July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ:ಕಾಂಗ್ರೆಸ್ ನಿಂದ ಸಂವಿಧಾನ ,ಪ್ರಜಾಪ್ರಭುತ್ವ ,ಶಿಷ್ಟಾಚಾರ ವಿರೋಧಿ ನಡವಳಿಕೆ. ರಾಜ್ಯದ ಮಂತ್ರಿಗಳ ಸರ್ವಾಧಿಕಾರಿ ಧೋರಣೆ, ಹಿರಿಯಕ್ಕನ ಚಾಳಿ ಮನೆ ಮಂದಿಗೆಂಬಂತೆ ಇದು ತಳಮಟ್ಟಕ್ಕೂ ತಲುಪುತ್ತಿದೆ: ವಿಧಾನಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಆರೋಪ

ಬೆಳ್ತಂಗಡಿ:ಕಾಂಗ್ರೆಸ್ ಆಡಳಿತಕ್ಕೆ ಬಂದು ಮೂರು ತಿಂಗಳು ತುಂಬುವ ಮೊದಲೇ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ,ಶಿಷ್ಟಾಚಾರ ವಿರೋಧಿ ನಡವಳಿಕೆಗೆ ಪರವಾನಿಗೆ ನೀಡುತ್ತಿದೆ ಎಂಬ ಭಾವನೆ ಜನ ಸಾಮಾನ್ಯರಲ್ಲಿ ವ್ಯಕ್ತವಾಗುತ್ತಿದೆ ಮಂತ್ರಿಗಳು ಅಧಿಕಾರಿಗಳನ್ನು ನಡೆಸುವ ರೀತಿ ನೀಡುವ ಬೆದರಿಕೆ ನ್ಯಾಯಯುತವಾಗಿ ಕೆಲಸ ಮಾಡಲು ಅವಕಾಶ ನೀಡದೆ ಭಯದಿಂದ ಕೆಲಸ ಮಾಡುವಂತಾಗಿದೆ ಎಂದು ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಹೇಳಿದರು. ಅವರು ಶುಕ್ರವಾರ ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರು. ರಾಜ್ಯದ ಮಂತ್ರಿಗಳು ಸರ್ವಾಧಿಕಾರಿ ಧೋರಣೆಯಿಂದ ಕೆಲಸ ಮಾಡುತ್ತಿದ್ದು ಹಿರಿಯಕ್ಕನ ಚಾಳಿ ಮನೆ ಮಂದಿಗೆಂಬಂತೆ ಇದು ತಳಮಟ್ಟಕ್ಕೂ ತಲುಪುತ್ತಿದೆ. ಎಲ್ಲಾ ಕಡೆ ಪ್ರಗತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು ಅಧಿಕಾರಿಗಳ ವರ್ಗಾವಣೆ ಅಮಾನತು ಬೆದರಿಕೆ ಮೂಲಕ ಅವರಿಂದ ಕೆಲಸ ಮಾಡಿಸಲಾಗುತ್ತಿದೆ ಎಂದರು. ಮೂಡಬಿದ್ರೆಯಇರವೈಲಿನಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ ಹಾಗೂ ನೂತನ ಪಂಚಾಯಿತಿ ಕಚೇರಿ ಕಟ್ಟಡದ ಉದ್ಘಾಟನೆ, ಬಂಟ್ವಾಳದ ಇರ್ವತ್ತೂರು ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ಸಂಕೀರ್ಣ ಘಟಕ ಲೋಕಾರ್ಪಣೆ ಕಾರ್ಯಕ್ರಮಗಳ ಆಮಂತ್ರಣಗಳನ್ನು ಮುದ್ರಿಸಿ, ಶಿಷ್ಟಾಚಾರ ಉಲ್ಲಂಘನೆ ಎಂಬ ವಿಚಾರದಲ್ಲಿ ಶಾಸಕರ ಗಮನಕ್ಕೆ ತರದೆ ಕಾರ್ಯಕ್ರಮಗಳನ್ನು ಮುಂದೂಡಲಾಗಿದ್ದು ಅಧಿಕಾರಿಗಳಿಗೆ ಅಮಾನತು ಶಿಕ್ಷೆ ನೀಡಲಾಗಿದೆ. ಅಮಾನತು ಶಿಕ್ಷೆ ಆ.14ರ ಒಳಗೆ ರದ್ದುಗೊಳಿಸದಿದ್ದಲ್ಲಿ,ದಕ ಜಿಲ್ಲೆಯ ಬಿಜೆಪಿ ಶಾಸಕರು ಡಿಸಿ ಕಚೇರಿ ಮುಂಭಾಗ ಧರಣಿ, ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿದರು.ವರ್ಗಾವಣೆ ದಂಧೆ ಎಲ್ಲ ಖಾತೆಯ ಸಚಿವರಿಂದ ನಡೆದಿರುವುದು ಜಗ ಜ್ಜಾಹೀರಾಗಿದೆ, ಗುತ್ತಿಗೆದಾರರಿಂದ ಕಮಿಷನ್ ಬಗ್ಗೆ ನೇರ ಆರೋಪ ವ್ಯಕ್ತವಾಗಿದೆ. ಸರಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ.ಶಾಸಕರ ಹುಕ್ಕು ಚ್ಯುತಿ ನಡೆಸುವ ಸರಕಾರಕೇಂದ್ರದ ಕಾಂಗ್ರೆಸ್ ಗೆ ಎ ಟಿ ಎಂ ಆಗಿದ್ದು,ಅಗತ್ಯ ಬಿಲ್ ಗಳನ್ನು ಪಾವತಿಸುತ್ತಿಲ್ಲ ಎಂದರು.ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯದರ್ಶಿ ಗಣೇಶ್ ಗೌಡ ನಾವೂರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಮಾರಿಗುಡಿ ಬಳಿ ದುರ್ನಾತ ಬೀರುವ ಒಳ ಚರಂಡಿ

Suddi Udaya

ಕೆಲ್ಲಗುತ್ತು ಶ್ರೀ ಸತ್ಯಸಾರಮುಪ್ಪಣ್ಯ ಮತ್ತು ಸ್ವಾಮಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ

Suddi Udaya

ಪುಂಜಾಲಕಟ್ಟೆ ಸ.ಪ್ರ.ದ ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಘದ ಉದ್ಘಾಟನೆ

Suddi Udaya

ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಜಂಟಿ ಸಂಸದೀಯ ಸಮಿತಿಯ ನಡೆಯನ್ನು ವಿರೋಧಿಸಿ ಮದ್ದಡ್ಕದಲ್ಲಿ ಬಿತ್ತಿಪತ್ರ ಪ್ರದರ್ಶನ

Suddi Udaya

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ವಿಧಿವಶ

Suddi Udaya

ಜು.5: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

Suddi Udaya
error: Content is protected !!