ಕಕ್ಕಿಂಜೆ: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ MRPL”(ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆ ಮತ್ತು ಓಎನ್ ಜಿಸಿಯ ಅಂಗ ಸಂಸ್ಥೆ ಹಾಗೂ ಶ್ರೀ ಕೃಷ್ಣ ಆಸ್ಪತ್ರೆ, ಕಕ್ಕಿಂಜೆ – ಬೆಳ್ತಂಗಡಿ ತಾಲೂಕು,ದ ಕ.”ಬಿ.ವಿ.ಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ.”ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ” ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಇಂದು ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹರೀಶ್ ರಾವ್,ಎಂ. ಅಧ್ಯಕ್ಷರು ಶ್ರೀ ಮಹಾಗಣಪತಿ ದೇವಸ್ಥಾನ ಸೌತಡ್ಕ ನೆರವೇರಿಸಿ ಮಾತನಾಡಿ ಇಂತಹ ಉಚಿತ ಆರೋಗ್ಯ ತಪಾಸಣೆ ಶಿಬಿರವು ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಹಕಾರಿ, ಡಾ.ಮುರಳಿಕೃಷ್ಣ ಇರ್ವತ್ರಾಯರ ಆರೋಗ್ಯ ಕ್ಷೇತ್ರದ ಸಮಾಜಮುಖಿ ಕಾರ್ಯವು ಶ್ಲಾಘನೀಯ ಎಂದರು.
ಕಾರ್ಯಕ್ರಮ ಸ್ವಾಗತಿಸಿ ಮಾತನಾಡಿದ ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ ಮುರಳಿಕೃಷ್ಣ ಇರ್ವತ್ರಾಯ ಶಿಬಿರದ ಸೌಲಭ್ಯಗಳು ಮತ್ತು ಆರೋಗ್ಯ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ ರುಡಾಲ್ಫ್ ನೊರೊನ್ಹಾ,ಜನರಲ್ ಮ್ಯಾನೇಜರ್ (CC), MRPL ಮಂಗಳೂರು ಇವರು ಮಾತನಾಡಿ ಇಂತಹ ಸಾಮಾಜಿಕ ಕಳಾಕಳಿ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತದೆ ಸಾರ್ವಜನಿಕರು ಇದರ ಸಂಪೂರ್ಣ ಪ್ರಯೋಜನ ಪಡೆದಕೊಳ್ಳಬೇಕು ಎಂದರು,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಓದಗಿಸುವ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರೆ.ಫಾ. ಜೋಸ್ ಪೂವತಿಂಕಲ್,ವಿಕಾರ್ – ಸಂತ ಅಂತೋನಿ ಚರ್ಚ್, ತೋಟತ್ತಾಡಿ,ಕಾರ್ಯಕ್ರಮಕ್ಕೆ ಶುಭ ಹಾರೈಸಿದರು,ಕಾರ್ಯಕ್ರಮದಲ್ಲಿ ಜೆ ಎಚ್ ಅಬುಬಕ್ಕರ್ ಸಿದ್ದಿಕ್,ಪ್ರಧಾನ ಕಾರ್ಯದರ್ಶಿ ಕಾಜೂರು ದರ್ಗಾ ಶರಿಫ್,ಶ್ರೀಮತಿ ವಸುಧಾ ಎಂ.ಆರ್.ಪಿ.ಎಲ್ ಮಂಗಳೂರು,ಡಾ.ವಂದನಾ ಎಂ ಇರ್ವತ್ರಾಯ ವೈದ್ಯಕೀಯ ಅಧೀಕ್ಷಕರು ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ, ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತಾಧಿಕಾರಿ ಜ್ಯೋತಿ ವಿ ಸ್ವರೂಪ್, ವೈದ್ಯಾಧಿಕಾರಿಗಳಾದ ಡಾ.ಅಲ್ಬಿನ್ ಜೋಸೆಫ್, ಡಾ.ಶಶಿಕುಮಾರ್,ಡಾ.ಮದನ್, ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಸಾರ್ವಜನಿಕರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ 2023-24 ನೇ ಸಾಲಿನ ರಿಯಾಯಿತಿ ದರದ ಚಿಕಿತ್ಸೆ ಓದಗಿಸುವ ನಿಟ್ಟಿನಲ್ಲಿ ಉಚಿತ ಶ್ರೀ ಕೃಷ್ಣ ಆರೋಗ್ಯ ಕಾರ್ಡ್ ವಿತರಣೆ ನಡೆಯಿತು.ಡಾ.ವಂದನಾ ಎಂ ಇರ್ವತ್ರಾಯ ಧನ್ಯವಾದವಿತ್ತರು.