23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆ ಹಾ.ಉ.ಸ. ಸಂಘ ಹಾಗೂ ಬಿ.ಎಮ್.ಸಿ.ಗೆ ಕರ್ನಾಟಕ ಹಾ.ಮ. ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಭೇಟಿ

ಗೇರುಕಟ್ಟೆ : ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಬಿ.ಎಮ್.ಸಿ.ಗೆ ಕರ್ನಾಟಕ ಹಾಲು ಮಂಡಳಿ ಬೆಂಗಳೂರು ನಿರ್ದೇಶಕ ಹಾಗೂ ದ.ಕ,ಸ ಹಾಲು ಒಕ್ಕೂಟ ಮಂಗಳೂರು ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಭೇಟಿ ನೀಡಿದ್ದರು.

ಇವರಿಗೆ ಸಂಘದ ವತಿಯಿಂದ ಅಧ್ಯಕ್ಷ ಜನಾರ್ಧನ ಗೌಡ ಕೆ.ಶಾಲು ಹೊದಿಸಿ, ಸನ್ಮಾನಿಸಿ, ಗೌರವಿಸಿದರು.

ನಂತರ ಮಾತನಾಡಿದ ದಿವಾಕರ ಶೆಟ್ಟಿ ರವರು ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿರುವ ಸುಮಾರು 750 ಕಟ್ಟಡಗಳಲ್ಲಿ ಈ ಸಂಘದ ಕಟ್ಟಡ ಉತ್ತಮ ಗುಣಮಟ್ಟದ ನಿರ್ಮಾಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್, ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್, ವಿಸ್ತಾರಣಾಧಿಕಾರಿ ರಾಜೇಶ್ ಕಾಮಾತ್ ಪಿ., ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷರಾದ ಸಿರಿಲ್ ಪಿಂಟೊ, ನಿರ್ದೇಶಕರುಗಳಾದ ಕೇಶವ ಪೂಜಾರಿ ಕೆ., ಕುಶಾಲವತಿ, ಯೋಗಿನಿ, ನೇವಿಲ್ ಸ್ಟೀವನ್ ಮೊರಾಸ್., ಪ್ರವೀಣ್ ಪೂಜಾರಿ., ಗಿರಿಯಪ್ಪ ಗೌಡ ಕೆ., ವಸಂತ ನಾಯ್ಕ., ರಂಜನ್ ಹೆಚ್., ಗಂಗಯ್ಯ ಗೌಡ., ಮೋಹನ್ ದಾಸ್ ಶೆಟ್ಟಿ ಹಾಗೂ ರೇಖಾ ರುಕ್ಕಯ್ಯ ಉಪಸ್ಥಿತರಿದ್ದರು.


ಸಂಘದ ಕಾರ್ಯನಿರ್ವಣಾಧಿಕಾರಿ ಗುಲಾಬಿ ಹಾಗೂ ಸಿಬ್ಬಂದಿಗಳು ಭಾಗವಹಿಸಿ, ಸಹಕರಿಸಿದರು.

Related posts

ಜೆಸಿಐ ಭಾರತದ ವಲಯ 15ರ ಉಪಾಧ್ಯಕ್ಷರಾಗಿ ಬೆಳ್ತಂಗಡಿ ಘಟಕಾಧ್ಯಕ್ಷ ಶಂಕರ್ ರಾವ್ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ರೋಗ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡರಿಗೆ ಗಡಿನಾಡ ಕನ್ನಡ ಸೇವಾ ರತ್ನ ಪ್ರಶಸ್ತಿ

Suddi Udaya

ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿ ಕಾರ್ಯಕ್ರಮ

Suddi Udaya

ಉಜಿರೆ ಪಂಚಗವ್ಯ ಚಿಕಿತ್ಸಾ ಶಿಬಿರ

Suddi Udaya

ಸುಲ್ಕೇರಿಮೊಗ್ರು ನಾಯಿಜೆ ಚಂದಯ್ಯ ಮಡಿವಾಳ ಮನೆಯ ಹತ್ತಿರ ಭಾರಿ ಮಳೆಗೆ ಗುಡ್ಡ ಕುಸಿತ

Suddi Udaya
error: Content is protected !!