23.5 C
ಪುತ್ತೂರು, ಬೆಳ್ತಂಗಡಿ
April 4, 2025
ಅಪರಾಧ ಸುದ್ದಿ

ಹಾಡು ಹಗಲೇ ಲಾಯಿಲದ ದೇಜಪ್ಪರ ಮನೆಗೆ ನುಗ್ಗಿದ ಕಳ್ಳರು: ರೂ.20 ಸಾವಿರ ನಗದು ಸಹಿತ ರೂ.40 ಸಾವಿರ ಮೌಲ್ಯದ ಚಿನ್ನಾಭರಣ ಕಳವು

ಬೆಳ್ತಂಗಡಿ : ಹಾಡು ಹಗಲೇ
ಲಾಯಿಲ ಗ್ರಾಮದ ನಿವಾಸಿ ದೇಜಪ್ಪ ಎಂಬವರ ಮನೆಗೆ ನುಗ್ಗಿದ ಕಳ್ಳರು ರೂ.20 ಸಾವಿರ ನಗದು ಸಹಿತ ಚಿನ್ನಾಭರಣ ಕಳವುಗೈದ ಘಟನೆ ಆ.10ರಂದು ವರದಿಯಾಗಿದೆ.
ಆ.10 ರಂದು ಬೆಳಿಗ್ಗೆ 8.30 ರಿಂದ ಸಂಜೆ 5.30ರ ಅವಧಿಯಲ್ಲಿ ದೇಜಪ್ಪರ ಮನೆಯಲ್ಲಿ ಯಾರು ಇಲ್ಲದ ವೇಳೆ ಯಾರೋ ಕಳ್ಳರು ಮನೆಯ ಬಲಬದಿ ಇರುವ ಸ್ಟೋರ್ ರೂಂ ನಿಂದ ಮರದ ಕಿಟಕಿಯನ್ನು ಯಾವುದೋ ಆಯುಧದಿಂದ ಮುರಿದು ಗೋಡ್ರೇಜ್ ನ ಬೀಗವನ್ನು ಅಲ್ಲಿಯೇ ಇಟ್ಟಿದ್ದ ಕೀಯಿಂದ ಲಾಕ್ ತೆಗೆದು ಗೊಡ್ರೇಜಿನಲ್ಲಿ ಇಟ್ಟಿರುವ ಸುಮಾರು ರೂ.20 ಸಾವಿರ ನಗದು ಮತ್ತು ಸುಮಾರು 8 ಗ್ರಾಂ ತೂಕದ ಚಿನ್ನಾಭರಣ ಅಂದಾಜು ಮೌಲ್ಯ ಸುಮಾರು 40ಸಾವಿರ ವನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವುದಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ.
. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 73/2023 ಕಲಂ;454,380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಪುತ್ತೂರಿನ ಮುರದಲ್ಲಿ ರೈಲು ಡಿಕ್ಕಿಯಾಗಿ ಮೃತಪಟ್ಟ ವ್ಯಕ್ತಿ: ನ್ಯಾಯತರ್ಪು ಪಾಂಡಿಬೆಟ್ಟು ನಿವಾಸಿ ಶಿವರಾಮ ಗೌಡ ಎಂದು ಗುರುತು ಪತ್ತೆ

Suddi Udaya

ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪ್ರಮುಖರು ಆಸ್ಪತ್ರೆಗೆ ಬೇಟಿ

Suddi Udaya

ಉಳಿ ಗ್ರಾಮದ ಪುಲ್ಲೇರಿ ಸತೀಶ್ ಪೂಜಾರಿಗೆ ಜೀವಾವಧಿ ಶಿಕ್ಷೆ : ಶ್ರಮಿಸಿದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನೆ

Suddi Udaya

ಕೋಳಿ ತ್ಯಾಜ್ಯದಿಂದ ಅಶುದ್ಧಿಯಾಗುತ್ತಿರುವ ಶಿಶಿಲದ‌ ” ಕಪಿಲೆ”

Suddi Udaya

ತೋಟಾತ್ತಾಡಿ:ಜುಗಾರಿ ಅಡ್ಡೆಗೆ ಪೊಲೀಸರ ದಾಳಿ

Suddi Udaya

ಬೆಳ್ತಂಗಡಿ: ಟೆಲಿಗ್ರಾಮ್ ಆಪ್ ಮೂಲಕ ಹಣ ವರ್ಗಾಹಿಸಿ ಮೋಸ: ಓಡಿಲ್ನಾಳ ನಿವಾಸಿ ಸುರೇಶ್ ನಾಯ್ಕ ರಿಗೆ ರೂ. 3.46 ಲಕ್ಷ ವಂಚನೆ

Suddi Udaya
error: Content is protected !!