April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿಶಿಲ : ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರ ಸಿರಿ ಧಾನ್ಯ ಬಳಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ

ಶಿಶಿಲ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ .ಟ್ರಸ್ಟ್ ಬೆಳ್ತಂಗಡಿ ತಾಲೂಕು ಅರಸಿನಮಕ್ಕಿ ವಲಯದ ಶಿಶಿಲ ಒಕ್ಕೂಟ ಸಮುದಾಯ ಭವನದಲ್ಲಿ ಶಿಶಿಲ ಹೇವಾಜೆ ಬೂಡುದಮಕ್ಕಿ ಪೆರ್ಲ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರ ಸಿರಿ ಧಾನ್ಯ ಬಳಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆ.16 ರಂದು ನಡೆಸಲಾಯಿತು .

ಕಾರ್ಯಕ್ರಮದ ಉದ್ಘಾಟನೆಯನ್ನು ಶಿಶಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಮೂಡೆತ್ತಾಯರವರು ಉದ್ಘಾಟನೆ ಮಾಡಿ ಶುಭ ಹಾರೈಸಿದರು.

ಬರೋಡಾ ಬ್ಯಾಂಕ್ ಮೆನೇಜರ್ ರಾಕೇಶ್ ಪಿ ನಾಯ್ಕ್ ,ಸಿ.ಎ ಬ್ಯಾಂಕ್ ಮೆನೇಜರ್ ರಂಜಿತ್ ಶೆಟ್ಟಿ,ನಿರ್ದೇಶಕರು ಶ್ರೀಮತಿ ತಾರಾರವರು ಕಾರ್ಯಕ್ರಮಕ್ಕೆ ಸುಭ ಹಾರೈಸಿದರು.ವಲಯ ಮೇಲ್ವಿಚಾರಕರಾದ ಶಶಿಕಲಾರವರು ಜ್ನಾನವಿಕಾಸ ಕಾರ್ಯಕ್ರಮದ ಹುಟ್ಟು ಹಾಗೂ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸುತ್ತಾ ಸಿರಿ ಧಾನ್ಯ ಬಳಕೆ ಮಾಡಿ ಆರೋಗ್ಯ ವೃದ್ದಿಸಿಕೊಳ್ಳುವಂತೆ ಮಹಿಳೆಯರು ಸೇವಿಸುವ ಪೌಷ್ಟಿಕ ಆಹಾರ ಸೇವನೆ ವಿಧಾನದ ಬಗ್ಗೆ ಮಾಹಿತಿ ನೀಡಿದರು.ಸಿರಿಧಾನ್ಯ ಮಾರುಕಟ್ಟೆ ಅಧಿಕಾರಿಯವರಾದ ವಿವಿಧ ಸಿರಿ ಧಾನ್ಯಗಳ ಪರಿಚಯ ಮಾಡುವುದರೊಂದಿಗೆ ನವಣೆ, ಊದಲು , ಕೊರಳು, ಸಜ್ಜೆ, ಸಾಮೆ ,ರಾಗಿ ಬಳಕೆ ವಿಧಾನ ಇವುಗಳಿಂದ ತಯಾರಿಸುವ ವಿವಿಧ ತಿಂಡಿಗಳ ಬಗ್ಗೆ ಬಳಕೆ ವಿಧಾನ & ರೋಗನಿರೋಧಕ ಶಕ್ತಿ ಬಗ್ಗೆ ಮಾಹಿತಿ ನೀಡಿದರು..

ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಸಮನ್ವಯಧಿಕಾರಿಯವರಾದ ಮಧುರಾರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಪೆರ್ಲ ಸೇವಾಪ್ರತಿನಿಧಿ ಅರುಣಾರವರು ಸ್ವಾಗತಿಸಿ ಹೇವಾಜೆ ಸೇವಾಪ್ರತಿನಿಧಿ ರಶ್ಮಿತಾರವರು ಧನ್ಯವಾದ ನೀಡಿದರು ಶಿಶಿಲ ಸೇವಾಪ್ರತಿನಿಧಿ ಗಾಯತ್ರಿ ಉಪಸ್ಥಿತರಿದ್ದರು .

Related posts

ಮುಂಡಾಜೆ: ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ

Suddi Udaya

ಕಳ್ಳತನ ಪ್ರಕರಣವನ್ನು ಭೇದಿಸಿದ ಬಂಟ್ವಾಳ ಪೊಲೀಸರು: ಆರೋಪಿ ತೆಕ್ಕಾರು ನಿವಾಸಿ ಮಹಮ್ಮದ್ ಫಾರೂಕ್ ಮತ್ತು ಕಳವುಗೈದ ನಗದು ವಶ

Suddi Udaya

ಪಡ್ಪು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಕಳಿಯ ಬದಿನಡೆ ದೈವಗಳಿಗೆ ವಾರ್ಷಿಕ ನೇಮೋತ್ಸವ

Suddi Udaya

ಶಿಬಾಜೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಅಲ್ಪಸಂಖ್ಯಾತ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ