April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೊಗ್ರು ಗೌಡರ ಯಾನೆ ಒಕ್ಕಲಿಗ ಸೇವಾ ಸಂಘದ ಸಭೆ; ನೂತನ ಸಮಿತಿ ರಚನೆ

ಮೊಗ್ರು: ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಮೊಗ್ರು, ಇದರ ಸಭೆಯು ಆ.20 ರಂದು ನಡೆಸಲಾಯಿತು.


ಈ ಸಭೆಯಲ್ಲಿ ಬೆಳ್ತಂಗಡಿ ತಾಲೂಕು ಪದಾಧಿಕಾರಿಗಳ ಸಮ್ಮುಖದಲ್ಲಿ ಮೊಗ್ರು ಗ್ರಾಮದ ನೂತನ ಗೌಡರ ಯಾನೆ ಒಕ್ಕಲಿಗ ಸೇವ ಸಂಘ ಗ್ರಾಮ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಮನೋಹರ ಗೌಡ ಅಂತರ ಮತ್ತು ಕಾರ್ಯದರ್ಶಿಯಾಗಿ ದೇಜಪ್ಪ ಗೌಡ ಅಂತರ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಗೌಡ ಹೊಸಮನೆ, ದಯಾನಂದ ಗೌಡ ಉಂತಣಾಜೆ, ಯಾದವ ಗೌಡ ಉಳಿಯ, ಪುರಂದರ ಗೌಡ ನೈಮಾರು, ಕೋಶಾಧಿಕಾರಿಯಾಗಿ ಶಶಿಧರ್ ಗೌಡ ಉಳಿಯ ಆಯ್ಕೆಯಾದರು. ಊರಿನಲ್ಲಿ ಕಾರ್ಯಕ್ರಮದ ಗೌಡಸ್ತಿಕೆ ಮಾಡುವ ಹಿರಿಯರನ್ನು ಸಮಿತಿಯ ಗೌರಧ್ಯಕ್ಷರನ್ನಾಗಿ ಮಾಡಲಾಯಿತು.

ಮುಗೇರಡ್ಕ ವಲಯ ಸಮಿತಿಯ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಮುಗೇರಡ್ಕ, ಕಾರ್ಯದರ್ಶಿಯಾಗಿ ರಮೇಶ್ ಗೌಡ ನೆಕ್ಕರಾಜೆ, ಗೌರವಾಧ್ಯಕ್ಷರಾಗಿ, ಕೃಷ್ಣಪ್ಪ ಗೌಡ ನೈಮಾರು, ಜಿನ್ನಾಪ್ಪ ಗೌಡ ಗೌಡತಿಗೆ, ಮತ್ತು ಉಪಾಧ್ಯಕ್ಷರಾಗಿ ದೀಕ್ಷಿತ್ ಗೌಡ ನೈಮಾರು, ಪುರಂದರ ಗೌಡ ಎರ್ಮಲ, ಕೋಶಾಧಿಕಾರಿಯಾಗಿ ಜಗ್ಗದೀಶ್ ಗೌಡ ಅರ್ಬಿ ಆಯ್ಕೆ ಮಾಡಲಾಯಿತು.

ನೂತನ ಸಮಿತಿ ರಚನೆ ಮಾಡಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಧರ್ಮಸ್ಥಳ ಸೌಜನ್ಯ ಹತ್ಯೆ ಬಗ್ಗೆ ಖಂಡನೆ ವ್ಯಕ್ತಪಡಿಸಿ ಆ ಕೊಲೆಗೆ ಸಂಬಂಧಿಸಿದ ತನಿಖೆಯನ್ನು ಇನ್ನೊಮ್ಮೆ ಮಾಡಿಸಲು ಸರಕಾರಕ್ಕೆ ಒತ್ತಾಯ ಮಾಡುವ ಮನವಿ ಪತ್ರವನ್ನು ಆ.24 ರಂದು ಬಂದಾರು ಗ್ರಾಮಪಂಚಾಯತ್ ಮೊಗ್ರು ಗೌಡ ಸಂಘದ ವತಿಯಿಂದ ನೀಡುವುದು ಎಂದು ತೀರ್ಮಾನ ಮಾಡಲಾಯಿತು. ಮುಗೇರಡ್ಕ ದೈವಸ್ಥಾನದಲ್ಲಿ ನಿಜವಾದ ಆರೋಪಿಗಳಿಗೆ ದೈವಗಳು ಶಿಕ್ಷೆ ನೀಡುವಂತೆ ಪ್ರಾರ್ಥನೆ ಸಲ್ಲಿಸಲಾಯಿತು

Related posts

ಕಳೆಂಜ ಗ್ರಾ.ಪಂ.ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕಲ್ಲೇರಿ: ನಿಸರ್ಗ ರಿಕ್ಷಾ ಚಾಲಕ – ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಬೆಳಾಲಿನ ಪ್ರಗತಿಪರ ಕೃಷಿಕ ಶಿವಪ್ಪಗೌಡರಿಗೆ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಅವಾರ್ಡ್

Suddi Udaya

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಇವರ ವತಿಯಿಂದ ಬಟ್ಟೆಯ ಕಸೂತಿ ತಯಾರಿಕೆ ಸ್ವ ಉದ್ಯೋಗ ತರಬೇತಿ ಉದ್ಘಾಟನೆ

Suddi Udaya

ಎಸ್.ಡಿ.ಯಂ. ಐ.ಟಿ.ಐ.ಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya
error: Content is protected !!