29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮುಗುಳಿ ಸ.ಹಿ.ಪ್ರಾ ಶಾಲೆಗೆ ರವಿಚಂದ್ರ ಗೌಡ ದಂಪತಿಯಿಂದ ಧ್ವಜಸ್ತಂಭ ಕೊಡುಗೆ

ಬೆಳ್ತಂಗಡಿ : ಸ.ಹಿ.ಪ್ರಾ..ಶಾಲೆ ಮುಗುಳಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ನಿವೃತ್ತ ಸೈನಿಕರು ಹಾಗೂ ಎಸ್.ಬಿ.ಐ ಉದ್ಯೋಗಿ ದಾಸರಬೆಟ್ಟು ರವಿಚಂದ್ರ ಗೌಡ ಮತ್ತು ಶ್ರೀಮತಿ ಶಾರದಾ ದಂಪತಿಗಳು ಶಾಲೆಗೆ ಧ್ವಜಸ್ಥಂಭವನ್ನು ಕೊಡುಗೆಯಾಗಿ ನೀಡಿ ಅದರ ಉದ್ಘಾಟನೆಯನ್ನು ನೆರವೇರಿಸಿ, ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಈ ಸಂದರ್ಭ ಮಾತನಾಡಿದ ರವಿಚಂದ್ರ ಗೌಡರವರರು ಸ್ವಾತಂತ್ರ್ಯೋತ್ಸವದ ಮಹತ್ವವನ್ನು ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಮುಗುಳಿ ನಾರಾಯಣ್ ರಾವ್, ಹಳೆವಿದ್ಯಾರ್ಥಿ ಸನತ್ ಕುಮಾರ್ ಜೈನ್ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭ ಧ್ವಜಸ್ತಂಭ ಕೊಡುಗೆ ನೀಡಿದ ರವಿಚಂದ್ರ ಗೌಡ ಹಾಗೂ ಶ್ರೀಮತಿ ಶಾರದಾ ದಂಪತಿಯನ್ನು ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಲೀನಾ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಸವಿತಾ ಕೆ. ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿಯರಾದ ಶಶಿಕಲಾ, ಸ್ವಾತಿ ಧನ್ಯವಾದವಿತ್ತರು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಬಿಸಿಯೂಟ ಸಿಬ್ಬಂದಿಗಳು, ಅಂಗನವಾಡಿ ಶಿಕ್ಷಕಿ ಪದ್ಮಾವತಿ ಹಾಗೂ ಪೋಷಕರು, ಊರವರು ಉಪಸ್ಥಿತರಿದ್ದರು.

Related posts

ಕುದ್ಯಾಡಿ ಸ. ಕಿ. ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಬೆಳ್ತಂಗಡಿ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ನಾಗೇಶ್ ಕದ್ರಿ ನೇಮಕ

Suddi Udaya

ಕೊಯಮತ್ತೂರಿನ ರಾಷ್ಟ್ರೀಯ ಹೊರೆಕಾ ಸಮ್ಮೇಳನದಲ್ಲಿ ನಿಡ್ಲೆಯ ಅಗ್ರಿಲೀಫ್ ಸಂಸ್ಥೆ: ಸಮ್ಮೇಳನದಲ್ಲಿ ಅಗ್ರಿಲೀಫ್ ಸಂಸ್ಥೆಯ ಜೈವಿಕ ವಿಘಟನೀಯ ಮತ್ತು ಅಡಿಕೆ ಹಾಳೆತಟ್ಟೆಗಳ ಪ್ರದರ್ಶನ

Suddi Udaya

ಗುರುವಾಯನಕೆರೆ: ಜ್ಞಾನ ವಿಕಾಸ ಕೇಂದ್ರಗಳ ಸದಸ್ಯರ ಅಧ್ಯಯನ ಪ್ರವಾಸ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ

Suddi Udaya

ಉಜಿರೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya
error: Content is protected !!