30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದಲ್ಲಿ ಆಟಿಕೋಲ: ನೂರಾರು ಭಕ್ತರಿಂದ ಶ್ರೀ ದೈವದ ದರ್ಶನ, ವಿಶೇಷ ಸೇವೆ

ಪೆರಿಂಜೆ : ಇತಿಹಾಸ ಪ್ರಸಿದ್ಧ ಪೆರಿಂಜೆಯ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ಮೂಲದೈವಸ್ಥಾನದಲ್ಲಿ ಆ.17 ಸಿಂಹ ಸಂಕ್ರಮಣದಂದು ಸಂಜೆ ಶ್ರೀ ದೈವದ ಆಟಿಕೋಲ ವಿಜೃಂಭನೆಯಿಂದ ಜರಗಿತು.

ಬೆಳಿಗ್ಗೆ ಕ್ಷೇತ್ರದಲ್ಲಿ ಸಿಂಹ ಸಂಕ್ರಮಣದ ಆಚರಣೆ, ಹೂವಿನ ಪೂಜೆ ಮಧ್ಯಾಹ್ನ ಅನ್ನ ಸಂತರ್ಪಣೆ ಜರಗಿತು. ಸಂಜೆ ಜರಗಿದ ಆಟಿಕೋಲದಲ್ಲಿ ನೂರಾರು ಮಂದಿ ಭಕ್ತರು ಶ್ರೀ ದೈವದ ದರ್ಶನ ಪಡೆದರು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ತುಲಾಭಾರ ಸೇವೆ ನಡೆಯಿತು.


ಕ್ಷೇತ್ರದ ಅನುವಂಶೀಯ ಆಡಳಿತದಾರರಾದ ಎ. ಜೀವಂಧರ್ ಕುಮಾರ್ ಎಲ್ಲರನ್ನು ಸ್ವಾಗತಿಸಿದರು. ಕ್ಷೇತ್ರ ಪ್ರಧಾನ ಅರ್ಚಕರಾದ ವೇ|ಮೂ| ರಾಮದಾಸ ಅಸ್ರಣ್ಣರು ವೈದಿಕ ವಿಧಾನಗಳನ್ನು ನೆರವೇರಿಸಿದರು. ಗುತ್ತುಬರ್ಕೆಯವರು, ವಿಕಾಸ್ ಜೈನ್ ಬಾಲ್ನಗುತ್ತು, ವಿಕಾಸ್ ಜೈನ್ ಬಾಲ್ನಗುತ್ತು ಹಾಗೂ ಗುರಿಕಾರರು ಉಪಸ್ಥಿತರಿದ್ದರು.

Related posts

ನ.24: ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ, ಮಹಿಳಾ ಹಾಗೂ ಯುವ ಬಂಟರ ವಿಭಾಗದ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ವಿಶಾಲ್ ಹೆಗ್ಡೆ ಆಯ್ಕೆ

Suddi Udaya

ಅರಸಿನಮಕ್ಕಿ: ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡನಾಟಿ ಕಾರ್ಯಕ್ರಮ

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಂಭ್ರಮದ ಸ್ವಾತಂತ್ರ್ಯ

Suddi Udaya

ಓಡಿಲ್ನಾಳ: ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾರದೋತ್ಸವ: ಧಾರ್ಮಿಕ ಸಭೆ

Suddi Udaya

ಕುಂಟಿನಿ ಮದ್ರಸದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!