24.4 C
ಪುತ್ತೂರು, ಬೆಳ್ತಂಗಡಿ
April 4, 2025
ಅಪರಾಧ ಸುದ್ದಿ

ಸೋಮಂತ್ತಡ್ಕ:ಅಂಗಡಿಯ ಶಟರ್ ತೆರೆದು ಅಂಗಡಿಯ ಒಳಗೆ ಡ್ರವರ್ ನಲ್ಲಿ ಇದ್ದ ರೂ.50 ಸಾವಿರ ನಗದು ಕಳವು

ಬೆಳ್ತಂಗಡಿ: ಮುಂಡಾಜೆ ಗ್ರಾಮದ ನಿವಾಸಿ ಪದ್ಮೇಶ್ ಕೆ ಎಸ್ ಎಂಬವರ ಸೋಮಂತ್ತಡ್ಕದ ಅಂಗಡಿಯ ಶಟರ್ ತೆಗೆದು ಅಂಗಡಿಯ ಒಳಗೆ ಡ್ರವರ್ ನಲ್ಲಿ ಇದ್ದ ರೂ.50 ಸಾವಿರ ನಗದನ್ನು ಕಳ್ಳರು ಕಳವು ಗೈದಿರುವುದಾಗಿ ಆ.10ರಂದು ಧಮ೯ಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.
ಪದ್ಮೇಶ್ ಅವರು ಮುಂಡಾಜೆ ಗ್ರಾಮದ ಸೊಮಂತ್ತಡ್ಕ ಎಂಬಲ್ಲಿ ದಿನಸಿ ಅಂಗಡಿಯನ್ನು ನಡೆಸಿಕೊಂಡಿದ್ದು, ಆ.9 ರಂದು ತನ್ನ ವ್ಯವಹಾರದ ಬಾಬ್ತು 50 ಸಾವಿರ ರೂ ಹಣವನ್ನು ತನ್ನ ಅಂಗಡಿಯ ಡ್ರಾವರನ್ನಲ್ಲಿಟ್ಟು ಬೀಗ ಹಾಕಿ ರಾತ್ರಿ 10 ಗಂಟೆ ಸಮಯಕ್ಕೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ಮರುದಿನ ಆ.10 ರಂದು ಎಂದಿನಂತೆ ಬೆಳಗ್ಗೆ 6.30ಕ್ಕೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಅಂಗಡಿಯ ಅರ್ಧ ಶೆಟರ್ ತೆರೆದಿರುವುದನ್ನು ಕಡು ಅಂಗಡಿಯನ್ನು ಪರಿಶೀಲಿಸಿದಾಗ ಡ್ರಾವರ್ ಬೀಗವನ್ನು ಕಳ್ಳರು ಯಾವುದೋ ಆಯುಧದಿಂದ ಮೀಟಿ ಅದರಲ್ಲಿದ್ದ ನಗದು ರೂ 50ಸಾವಿರವನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 55/2023 ಕಲಂ: 457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

Related posts

ಸ್ನೇಹಿತನ ಜೊತೆ ಉತ್ತರ ಪ್ರದೇಶಕ್ಕೆ ಹೋಗಿದ್ದ ಬೆಳ್ತಂಗಡಿ ಕಸಬಾ ಗ್ರಾಮದ ಚೌಕದಬೆಟ್ಟು ಡೀಕಯ್ಯನಾಪತ್ತೆ

Suddi Udaya

ಕಾಡು ಪ್ರಾಣಿಗಳನ್ನು ಹೆದರಿಸಲು ಕೋವಿಯಿಂದ ಹಾರಿಸಿದ ಗುಂಡು ತಾಗಿ ಗಂಭೀರ ಗಾಯ

Suddi Udaya

ನಿಷೇದಿತ ಮಾದಕ ವಸ್ತು ಗಾಂಜಾ ಸೇವಿಸಿ ಸಾವ೯ಜನಿಕ ಸ್ಥಳದಲ್ಲಿ ಅಸಭ್ಯವಾಗಿ ವತ೯ನೆ : ನಾಲ್ಕು ಮಂದಿಯ ಬಂಧನ

Suddi Udaya

ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಶಿಕ್ಷಕನ ವಿರುದ್ದ ದೂರು ದಾಖಲು

Suddi Udaya

ಧರ್ಮಸ್ಥಳ ಮುಂಡ್ರುಪಾಡಿಯಲ್ಲಿ ಬೈಕಿಗೆ ಲಾರಿ ಡಿಕ್ಕಿ : ಬೈಕ್ ಸವಾರ ಬೆಳ್ತಂಗಡಿ ಖಾಸಗಿ ಸವೆ೯ಯರ್ ಸಹಾಯಕ ಗುರುವಾಯನಕೆರೆ ಶಕ್ತಿನಗರ ನಿವಾಸಿ ಪ್ರಸಾದ್ ಶೆಟ್ಟಿ ಮೃತ್ಯು: ಸಹ ಸವಾರ ಖಾಸಗಿ ಸವೆ೯ಯರ್ ವಿಶ್ವನಾಥ್ ರಾವ್ ಗೆ ಗಾಯ

Suddi Udaya

ಆಕಸ್ಮಿಕವಾಗಿ ನದಿಗೆ ಬಿದ್ದು ಬಾಲಕ ಸಾವು

Suddi Udaya
error: Content is protected !!