27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಮಿದುಳಿನ ರಕ್ತಸ್ರಾವ: ಮಹಿಳೆ ಮೃತ್ಯು

ಬೆಳ್ತಂಗಡಿ:ಮಿತ್ತಬಾಗಿಲು ಗ್ರಾಮದ ಕಿಲ್ಲೂರು ಸಮೀಪದ ಗುತ್ತಿಗೆಬೆಟ್ಟು ನಿವಾಸಿ ಶ್ರೀಮತಿ ಶಾರದಾ(40ವ) ಅವರು ಮಿದುಳಿನ ರಕ್ತಸ್ರಾವ ಒಳಗಾಗಿ ಮೃತ ಪಟ್ಟ ಘಟನೆ ಆ.14ರಂದು ವರದಿಯಾಗಿದೆ.
ಮಿದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದ ಅವರು ಶಸ್ತ್ರಚಿಕಿತ್ಸೆ ಬಳಿಕ ತನ್ನ ಸಹೋದರನ ಮನೆಯಾದ ಬಿಸಿರೋಡ್‌ನಲ್ಲಿ ವಾಸ್ತವ್ಯವಿದ್ದು, ಅಲ್ಲಿಯೇ ನಿಧನರಾರರೆಂದು ವರದಿಯಾಗಿದೆ. ಇವರ ಪತಿ ಗೋಪಾಲ ಮೂಲ್ಯ ಕೂಡ ಮೂರು ವರ್ಷಗಳ ಹಿಂದೆ ಕಾಯಿಲೆಯಿಂದ ಮೃತ ಪಟ್ಟಿದ್ದರು. ಮೃತ ಶಾರದಾ ಅವರು ಆಶಾ ಕಾರ್ಯಕರ್ತೆಯಾಗಿ ,
ಬಂಗಾಡಿ ಸಹಕಾರಿ ಸಂಘದಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದರು. ಮೃತರು ಪುತ್ರ ಹಾಗೂ ಪುತ್ರಿ ಬಂಧು-ವರ್ಗದವರನ್ನು ಅಗಲಿದ್ದಾರೆ. ತೀರಾ ಕಷ್ಟದಲ್ಲಿ ಜೀವನ ಸಾಗಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದ ಶಾರದವರ ಸಾವಿನಿಂದ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗಿದೆ.

Related posts

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಉಜಿರೆ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಲ್ಲಿ ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ಜೋಡುಸ್ಥಾನ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಯುಗಂಧರ್, ಕಾರ್ಯದರ್ಶಿ ಚೇತನ್

Suddi Udaya

ಜಾನಪದ ಕಡಲೋತ್ಸವ: ಜಿಲ್ಲಾ ಪರಿಷತ್ ಪ್ರಶಸ್ತಿಗೆ ಕೊಕ್ಕಡದ ಕಿಟ್ಟ ಮಲೆಕುಡಿಯ ರವರು ಆಯ್ಕೆ

Suddi Udaya

ಕ್ಯಾಂಪ್ಕೊ ವತಿಯಿಂದ ಸಹಾಯಧನ ವಿತರಣೆ

Suddi Udaya

ಸುಲ್ಕೇರಿ: ಶ್ರೀ ನೇಮಿನಾಥ ಸ್ವಾಮಿ ಬಸದಿಯ ನೂತನ ಗೋಪುರದ ಶಿಲಾನ್ಯಾಸ

Suddi Udaya

ಶಿಬಾಜೆ: ಪೆರ್ಲ ಸುಮತಿ ಹೆಬ್ಬಾರ್ ನಿಧನ

Suddi Udaya
error: Content is protected !!