ಬೆಳ್ತಂಗಡಿ: ಮಾಲಾಡಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷ ಪುನೀತ್ ಕುಮಾರ್ ಮತ್ತು ಗ್ರಾ.ಪಂ ಸದಸ್ಯ ವಸಂತ ಪೂಜಾರಿ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪಿ ಮಾಜಿ ಶಾಸಕ ಕೆ.ವಸಂತ ಬಂಗೇರರವರ ಸಮ್ಮುಖದಲ್ಲಿ ಕಾಂಗ್ರೇಸ್ ಗೆ ಸೇರ್ಪಡೆಯಾದರು.
ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ನಗರ ಮತ್ತು ಗ್ರಾಮೀಣ ಸಮಿತಿ ಅಧ್ಯಕ್ಷರಾದ ಸತೀಶ್ ಬಂಗೇರ ಕಾಶಿಪಟ್ಣ ಮತ್ತು ನಾಗೇಶ್ ಕುಮಾರ್ ಗೌಡ ಪಕ್ಷದ ಧ್ಬಜ ನೀಡಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಪ್ರಮುಖರಾದ ಮನೋಹರ್ ಕುಮಾರ್,ಶೇಖರ್ ಕುಕ್ಕೇಡಿ,ಜಯವಿಕ್ರಮ್ ಕಲ್ಲಾಪು,ಪ್ರವೀಣ್ ಫೆರ್ನಾಂಡೀಸ್ ಉಜಿರೆ,ವಿನ್ಸೆಂಟ್ ಡಿಸೋಜ, ಪದ್ಮನಾಭ ಸಾಲಿಯಾನ್,ಜಗದೀಶ್ ಡಿ,ಗ್ರೇಗೋರಿ ಮಿರಾಂದ, ಬೆನೆಡಿಕ್ಟ್ ಡಿಸೋಜ, ಬೇಬಿ ಸುವರ್ಣ,ಉಮೇಶ್ ಮಾಲಾಡಿ,ಐರಿನ್ ಮೋರಾಸ್,ಮಹಮ್ಮದ್ ಆಲಿ,ಅಲ್ತಾಫ್ ಮಾಲಾಡಿ, ಪ್ರೇಮ ವಸಂತ್, ಸುನೀಲ್ ಜೈನ್,ಪ್ರವೀಣ್ ಪಿಂಟೋ ಕಾಶಿಪಟ್ಣ,ರಾಜೇಶ್ ಶೆಟ್ಟಿ ಪೆರಾಡಿ,ಅಶ್ವಥ್ ಗೌಡ ಮೊಗ್ರು,ಹರೀಶ್ ಪೂಜಾರಿ,ರಮೇಶ್ ಪೂಜಾರಿ ಪಡ್ಡಾಯಿಮಜಲು,ಸತೀಶ್ ಪೂಜಾರಿ ಪಿ.ಎನ್,ರಾಕೇಶ್ ಕುಮಾರ್ ಮೂಡುಕೋಡಿ ಮತ್ತಿತರರು ಉಪಸ್ಥಿತರಿದ್ದರು.
ಪುನೀತ್ ಅವರು ಮಾಲಾಡಿ ಗ್ರಾ.ಪಂ ಗೆ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿ, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಎರಡೂವರೆ ವರ್ಷ ಅವಧಿಗೆ ನಿನ್ನೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದು ಮಾಲಾಡಿ ಗ್ರಾ.ಪಂ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ಇಂದು ಕಾಂಗ್ರೇಸ್ ಸೇರ್ಪಡೆಯಾದರು.