24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಿರ್ವಹಣಾ ತರಬೇತಿ

ಉಜಿರೆ: ರೋಗಿ ತಾನೇ ಉಸಿರಾಡಲು ಆಗದ ಗಂಭೀರವಾದ ಅನಾರೋಗ್ಯದ ಸಂದರ್ಭದಲ್ಲಿ ಕೃತಕ ಉಸಿರಾಟದ ಅನಿವಾರ್ಯತೆ ಇರುತ್ತದೆ. ಯಾಂತ್ರಿಕ ವಾತಾಯನವು (ವೆಂಟಿಲೇಟರ್) ತುರ್ತು ಪರಿಸ್ಥಿಯಲ್ಲಿ ರೋಗಿಯ ಜೀವ ಉಳಿಸಬಲ್ಲದು. ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳಲ್ಲಿ ವೆಂಟೆಲೇಟರ್ ಅತೀ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ಈ ಉದ್ದೇಶದಿಂದ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಿರ್ವಹಣೆಯ ತರಬೇತಿ ಆಯೋಜಿಸಲಾಗಿದೆ ಎಂದು ನಿರ್ದೇಶಕ ಎಂ. ಜನಾರ್ದನ್ ಹೇಳಿದರು.


ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ 9 ಹಾಸಿಗೆಗಳ ಸುಸಜ್ಜಿತ ಐಸಿಯು ಹಾಗೂ 4 ವೆಂಟಿಲೇಟರ್‌ಗಳನ್ನು ಹೊಂದಿದ್ದು, ಡಾ. ಡಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಇತ್ತೀಚೆಗೆ ಹೊಸ ತಂತ್ರಜ್ಞಾನ ಹೊಂದಿರುವ 29 ಲಕ್ಷ ಮೌಲ್ಯದ 2 ಬಿಪಿಎಲ್ ಎಲಿಸಾ-600 ವೆಂಟಿಲೇಟರ್‌ಗಳನ್ನು ಅಳವಡಿಸಲಾಗಿದೆ. ಒಟ್ಟು 6 ವೆಂಟಿಲೇಟರ್‌ಗಳನ್ನು ಹೊಂದಿದೆ.


ಹೊಸ ತಂತ್ರಜ್ಞಾನ ಹೊಂದಿರುವ ಈ ವೆಂಟಿಲೇಟರ್‌ನಲ್ಲಿ ವಯಸ್ಕರು, ಮಕ್ಕಳು ಮತ್ತು ನವಜಾತ ಶಿಸುಗಳಿಗೆ ಹೊಂದಾಣಿಕೆಯಾಗುವಂತೆ ಅಲ್ಟ್ರಾ-ಪ್ರೀಮಿಯಂ ಕ್ಲಾಸ್ ವೆಂಟಿಲೇಟರ್‌ನ್ನು ಟ್ರಾಲಿಗೆ ಅಳವಡಿಸಲಾಗಿದೆ. ಇದು ಉತ್ತಮ ಗುಣಮಟ್ಟದ ಉಸಿರಾಟವನ್ನು ಒದಗಿಸುತ್ತದೆ. ಇದರಲ್ಲಿ ಅಳವಡಿಸಿರುವ ಪ್ಯಾರಾಮೀಟರ್ ರೋಗಿಯ ಪರಿಸ್ಥಿತಿಯನ್ನು ಅರ್ಥಗರ್ಭಿತವಾಗಿ ಮತ್ತು ಶೀಘ್ರವಾಗಿ ಗ್ರಹಿಸುವ ತ್ವರಿತ ವೀಕ್ಷಣಾ ತಂತ್ರಜ್ಞಾನವನ್ನು ಹೊಂದಿರುವುದರಿಂದ ರೋಗಿಗೆ ಉಸಿರಾಟದಲ್ಲಿ ವ್ಯತ್ಯಯವಾಗದಂತೆ ನಿಗಾವಹಿಸುತ್ತದೆ.


ಸುಧಾರಿತ ತಂತ್ರಜ್ವಾನ ಹೊಂದಿರುವ ವೆಂಟಿಲೇಟರ್‌ಗಳನ್ನು ಸಮರ್ಪಕವಾಗಿ ನಿರ್ವಹಿಸುವ ಕುರಿತು ವೈದ್ಯರು, ದಾದಿಯರು ಮತ್ತು ಟೆಕ್ನಿಶಿಯನ್‌ಗಳಿಗೆ ಬಿಪಿಎಲ್ ಕಂಪೆನಿಯವರು ತರಬೇತಿ ನಡೆಸಿಕೊಟ್ಟರು ಎಂದು ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.

Related posts

ಬಂದಾರು: ಸಂಯೋಗ ಆಯುರ್ವೇದಾಲಯ ಶುಭಾರಂಭ

Suddi Udaya

ಸುದ್ದಿ ಉದಯ ವಾರ ಪತ್ರಿಕೆ ದೀಪಾವಳಿ ವಿಶೇಷಾಂಕ ಹಾಗೂ ‘ಹೇ ಶಾರದೆ’ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Suddi Udaya

ಮಾಲಾಡಿ ಗ್ರಾ.ಪಂ ನೂತನ ಅಧ್ಯಕ್ಷ ಪುನೀತ್ ಕುಮಾರ್ ಮತ್ತು ಸದಸ್ಯ ವಸಂತ ಪೂಜಾರಿ ಕಾಂಗ್ರೇಸ್ ಸೇರ್ಪಡೆ

Suddi Udaya

ನಾಳ : ತೀವ ಡ್ಯಾನ್ಸ್ ಕ್ಲಾಸ್ ಶುಭಾರಂಭ

Suddi Udaya

ನಿಡ್ಲೆ : ಕುದ್ರಾಯ ಓಡದಕೊಟ್ಯದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ

Suddi Udaya

4ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ಉಜಿರೆ ತಂಡಕ್ಕೆ ಹಲವು ಪ್ರಶಸ್ತಿ

Suddi Udaya
error: Content is protected !!