ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಪ್ರಕಟಿಸಲಾದ “ಜ್ಞಾನಶರಧಿ” ಮತ್ತು ಜ್ಞಾನವಾರಿಧಿ” ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು ಆ 19 ರಂದು ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಮೈಸೂರಿನ ಖ್ಯಾತ ವಾಗ್ಮಿ ಪ್ರೊ. ಕೃಷ್ಣೇಗೌಡ ಲೋಕಾರ್ಪಣೆ ಮಾಡಿದರು.
ಖ್ಯಾತ ಚಲನಚಿತ್ರ ನಟ ಸಿಹಿಕಹಿ ಚಂದ್ರು ರವರು ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರುಗಳಾದ ಪ್ರಾಥಮಿಕ ಶಾಲಾ ವಿಭಾಗ: ಪ್ರಥಮ : ಕು, ರವಿರಾಜ ಕಿರಣ ನಾಯ್ಕ, ದಿನಕರ ದೇಸಾಯಿ ಪ್ರಾಥಮಿಕ ಶಾಲೆ, ಅಂಕೋಲಾ, ದ್ವಿತೀಯ : ಕು. ಕುಶಿತ್ ಮಲ್ಲಾರ, ಕುಮಾರಸ್ವಾಮಿ ಹಿ.ಪ್ರಾ. ಶಾಲೆ, ಸುಬ್ರಹ್ಮಣ್ಯ, ತೃತೀಯ : ಕು. ನಿಹಾಲಿ, ಕುಮಾರಸ್ವಾಮಿ ಆಂ. ಮಾ. ಹಿ.ಪ್ರಾ. ಶಾಲೆ, ಸುಬ್ರಹ್ಮಣ್ಯ,
ಪ್ರೌಢ ಶಾಲಾ ವಿಭಾಗ: ಪ್ರಥಮ : ಕು. ಪೂರ್ವಿ ದಯಾನಂದ ಶೇಟ್, ಮಾರಿಕಾಂಬಾ ಸರಕಾರಿ ಪ.ಪೂ. ಕಾಲೇಜು, ಶಿರಸಿ, ದ್ವಿತೀಯ : ಕು ಸಾಲ್ವ ಕಿಣಿ, ಎಸ್.ವಿ.ಎಸ್. ಟೆಂಪಲ್ ಆಂ.ಮಾ. ಶಾಲೆ, ಬಂಟ್ವಾಳ, ತೃತೀಯ : ಕು, ಅನ್ವಿತ್ ಹೆಚ್, ಕೆನರಾ ಹಿ.ಪ್ರಾ ಶಾಲೆ, ಉರ್ವ, ಮಂಗಳೂರು,
ಕಾಲೇಜು ವಿಭಾಗ: ಪ್ರಥಮ : ಕು. ಪ್ರಸಾದ ಶ್ರೀಧರ ಮೇತ್ರಿ, ಟಾಗೋರಾ ಸ್ಕೂಲ್ ಆಫ್ ಆರ್ಟ್, ಅಂಕೋಲಾ ದ್ವಿತೀಯ : ಕು. ಅಖಿಲೇಶ ನಾಗೇಶ ನಾಯ್ಕ, ಕಾಮಧೇನು ಕಾಲೇಜು, ಕಾರವಾರ, ತೃತೀಯ : ಕು. ಸಂದೀಪ್ ಆರ್. ಪೈ, ವಿದ್ಯೋದಯ ಪ.ಪೂ. ಕಾಲೇಜು, ಉಡುಪಿ
ಸಾರ್ವಜನಿಕ ವಿಭಾಗ: ಪ್ರಥಮ : ಕು. ಪೂರ್ಣಿಮಾ ಜಿ.ಎಸ್, ತಿಣಿವೆ, ನಾಗರಕೊಡಿಗೆ, ಹೊಸನಗರ ದ್ವಿತೀಯ : ಶ್ರೀ ಸಿದ್ಧಲಿಂಗಪ್ಪ ರುಬರ, ಗುಡ್ಡದರುತ್ತಿಹಳ್ಳಿ, ಹಾನಗಲ್ ತಾಲೂಕು ತೃತೀಯ: ಕು, ಅಕ್ಷಯ ವಾಸುದೇವ ನಾಯ್ಕ, ಆವರ್ಸಾ ಅಂಚೆ, ಅಂಕೋಲಾ ಇವರುಗಳಿಗೆ ಪುರಸ್ಕಾರ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಂತಿವನ ಟ್ರಸ್ಟ್‌ನ ಟ್ರಸ್ಟಿ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ರಾಜ್ಯ ಶಿಕ್ಷಣ ಸಂಶೋಧನೆ ತರಬೇತಿ ಇಲಾಖೆಯ ನಿರ್ದೇಶಕಿ ಶ್ರೀಮತಿ ಸುಮಂಗಲ ಶುಭಾಶಂಸನೆ ಮಾಡಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಕುಂಚ-ಗಾನ-ನೃತ್ಯ ವೈಭವ ನಡೆಯಿತು.
ವಿದುಷಿ ಶ್ರೇಯಾ ಕೊಳತ್ತಾಯ ಮತ್ತು ಸಂಗಡಿಗರು ಪ್ರಾರ್ಥಿಸಿ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ| ಐ ಶಶಿಕಾಂತ್ ಜೈನ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಧನ್ಯವಾದವಿತ್ತರು.