ತಾಲೂಕು ಸುದ್ದಿ

ಆಗಷ್ಟ್ 28 : ಸೌಜನ್ಯ ಪ್ರಕರಣದ ತನಿಖೆಗೆ ಒತ್ತಾಯಿಸಿ ಚಲೋ ಬೆಳ್ತಂಗಡಿ ಮಹಾಧರಣಿ

ಸೌಜನ್ಯ ಪ್ರಕರಣವನ್ನು ರಾಜ್ಯದ ಪೋಲಿಸ್ ಇಲಾಖೆಯ ವಿಶೇಷ ತನಿಖಾ ತಂಡ ತನಿಖೆ ನಡೆಸುವಂತೆ ಒತ್ತಾಯ

ರಾಜ್ಯಾದ್ಯಂತ ಹೆಚ್ಚಿನ ಸಂಘಟನೆಗಳು ಮಹಾಧರಣಿಯಲ್ಲಿ ಭಾಗವಹಿಸಲಿದೆ: ಮಾಜಿ ಶಾಸಕ ವಸಂತ ಬಂಗೇರ

ಬೆಳ್ತಂಗಡಿ: ರಾಜ್ಯ ಸರಕಾರ ಸೌಜನ್ಯ ಪ್ರಕರಣದ ತನಿಖೆಗಾಗಿ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಬೇಕು.ಉಜಿರೆ,ಧರ್ಮಸ್ಥಳ ಭಾಗಗಳಲ್ಲಿ ನಡೆದಿರುವ ಅಸಹಜ ಸಾವುಗಳನ್ನು ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಗಷ್ಟ್ 28 ರಂದು ರಾಜ್ಯಮಟ್ಟದ ಚಲೋ ಬೆಳ್ತಂಗಡಿ ಮಹಾಧರರಣಿ ನಡೆಯಲಿದೆ ಎಂದು ಮಾಜಿ ಶಾಸಕ ಹೇಳಿದರು.

ಅವರು ಆಗಷ್ಟ್ 10 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಪತ್ರಿಗೋಷ್ಠಿಯಲ್ಲಿ ಮಾತಾನಾಡಿದರು.

ಸೌಜನ್ಯ ಪ್ರಕರಣ ನಡೆದ ಸಂದರ್ಭದಲ್ಲಿ ದೊಡ್ಡ ರೀತಿಯ ಪ್ರತಿಭಟನೆಗಳು ನಡೆದಿತ್ತು. ಜನಾಗ್ರಹವನ್ನು ಪರಿಗಣಿಸಿ ಅಂದಿನ ಸಿದ್ದರಾಮಯ್ಯ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು‌. ನ್ಯಾಯಲಯದ ತೀರ್ಪಿನ ನಂತರ ಜನತೆ ಸಿಬಿಐ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದು ಮತ್ತೆ ರಾಜ್ಯದ ಪೋಲೀಸ್ ಇಲಾಖೆಯ ವಿಶೇಷ ತನಿಖಾ ತಂಡ ತನಿಖೆ ನಡೆಸಲಿ ಎಂದು ಬಂಗೇರರು ಆಗ್ರಹಿಸಿದರು.

ಮುಗ್ಧ, ಬಡ ಹೆಣ್ಣು ಮಗಳು ಸೌಜನ್ಯಳಿಗೆ ನ್ಯಾಯ ಸಿಗಬೇಕು. ಸೌಜನ್ಯ ಪ್ರಕರಣದಲ್ಲಿ ಯಾರೂ ಯಾವತ್ತು ರಾಜಕೀಯ ಮಾಡಬಾರದು. ಬೆಳ್ತಂಗಡಿ ಚಲೋ ಮಹಾಧರಣಿಗೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಹಾಗೂ ದ.ಕ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ ಎಂದರು. ಈ ಸಂದರ್ಭ ಚಲೋ ಬೆಳ್ತಂಗಡಿ ಮಹಾ ಧರಣಿಯ ಪೋಸ್ಟರನ್ನು ಬಿಡುಗಡೆ ಗೊಳಿಸಲಾಯಿತು.

ಪತ್ರಿಗೋಷ್ಠಿಯಲ್ಲಿ ಕಾರ್ಮಿಕ ನಾಯಕರಾದ ಬಿ.ಎಮ್ ಭಟ್,ಡಿ.ವೈ.ಎಫ್.ಐ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ,ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ವಸಂತ ಬಿ.ಕೆ,ರಮೇಶ್ ಆರ್,ಸಿಪಿಎಮ್ ಜಿಲ್ಲಾ ಕಾರ್ಯದರ್ಶಿ ಯಾಧವ ಶೆಟ್ಟಿ, ಪ್ರಮುಖರಾದ ಜಯವಿಕ್ರಮ್ ಕಲ್ಲಾಪು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿಯಲ್ಲಿ 500 ಎಕ್ರೆ ಯಾಂತ್ರಿಕೃತ ಯಂತ್ರಶ್ರೀ ನಾಟಿಗೆ ಚಾಲನೆ

Suddi Udaya

ಗ್ರಾಮ ಪಂಚಾಯತಿ ಕಲಿಕಾ ಕೇಂದ್ರಗಳ ಯಶೋಗಾಥೆಗಳ ದಾಖಲೀಕರಣ ಕುರಿತು ತರಬೇತಿ: ಉಜಿರೆ – ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷರು, ಪಿಡಿಓ ಭಾಗಿ

Suddi Udaya

ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಸವಣಾಲುವಿನ ಹಿತ್ತಿಲಪೇಲ ನಿವಾಸಿಗಳು; ಸಂಪರ್ಕ ಕೊಂಡಿಯಾಗಿರುವ ನದಿಯನ್ನೇ ದಾಟದಂತೆ ಬ್ಯಾನರ್ ಹಾಕುವ ಮೂಲಕ ಅಧಿಕಾರಿಗಳ ದಿಗ್ಬಂಧನ

Suddi Udaya

ಲಾರಿ-ಕಾರು ಮಧ್ಯೆ ಅಪಘಾತ: ಕಾರು ನಜ್ಜುಗುಜ್ಜು

Suddi Udaya

ಸೌಜನ್ಯರವರ ಅತ್ಯಾಚಾರ ಪ್ರಕರಣ ಮರು ತನಿಖೆಗೆ ಆಗ್ರಹಿಸಿ: ಒಕ್ಕಲಿಗರ ಹೋರಾಟ ಸಮಿತಿಯಿಂದ ಮಂಗಳೂರಿನಲ್ಲಿ ಧರಣಿ

Suddi Udaya

ಡಿ.3: ಬೆಳ್ತಂಗಡಿ ಹಳೆಕೋಟೆ ಜೋರ್ಡನ್ ರಿವರ್ ವೆಲ್ ವ್ಯೂ ರೂಮ್ಸ್ & ಸೂಟ್ಸ್ ವಿಸ್ಕೃತ ಕಟ್ಟಡದ ಉದ್ಘಾಟನೆ

Suddi Udaya
error: Content is protected !!