25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿವರದಿಶಾಲಾ ಕಾಲೇಜು

ತುಳು ಲಿಪಿ ಆನ್-ಲೈನ್ ಪರೀಕ್ಷೆ: ಪಂಚಮಿ ಬಿ.ಆರ್ ಶತಃ ಪ್ರತಿಶತ ಸಾಧನೆ

ಬೆಳ್ತಂಗಡಿ: ತುಳುನಾಡು ಸಹಿತ ವಿಶ್ವದ ನಾನಾ ಭಾಗಗಳಲ್ಲಿ ಇರುವ ತುಳು ಭಾಷಿಕರಲ್ಲಿ ತುಳು ಲಿಪಿಯ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸುವ ಉದ್ದೇಶದಿಂದ ‘ಜೈ ತುಳುನಾಡು (ರಿ.) ಸಂಘಟನೆ ನಡೆಸುವ ತುಳು ಲಿಪಿ ಆನ್-ಲೈನ್ ತರಗತಿಯಲ್ಲಿ ಭಾಗವಹಿಸಿ ಬಳಿಕ ನಡೆದ ಆನ್-ಲೈನ್ ಪರೀಕ್ಷೆಯಲ್ಲಿ ಪಂಚಮಿ ಬಿ.ಆರ್. 100 ಕ್ಕೆ 100 ಅಂಕಗಳನ್ನು ಗಳಿಸುವ ಮೂಲಕ ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ಧಾರವಾಡದಲ್ಲಿರುವ JJS ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ನಲ್ಲಿ 8ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಇವರು ಕಾಸರಗೂಡಿನ ದೇಲಂಪಾಡಿ ಗ್ರಾಮದ ಬಂದ್ಯಡ್ಕ ರಾಜೇಶ್ ಹಾಗೂ ಚಿತ್ರಕಲಾ ದಂಪತಿಯ ಪುತ್ರಿ.

ಕಳೆದ ವರ್ಷ ನವಂಬರ್ 22ರಂದು ತುಳು ಲಿಪಿ ತರಗತಿಯನ್ನು ಆನ್ ಲೈನ್ ಮುಖಾಂತರ ಜೈ ತುಳುನಾಡು (ರಿ) ಸಂಘಟನೆ ಆಯೋಜಿಸಿತ್ತು. ಸುಮಾರು 3-4 ತಿಂಗಳುಗಳ ಕಾಲ ನಡೆದ ಈ ತರಗತಿಯಲ್ಲಿ ಮೂವರು ಶಿಕ್ಷಕರು ತುಳು ವರ್ಣಮಾಲೆ, ಕಾಗುಣಿತ ಮತ್ತು ಅಂಕೆಗಳ ಪಾಠವನ್ನು ಹೇಳಿಕೊಡುತ್ತಿದ್ದರು.

ಬಳಿಕ, ಶಬ್ದಗಳು, ವಾಕ್ಯ ರಚನೆ, ತುಳುವಿನಿಂದ ಕನ್ನಡಕ್ಕೆ ಬರೆಯೋದು, ಕನ್ನಡದಿಂದ ತುಳು ಭಾಷೆಯ ಲಿಪಿಯಲ್ಲಿ ಬರೆಯೋದನ್ನು ಶಿಕ್ಷಕರು ದಿನನಿತ್ಯ ಹೇಳಿಕೊಡುತ್ತಿದ್ದರು.

ಈ ಪಾಠವೆಲ್ಲಾ ಮುಗಿದ ಬಳಿಕ, ಜುಲೈ. 23ರಂದು ಜೈ ತುಳುನಾಡು ಸಂಘಟನೆ ಮುಖಾತರ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗಳ ಫಲಿತಾಂಶ ಆಗಸ್ಟ್ 15ರಂದು ಬಂದಿದ್ದು ಇದರಲ್ಲಿ ಪಂಚಮಿ ಬಿ ಆರ್ 100ಕ್ಕೆ 100 ಅಂಕಗಳನ್ನು ತೆಗೆದುಕೊಂಡು ಮೊದಲ ಸ್ಥಾನ ಪಡೆದಿಕೊಂಡಿದ್ದಾರೆ. ಕರ್ನಾಟಕ ತುಳು ಅಕಾಡೆಮಿ ಶೀಘ್ರದಲ್ಲೇ ಪ್ರಮಾಣ ಪತ್ರವನ್ನು ವಿತರಿಸಲಿದೆ.

Related posts

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ- ರಕ್ಷಕ ಸಂಘದ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ: ದ.ಕ.ಜಿ.ಪ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ಕಮಲ್ ತೇಜು ರಾಜಪೂತ್ ನೇಮಕ

Suddi Udaya

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಭೇಟಿ

Suddi Udaya

ಅಪರಿಚಿತ ವ್ಯಕ್ತಿ ಮೃತ್ಯು: ವಿಳಾಸ ಪತ್ತೆಗಾಗಿ ಬೆಳ್ತಂಗಡಿ ಪೊಲೀಸರ ಮನವಿ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಬೇಸಿಗೆ ಶಿಬಿರ ಯಶಸ್ವಿ ಸಂಪನ್ನ

Suddi Udaya
error: Content is protected !!