ಉಜಿರೆ : ಎಸ್ ಡಿ ಎಮ್ ವಸತಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಹತ್ತಿರದ ಡ್ರಾಗನ್ ತೋಟಕ್ಕೆ ಶಿಕ್ಷಣ ಪ್ರವಾಸ ಕೈಗೊಂಡರು. ಗೌ. ಡಾ ಗೋಪಾಲಕೃಷ್ಣ ಕಾಂಚೋಡು ನಿವೃತ್ತ ಯೋಧರು ಇವರ ಡ್ರಾಗನ್ ತೋಟವನ್ನು
ಮಕ್ಕಳು ಕುತೂಹಲದಿಂದ ವೀಕ್ಷಿಸಿದರು.ಕೃಷಿ ಬಗ್ಗೆ ಮಾಹಿತಿ ತಂತ್ರಜ್ಞಾನ ಬಳಸಿ ಹೇಗೆ ಮಾಡಲಾಗುತ್ತದೆ ಎಂಬ ತಿಳಿಯುವ, ನೋಡುವ ಸಂತಸ ಅದರಲ್ಲು ವಿದೇಶಿ ಹಣ್ಣಿನ ಕೃಷಿ ತಮ್ಮ ಪಕ್ಕದಲ್ಲೆ ಇದೆ ಅದರ ಸೊಬಗನ್ನು ಕಣ್ ತುಂಬಿಕೊಳ್ಳವ ಕೃಷಿಯ ಕುಶಿಯಲ್ಲಿ ಬೆರೆಯುವ ಅವಕಾಶ ಬಹಳಷ್ಟು ವಿಚಾರಗಳನ್ನು ತಿಳಿಯುವ ತವಕ ಕೃಷಿಯ ಸಾಧನೆ ಅನುಭವಗಳನ್ನು ಗೋಪಾಲಕೃಷ್ಣ ಕಾಂಚೋಡು ಮಕ್ಕಳೊಂದಿಗೆ ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್, ಉಪ ಪ್ರಾಂಶುಪಾಲರು ಹಾಗೂ ಬೋಧಕ ವರ್ಗದವರು ಭಾಗವಹಿಸಿದರು.