30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಡುಗೆ ಕೆಲಸಕ್ಕೆ ಹೋದ ಮುಂಡಾಜೆ ಕೂಳೂರು ಶಾರದಾ ನಗರ ನಿವಾಸಿ ರಾಘವೇಂದ್ರ ಮೆಹಂದಳೆ ನಾಪತ್ತೆ: ಪತ್ನಿಯಿಂದ ಪೊಲೀಸರಿಗೆ ದೂರು

ಮುಂಡಾಜೆ: ಇಲ್ಲಿಯ ದೇವಿ ಗುಡಿ ಬಳಿ ಕೂಳೂರು ಶಾರದಾ ನಗರ ನಿವಾಸಿ ರಾಘವೇಂದ್ರ ಮೆಹಂದಳೆ (32 ವರ್ಷ) ಅವರು ನಾಪತ್ತೆಯಾಗಿರುವುದಾಗಿ ಆ.21 ರಂದು ಧಮ೯ಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.

ರಾಘವೇಂದ್ರ ಮೆಹಂದಳೆ ಅವರ ಪತ್ನಿ ಶೀಲಾ ಈ‌ ದೂರನ್ನು ನೀಡಿದ್ದು, ಗಂಡ ರಾಘವೇಂದ್ರ ಮೆಹಂದಳೆ ರವರು ಬೆಳಗ್ಗೆ 9-30 ಗಂಟೆಗೆ ಎಂದಿನಂತೆ ಅಡುಗೆ ಕೆಲಸದ ಬಗ್ಗೆ ಬಾಲಕೃಷ್ಣ ಸಹಸ್ರ ಭುಧ್ಯೆ ಎಂಬವರಲ್ಲಿಗೆ ಹೋಗುತ್ತಿದ್ದು ಬಳಿಕ ಕಾರು ವಾಶ್ ಕೊಡುವ ಬಗ್ಗೆ ತಿಳಿಸಿದ್ದರು. ಬಳಿಕ ಕ್ಯಾಟರಿಂಗ್ ಕೆಲಸ ಇರುವುದರಿಂದ ಮನೆಗೆ ಬರುವರೇ ತಡವಾಗಬಹುದು ಎಂಬುದಾಗಿ ತಿಳಿಸಿ ಮನೆಯಿಂದ ಹೋದವರು ಸುಮಾರು 12-30 ಗಂಟೆಗೆ ತನ್ನ ಮೊಬೈಲ್ ಗೆ ಕರೆ ಮಾಡಿ, ನಾನು ತಡವಾಗಿ ಬರುತ್ತೆನೆ ಎಂಬ ಸಂದೇಶವನ್ನು ಕಳುಹಿಸಿರುತ್ತಾರೆ. ಮಧ್ಯಾಹ್ನ 3-30 ಗಂಟೆಗೆ ಬಾವ ವಿಶ್ವನಾಥ ಮೆಹಂದಳೆ. ಹಾಗೂ ಸ್ನೇಹಿತರಾದ ವಿಠ್ಠಲ್. ಮನೋಜ್. ರಾಘವೇಂದ್ರ ಭಟ್. ಇವರು ಮನೆಗೆ ಬಂದು ರಾಘವೇಂದ್ರ ಮೆಹಂದಳೆ ರವರ ಮೊಬೈಲ್ ಸ್ವಿಚ್ ಆಫ್ ಆಗಿರುವ ಬಗ್ಗೆ ತಿಳಿಸಿದ್ದು, ನಾನು ಕೂಡ ಗಂಡ ರಾಘವೇಂದ್ರ ಮೆಹಂದಳೆರವರ ಮೊಬೈಲ್ ಗೆ ಅನೇಕ ಸಲ ಕರೆ ಮಾಡಿದ್ದು ಮೋಬೈಲ್ ಸ್ವಿಚ್ ಆಫ್ ಆಗಿರುವುದು ಕಂಡು ಬಂದಿದೆ. ನಂತರ ನೆರೆಕೆರೆ ಹಾಗೂ ಸಂಬಂಧಿಕರ ಮನೆಗೆ ವಿಚಾರಿಸಿದ್ದಲ್ಲಿ ಎಲ್ಲಯೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಧಮ೯ಸ್ಥಳ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಈ ವರ್ಷದ 150ನೇ ಪ್ರದರ್ಶನ ಸಂಭ್ರಮ

Suddi Udaya

ಭಾರಿ ಮಳೆಯಿಂದಾಗಿ ಕಾರ್ಯತ್ತಡ್ಕ ಕುಲಾಡಿ ಸೇತುವೆಯ ಬಳಿ ಧರೆಕುಸಿತ: ಅಡಿಕೆ ಗಿಡಗಳು ನೀರು ಪಾಲು

Suddi Udaya

ಎಸ್ಸೆಸ್ಸೆಲ್ಸಿ ಮರು ಮೌಲ್ಯ ಮಾಪನ : ಬೆಳ್ತಂಗಡಿ ಶ್ರೀ ಧ.ಮಂ.ಆಂ.ಮಾ. ಶಾಲಾ ವಿದ್ಯಾರ್ಥಿ ಪ್ರತೀಕ್ ವಿ. ಎಸ್. ರಾಜ್ಯಕ್ಕೆ 7ನೇ ರ್‍ಯಾಂಕ್

Suddi Udaya

ಕಳೆಂಜ ಬಿರುಗಾಳಿ ಮಳೆಗೆಮನೆಗೆ ಮರ ಬಿದ್ದು ಹಾನಿ

Suddi Udaya

ಬಾಸ್ಕೆಟ್‌ಬಾಲ್ ಪಂದ್ಯಾಟ: ಉಜಿರೆ ಎಸ್‌ಡಿಎಂ ಕಾಲೇಜು ಪುರುಷ ಮತ್ತು ಮಹಿಳೆಯರ ವಿಭಾಗಕ್ಕೆ ಪ್ರಶಸ್ತಿ

Suddi Udaya

ಗೇರುಕಟ್ಟೆ: ಕೊರಂಜ ಸರಕಾರಿ ಶಾಲಾ ಪೋಷಕರ ಮತ್ತು ಹಿರಿಯ ವಿದ್ಯಾರ್ಥಿಗಳ ಸಭೆ: ಸಮಿತಿ ರಚನೆ

Suddi Udaya
error: Content is protected !!