26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಮಕ್ಕಾದಲ್ಲಿ ನಿಧನ ಹೊಂದಿದ ಉಮ್ರಾ ಯಾರ್ತಾರ್ಥಿಯ ಅಂತ್ಯಸಂಸ್ಕಾರ‌ಕ್ಕೆ ನೇತೃತ್ವ ವಹಿಸಿದ ಕಿಲ್ಲೂರಿನ ಅಬ್ದುಲ್ ಅಝೀಝ್ ಝುಹುರಿ

ಬೆಳ್ತಂಗಡಿ: ಪವಿತ್ರ ಉಮ್ರಾ ನಿರ್ವಹಣೆಗಾಗಿ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಬುರಾಕ್ ಇಂಟರ್ನ್ಯಾಷನಲ್ ಟ್ರಾವೆಲ್ಸ್ ಮೂಲಕ ಸೌದಿ ಅರೇಬಿಯಾ ಕ್ಕೆ ಪ್ರಯಾಣ ಬೆಳೆಸಿದ್ದ ಉಳ್ಳಾಲ ತಾಲೂಕಿನ ಮದನಿ ನಗರ ನಿವಾಸಿ ಝುಬೈದ ಎಂಬವರು ಅಸೌಖ್ಯದಿಂದ ಆ. 17 ರಂದು ಪವಿತ್ರ ಮಕ್ಕಾದಲ್ಲಿ ಇಹಲೋಕ ತ್ಯಜಿಸಿದರು.

ಕುಟುಂಬದ ಇಚ್ಛೆಯಂತೆ ಮೃತರ ದಫನ ಕಾರ್ಯ ಮಕ್ಕಾದಲ್ಲೇ ನಿರ್ವಹಿಸುವುದಾಗಿ ತೀರ್ಮಾನಿಸಿ, ಉಮ್ರಾ ಗ್ರೂಪ್ ಲೀಡರ್ ಅಬ್ದುಲ್ ಅಝೀಝ್ ಝುಹ್‌ರಿ ಕಿಲ್ಲೂರು ರವರ ನೇತೃತ್ವದಲ್ಲಿ ಮಕ್ಕಾದಲ್ಲಿ ದಫನ ಮಾಡಲು ಬೇಕಾದ ಎಲ್ಲಾ ದಾಖಲೆ ಪತ್ರಗಳ ತಯಾರಿಗಾಗಿ ಸಮಾಜ ಸೇವಕ ಶಾಕಿರ್ ಹಕ್ ನೆಲ್ಯಾಡಿ ಯವರ ಮೂಲಕ ಕ್ಲಪ್ತ ಸಮಯಕ್ಕೆ ಸಂಗ್ರಹಿಸಲಾಯಿತು.

ನಂತರ ಭಾರತದ ಕಾನ್ಸುಲೇಟ್ ನಿಂದ NOC ದೊರಕಿದ ನಂತರ ಮೃತರ ದಫನ ಕಾರ್ಯವನ್ನು ಮಕ್ಕಾದ ಹರಮ್ ಪರಿಸರದಲ್ಲಿ ನೆರವೇರಿಸಲಾಯಿತು.

ದಾಖಲೆ ಪತ್ರಗಳ ಸಂಗ್ರಹಕ್ಕಾಗಿ ಶಾಕಿರ್ ಹಕ್ ರವರಿಗೆ ಮಂಗಳೂರು ಇಂಟರ್ ನ್ಯಾಷನಲ್ ಉಮ್ರಾ ಟ್ರಾವೆಲ್ಸ್ ನ ಮಾಲಕ ಹಾಜಿ ಅಬೂಬಕ್ಕರ್ ಅಡ್ಡೂರು ಹಾಗೂ ಹೆಚ್‌ಐಎಫ್ ನಾಯರಾದ ರಿಜ್ವಾನ್ ಪಾಂಡೇಶ್ವರ ನೆರವಾದರು.ನಂತರ ನಡೆದ ದಫನ ಪ್ರಕ್ರಿಯೆಯಲ್ಲಿ ಕೆ ಸಿ ಎಫ್ ನಾಯಕ ಮೂಸ ಹಾಜಿ ಕಿನ್ಯ , ರಝಕ್ ಮುಸ್ಲಿಯಾರ್ ರಂತಡ್ಕ, ಲತೀಫ್ ನೆಲ್ಯಾಡಿ, ಹುಸೈನ್ ನೆಲ್ಯಾಡಿ, ಇಕ್ಬಾಲ್ ಕಕ್ಕಿಂಜೆ, ಹನೀಫ್ ಕೋಳಿಯೂರ್, ಶಾಕಿರ್ ಹಕ್ ನೆಲ್ಯಾಡಿ, ರನೀಝ್ ಗೇರುಕಟ್ಟೆ, ಮೃತರ ಪತಿ ಇಸ್ಮಾಯಿಲ್ ಮತ್ತು ಮಕ್ಕಳು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಅಶಕ್ತರಿಗೆ ಆರ್ಥಿಕ ಸಹಕಾರ, 500 ಗಿಡಗಳ ವಿತರಣೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಮಚ್ಚಿನ: ಆಕಸ್ಮಿಕವಾಗಿ ಮನೆಯ ಹಟ್ಟಿಗೆ ಬೆಂಕಿ : ಅಪಾರ ನಷ್ಟ

Suddi Udaya

ಉಜಿರೆ ಪೇಟೆಯಲ್ಲಿ ಪಾರ್ಕಿಂಗ್ ಸುವ್ಯವಸ್ಥೆ ಕುರಿತು ಸಭೆ

Suddi Udaya

ಆ.18: ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ ಕೆಸರು ಕಂಡೊಡು ಗೌಡೆರೆ ಗೌಜಿ-ಗಮ್ಮತ್ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಹೊಸಪಟ್ಣ ಹಾಲು ಉ.ಸ. ಸಂಘ: ಮಹಾಸಭೆ

Suddi Udaya

ಧರ್ಮಸ್ಥಳ: ಪೊಸೊಳಿಕೆ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ ಆಚರಣೆ

Suddi Udaya
error: Content is protected !!