರಿ ಸಾಜು, ತಾಲೂಕಿನ ವಿಶೇಷ ಚೇತನರ ಮೇಲ್ವಿಚಾರಕ ಜೋನ್ ಬ್ಯಾಪ್ಟಿಸ್ಟ್, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳಾದ ರಕ್ಷಿತ್, ಸೋಮನಾಥ್ ಉಪಸ್ಥಿತರಿದ್ದರು.
ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಸಂಪೂರ್ಣ ಸಹಕಾರದಿಂದ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು…