September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೊಗ್ರು: ಮುಗೇರಡ್ಕ – ಅಲೆಕ್ಕಿ ಶ್ರೀ ರಾಮ ಸೇವಾ ಟ್ರಸ್ಟ್ ಇದರ ಪೋಷಕರ ಹಾಗೂ ಶಿಕ್ಷಕರ ಚಿಂತನಾ ಸಭೆ

ಮೊಗ್ರು : ಮೊಗ್ರು ಗ್ರಾಮದ ಮುಗೇರಡ್ಕ – ಅಲೆಕ್ಕಿ ಶ್ರೀ ರಾಮ ಸೇವಾ ಟ್ರಸ್ಟ್ ಇದರ ಪೋಷಕರ ಹಾಗೂ ಶಿಕ್ಷಕರ ಚಿಂತನಾ ಸಭೆ ಮಾ. 27 ರಂದು ಶಿಶುಮಂದಿರ ವಠಾರದಲ್ಲಿ ಜರುಗಿತು.

ಉದಯ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಅಲೆಕ್ಕಿ ಶ್ರೀರಾಮ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್.ಎನ್, ಸಂಚಾಲಕರಾದ ಅಶೋಕ್ ಎನ್. , ಶಿಶುಮಂದಿರದ ಹಿರಿಯ ವಿದ್ಯಾರ್ಥಿಗಳು, ಪೋಷಕರು, ಮಾತಾಜಿಯವರು, ಮಾತೃ ಮಂಡಳಿ, ಹಾಗೂ ಜೈ ಶ್ರೀರಾಮ್ ಮಹಿಳಾ ಸಂಘ ಅಲೆಕ್ಕಿ ಮುಗೇರಡ್ಕ ಇದರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಶಿಶುಮಂದಿರದಿಂದ ಮುಂದಿನ ಶೈಕ್ಷಣಿಕ ತರಗತಿಗೆ ತೆರಳುತ್ತಿರುವ ಚಿಣ್ಣರಿಗೆ ನೆನಪಿನ ಕಾಣಿಕೆ ನೀಡಿ, ಮುಂದಿನ ಭವಿಷ್ಯ ಉತ್ತಮವಾಗಿರಲೆಂದು ಹಾರೈಸಿ ಬೀಳ್ಕೊಡಲಾಯಿತು.
ಪ್ರಸವಕ್ಕಾಗಿ ತೆರಳುತ್ತಿರುವ ಶಿಶು ಮಂದಿರದ ಗೀತಾ ಮಾತಾಜಿ ಮತ್ತು ನವ್ಯ ಮಾತಾಜಿ ಯವರಿಗೆ ಸುಖ ಪ್ರಸವಕ್ಕಾಗಿ ಶುಭಕೋರಿದ ಸಮಿತಿ ಮತ್ತು ಮಾತೆಯರು ಬಾಗಿನ ನೀಡಿ ಹರಸಿದರು.
ಸಭೆಯಲ್ಲಿ ಹೆತ್ತವರ ಮಹತ್ವ ತಿಳಿಸಿ, ಅವರನ್ನು ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು.
ಶಿಶು ಮಂದಿರದ ಅನ್ನದಾಸೋಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸುತ್ತಿರುವ ದಾನಿಗಳಾದ ಧರ್ಣಪ್ಪ ಗೌಡ ನಿರುಂಬುಡ, ಶ್ರೀಮತಿ ಸರಿತಾ ನಿರುoಬುಡ, ಗಿರಿಧರ ಗೌಡ ನಿರುoಬುಡ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
1 ನೇ ತರಗತಿಯ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿರುವ ಮಕ್ಕಳ ಪೋಷಕರು ಶಿಶುಮಂದಿರಕ್ಕೆ ಗೋಡ್ರೇಜ್ ನ್ನು ಕೊಡುಗೆಯಾಗಿ ನೀಡಿದರು.


2024-25 ನೇ ಸಾಲಿನ ಮಾತೃ ಮಂಡಳಿಯ ಪದಾಧಿಕಾರಿಗಳು ಶಿಶುಮಂದಿರಕ್ಕೆ ದೀಪವನ್ನು ಉಡುಗೊರೆಯಾಗಿ ನೀಡಿದರು. .
ಪುಷ್ಪಲತಾ ಮಾತಾಜಿಯವರು ಸ್ವಾಗತಿಸಿ, ನಿರೂಪಿಸಿದರು. ಸಮಿತಿಯ ಸದಸ್ಯರಾದ ಭರತೇಶ್ ಪುಣ್ಕೆದಡಿಯವರು ಧನ್ಯವಾದವಿತ್ತರು.

Related posts

ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಹತೋಟಿಗೆ ಬಂದ ಬೆಂಕಿ

Suddi Udaya

ಉಜಿರೆ ಅನುಗ್ರಹ ಶಾಲಾ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭ

Suddi Udaya

ಜನರ ಬಳಿಗೆ ತಾಲೂಕು ಆಡಳಿತ : ನಾರಾವಿಯಲ್ಲಿ ಶಾಸಕರ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ ಆರಂಭ

Suddi Udaya

ಕಾಜೂರು ಮಹಿಳಾ ಶರೀಅತ್ ಕಾಲೇಜು ಪದವಿ ಪ್ರದಾನ ಸಮಾರಂಭ: 14 ಮಂದಿಗೆ ‘ಅರ್ರಾಹಿಮ’ ಪದವಿ ಪ್ರದಾನ

Suddi Udaya

ಉಜಿರೆ ಬ್ರಹ್ಮಕಲಶೋತ್ಸವ ಬೆಂಗಳೂರು ಸಮಿತಿ ಸಭೆ

Suddi Udaya

ನೇಲ್ಯಡ್ಕ ಸರ್ಕಾರಿ ಪ್ರೌಢಶಾಲೆಗೆ ಡ್ರಮ್ ಸೆಟ್ ಕೊಡುಗೆ

Suddi Udaya
error: Content is protected !!