24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ ಅಮೃತ ಗ್ರಾ. ಪಂ. ಹಾಗೂ ಅಮೃತ ಸರೋವರದಲ್ಲಿ ಸ್ವಾತಂತ್ರೋತ್ಸವ ಆಚರಣೆ: ನಿವೃತ್ತ ಸೈನಿಕರಿಗೆ ಗೌರವಾರ್ಪಣೆ

ಕೊಕ್ಕಡ ಅಮೃತ ಗ್ರಾಮಪಂಚಾಯತ್ ನಲ್ಲಿ ಸ್ವಾತಂತ್ರೋತ್ಸವ ಧ್ವಜಾರೋಹಣವನ್ನು ನಿವೃತ್ತ ಸೈನಿಕರು ಮುಂಡೂರುಪಲಿಕೆಯ ನಾಗೇಶ್ ರವರು ನೆರವೇರಿಸಿ ಶುಭ ಹಾರೈಸಿದರು.

ಬಳಿಕ ಅಮೃತ ಪಂಚಾಯತ್ ಅಮೃತ ಸರೋವರದಲ್ಲಿ ಧ್ವಜಾರೋಹಣವನ್ನು ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ನೆರವೇರಿಸಿದರು.

ಈ ಸಂದರ್ಭ ನಿವೃತ್ತ ಸೈನಿಕರದ ನಾಗೇಶ್ ರವರನ್ನು ಹಾಗೂ ನಿವೃತ್ತ ಸೈನಿಕರು ಕೊಕ್ಕಡ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ರವರನ್ನು ಪಂಚಾಯತ್ ವತಿಯಿಂದ ಗೌರವಿಸಲಾಯಿತು.

ನಿವೃತ್ತ ಸೈನಿಕ ನಾಗೇಶರವರು ಮಾತನಾಡಿ ಗ್ರಾಮದ ಸರ್ವೋತೋಮೂಖ ಅಭಿವೃದ್ಧಿ ಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ನುಡಿದರು.

ಪಂಚಾಯತ್ ಅಧ್ಯಕ್ಷರು ಮಾತನಾಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷ ಕುಶಾಲಪ್ಪ ಪುಡಿಕೆತ್ತುರ್, ಪಂಚಾಯತ್ ಉಪಾಧ್ಯಕ್ಷರು ಪ್ರಭಾಕರ್ ಗೌಡ, ನಿಕಟಪೂರ್ವ ಅಧ್ಯಕ್ಷರು ಯೋಗೀಶ್ ಆಳಂಬಿಲ, ಉಪಾಧ್ಯಕ್ಷರು ಶ್ರೀಮತಿ ಪವಿತ್ರ, ಸದಸ್ಯರುಗಳಾದ ಜಗದೀಶ್, ಪುರಷೋತ್ತಮ, ವಿಶ್ವನಾಥ್, ಶರತ್ ಕುಮಾರ್.,ವನಜಾಕ್ಷಿ , ಪಂಚಾಯತ್ ಕಾರ್ಯದರ್ಶಿ, ಸಿಬ್ಬಂದಿಗಳು ಉಪಸ್ಥಿತರಿದ್ದರು..

ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸ್ವಾಗತಿಸಿ ವಂದಿಸಿದರು.

Related posts

ಮುಂಡಾಜೆ: ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಉದ್ಘಾಟನೆ

Suddi Udaya

ನಡ: ರಸ್ತೆಯ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಹೊಡೆದಾಟ: ಹಲವರು ಗಾಯ

Suddi Udaya

ಕುವೆಟ್ಟು: ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ವಿದ್ಯುತ್ ಕಂಬ: ಲಾರಿ ಚಾಲಕ ಹಾಗೂ ಎರಡು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರು

Suddi Udaya

ಬೆಳಾಲು ಯಕ್ಷ ಮಾಣಿಕ್ಯ ಕಲಾ ಸಂಘ ಉದ್ಘಾಟನೆ

Suddi Udaya

ರಾಜ್ಯ ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ಜಯರಾಜ್ ಸಾಲಿಯಾನ್ ಹಾಗೂ ರಾಜ್ಯ ಸದಸ್ಯರಾಗಿ ಅನಿಲ್ ಕುಮಾರ್ ಯು ಆಯ್ಕೆ

Suddi Udaya

ಶಿರ್ಲಾಲು: ವಿದ್ಯುತ್ ಅವಘಡದಿಂದ ಹಿತ್ತಿಲು ಪರಿಸರದಲ್ಲಿ ಬೆಂಕಿ

Suddi Udaya
error: Content is protected !!