24.4 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಿಕ್ಷಾದಲ್ಲಿ ಬಿಟ್ಟು ಹೋದ ಬ್ಯಾಗ್ ನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ನಾಗರಾಜ್ ಮರಕಡ

ಮಡಂತ್ಯಾರು: ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ಸದಸ್ಯ ನಾಗರಾಜ ಮರಕಡ ರವರು ಬಳ್ಳಮಂಜದಿಂದ ಮಡಂತ್ಯಾರು ಕಡೆಗೆ ಬಾಡಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆಟೋದಲ್ಲಿದ್ದ ಪ್ರಯಾಣಿಕರು ಬ್ಯಾಗ್ ನ್ನು ಮರೆತು ಬಿಟ್ಟು ಹೋಗಿದ್ದು ಅದನ್ನು ವಾಪಸ್ಸು ಪ್ರಾಯಾಣಿಕರಿಗೆ ತಲುಪಿಸುವಲ್ಲಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಆಟೋ ಚಾಲಕ ನಾಗರಾಜ್ ಮರಕಡ ರವರು ಮರೆತು ಬಿಟ್ಟು ಹೋಗಿದ್ದ ಬ್ಯಾಗ್ ನ್ನು ಕಂಡು ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಪ್ರ ಕಾರ್ಯದರ್ಶಿ ರಮೇಶ್ ಕೆ ಕುದ್ರಡ್ಕ ಇವರಿಗೆ ಕರೆ ಮಾಡಿ ತಿಳಿಸಿದರು. ಎಲ್ಲಾ ವಾಟ್ಸಾಪ್ ಮೊಬೈಲ್ ಸಂದೇಶದಲ್ಲಿ ಬರೆದು ಗ್ರೂಪುಗಳಿಗೆ ಕಳುಹಿಸಲಾಯಿತು.

ನಂತರ ಆ ಬ್ಯಾಗಿನಲ್ಲಿ ಇದ್ದ ಸರ್ಕಾರಿ ಆಸ್ಪತ್ರೆ ಮಚ್ಚಿನ ಇಲ್ಲಿಯ ಮದ್ದಿನ ಚೀಟಿ ಕಂಡು ಆ ಚೀಟಿ ನ ಮೂಲಕ ಅಲ್ಲಿನ ಸಿಸ್ಟರ್ ಅನ್ನು ಫೋನ್ ಮೂಲಕ ಸಂಪರ್ಕಿಸಿ. ವಾರಸುದಾರರ ಸುನೀತ ಕಜೆ ಪಾಲೇದ್ ಇವರ ನಂಬರ್ ಪಡೆದು ಸಂಪರ್ಕಿಸಿ ಅವರಿಗೆ ವಿತರಿಸಲಾಯಿತು.

ಆಟೋ ಚಾಲಕ ನಾಗರಾಜ್ ಮರಕಡ ರವರಿಗೆ ಆಟೋ ಚಾಲಕರು ಮಾಲಕರ ಸಂಘ ಮಡಂತ್ಯಾರು ವಲಯ ಇವರ ಪ್ರಾಮಾಣಿಕತೆಗೆ ಅಭಿನಂದನೆಯನ್ನು ಸಲ್ಲಿಸಿದರು.

Related posts

ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಲೋಕಾರ್ಪಣೆ

Suddi Udaya

ಹತ್ಯಡ್ಕ: ನೆಕ್ಕರಡ್ಕ ನಿವಾಸಿ ಅನಸೂಯ ನಿಧನ

Suddi Udaya

ಕೊಕ್ಕಡ: ವೈದ್ಯನಾಥೇಶ್ವರ ರೆಸಿಡೆನ್ಸಿ ಬೋರ್ಡಿಂಗ್ & ಲಾಡ್ಜಿಂಗ್ ಗೋಲ್ಡನ್ ಹಬ್ ಮಲ್ಟಿ ಕ್ಯುಸಿನ್ ಫ್ಯಾಮಿಲಿ ಬಾ‌ರ್ ಮತ್ತು ರೆಸ್ಟೋರೆಂಟ್ ಉದ್ಘಾಟನೆ

Suddi Udaya

ಚಿತ್ರಕಲಾ ಗ್ರೇಡ್ ಪರೀಕ್ಷೆ: ಧರ್ಮಸ್ಥಳ ಶ್ರೀ ಮಂ.ಅ. ಪ್ರೌಢಶಾಲೆಗೆ ಶೇಕಡಾ 100 ಫಲಿತಾಂಶ

Suddi Udaya

ಕೊಕ್ಕಡ ಸೇವಾ ಮಂದಿರದಲ್ಲಿ ಬೇಸಿಗೆ ಶಿಬಿರದ ಸಮಾರೋಪ

Suddi Udaya

ಕೆಸಿಎಫ್ ಶಾರ್ಜಾ ಝೋನ್ 2024-2026 ನವ ಸಾರಥ್ಯ ಅಧ್ಯಕ್ಷರಾಗಿ ರಫೀಕ್ ತೆಕ್ಕಾರು

Suddi Udaya
error: Content is protected !!