September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾಳ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ

ನಾಳ: ಟೆಕ್ಸಾಸ್ ಇನ್ಸ್ಟ್ರು ಮೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ವತಿಯಿಂದ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ಸಂಸ್ಥೆಯ ಉದ್ಯೋಗಿಗಳಾದ ಸವಿನಯ, ರಮೇಶ್ ಹಿಡಾಮಣಿ, ಮುದಿತ ಬನ್ಸಿಲ್ ಹಾಗೂ ಚಿರಾಗ್ ಶಿಲಾವಂತ್ ಇವರು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಶುಭ ಹಾರೈಸಿದರು.

ಶಾಲಾ ಎಸ್.ಡಿ.ಯಂ.ಸಿಯ ಅಧ್ಯಕ್ಷರಾದ ಮೋಹನ್ ಗೌಡ ತಾರೆಮಾರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷರಾದ ರೀತಾ ನಾಳ ಹಾಗೂ ಸದಸ್ಯರುಗಳಾದ ಸೋಮಪ್ಪ ಗೌಡ ಕುಬಾಯಿ, ಪುಷ್ಪಾ ನಾಳ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಪಿಲಿಪ್ ಡೊನಾಲ್ಡ್ ದಿನಲ್ಲೂ ಇವರು ಸ್ವಾಗತಿಸಿ ಸಂಸ್ಥೆಯು ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ರಮವನ್ನು ಶ್ಲಾಘಿಸಿ ಅಭಿನಂದಿಸಿದರು.

ಸಹಶಿಕ್ಷಕಿ ಕವಿತಾ, ಜಲಜಾಕ್ಷಿ.ಪಿ ಹಾಗೂ ಗೌರವ ಶಿಕ್ಷಕಿ ಮೀನಾಕ್ಷಿಯವರು ಸಹಕರಿಸಿದರು. ಹರೀಶ್ ರಾವ್ ನಾಳ ಹಾಗೂ ಚಂದ್ರಶೇಖರ ರಾವ್ ಬೆಂಗಳೂರು ಇವರು ಸಂಸ್ಥೆಯ ಪ್ರಯೋಜನ ದೊರಕಿಸಿಕೊಡಲು ಮುತುವರ್ಜಿ ವಹಿಸಿದ್ದರು.

ಸಹಶಿಕ್ಷಕಿ ಸಿಸಿಲಿಯಾ ಫ್ಲಾವಿಯಾ ಡಿಕೋಸ್ಕರವರು ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ದಮಯಂತಿ ಯಂ. ರವರು ಧನ್ಯವಾದವಿತ್ತರು.

Related posts

ಮಾ.9: ಬಜಿರೆಯಲ್ಲಿ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಯಂಗ್ ಬಾಯ್ಸ್ ಟ್ರೋಫಿ

Suddi Udaya

ವೇಣೂರು: ಹಂದೇವು ನಿವಾಸಿ ಕಲ್ಯಾಣಿ ದೇವಾಡಿಗ ನಿಧನ

Suddi Udaya

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಮುಂಡಾಜೆ ಶಾಲಾ ವಿದ್ಯಾರ್ಥಿಗಳಾದ ಚಿನ್ಮಯಿ, ಸಮೃದ್ಧಿರವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ

Suddi Udaya

ಕುತ್ಲೂರು ಸ.ಉ.ಪ್ರಾ. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿಗೆ ಗೌರವ

Suddi Udaya

ಪಡಂಗಡಿ ಶ್ರೀ ಸತ್ಯಸಾರಮಾನಿ ಕ್ಷೇತ್ರ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿ ರಾಮು, ಕಾರ್ಯದರ್ಶಿಯಾಗಿ ಶಿವಾನಂದ ಆಯ್ಕೆ

Suddi Udaya

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ವೈದ್ಯಕೀಯ ನೆರವು

Suddi Udaya
error: Content is protected !!