September 6, 2026
ಅಪರಾಧ ಸುದ್ದಿ

ಮದ್ದಡ್ಕದಲ್ಲಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಬ್ಬರಿಗೆ ದ್ವಿಚಕ್ರ ವಾಹನ ಡಿಕ್ಕಿ :ಗಂಭೀರ ಗಾಯ

ಬೆಳ್ತಂಗಡಿ : ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಬ್ಬರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಆ.10ರಂದು ಮದ್ದಡ್ಕದಲ್ಲಿ ನಡೆದಿದೆ.

ಕುವ್ವೆಟ್ಟು ಗ್ರಾಮದ ನಿವಾಸಿ ಶ್ರೀಮತಿ ಖಾತಿಜ (44ವ) ಎಂಬವರು ಆ. 10ರಂದು ರಾತ್ರಿ ಕುವೆಟ್ಟು ಗ್ರಾಮದ ಮದ್ದಡ್ಕ ನೇರಳಕಟ್ಟೆ ಎಂಬಲ್ಲಿ ತನ್ನ ಅಕ್ಕ ಮೈಮುನ (55ವ)ರೊಂದಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಎ21ಎಕ್ಸ್‌4155ನೇ ದ್ವಿಚಕ್ರ ವಾಹನವನ್ನು ಅದರ ಸವಾರ ಖಾಲಿದ್‌ ರವರು ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಹಿಂದಿನಿಂದ ಇಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಖಾತಿಜ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 84/2023 ಕಲಂ: 279,337 ಭಾ ದಂ ಸಂ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಓ.ಟಿ.ಪಿ. ಪಡೆದು ಕೊಕ್ಕಡದ ಮಹಿಳೆಗೆ ರೂ.1.50ಲಕ್ಷ. ವಂಚನೆ

Suddi Udaya

ಮಗನಿಂದ ತಂದೆಯ ಕೊಲೆ ಯತ್ನ ಆರೋಪಿ ಮಗನನ್ನು ಬಂಧಿಸಿದ ಪೊಲೀಸರು

Suddi Udaya

ಬಳ್ಳಮಂಜದಲ್ಲಿ ನಡೆದ ಮನೆ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳ ಆರೋಪಿಗಳ ಬಂಧನ: ರೂ.23.67 ಲಕ್ಷದ ಸೊತ್ತುಗಳು ವಶಕ್ಕೆ

Suddi Udaya

ಪಿಕಫ್ ಚಾಲಕ ಸತೀಶ್ ಕುಲಾಲ್ ನೇಣು ಬಿಗಿದು ಆತ್ಮಹತ್ಯೆ

Suddi Udaya

ಜಾಗ ಮಾರಾಟದ ಅಗ್ರಿಮೆಂಟ್ ಮಾಡಿ ರೂ.45ಲಕ್ಷ ವಂಚನೆ; ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ ದಾಖಲು

Suddi Udaya

ಉಜಿರೆ ಕಾಲೇಜು ವಿದ್ಯಾರ್ಥಿ ವರ್ಷಿತ್ ಹೆಚ್.ಎಂ. ನಾಪತ್ತೆ

Suddi Udaya
error: Content is protected !!