September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕು.ಸೌಜನ್ಯಳ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಭೇಟಿ

ಬೆಳ್ತಂಗಡಿ: ಧಮ೯ಸ್ಥಳ ಗ್ರಾಮದ ಪಾಂಗಾಳ ಕು. ಸೌಜನ್ಯಳ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಆ.21ರಂದುಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು.

ಸೌಜನ್ಯ ಮೃತದೇಹ ದೊರೆತ ಸ್ಥಳಕ್ಕೆ ಹೋಗಿ , ಪೊಲೀಸರಿಂದ ಮಾಹಿತಿಗಳನ್ನು ಪಡೆದುಕೊಂಡರು. ಸೌಜನ್ಯ ತಾಯಿ ಕುಸುಮಾವತಿ ಹಾಗೂ ಮಾವ ವಿಠಲ ಗೌಡ ಅವರಿಂದ ಮಾಹಿತಿಗಳನ್ನು ಪಡೆದು ಕೊಂಡರು. ಈ ಪ್ರಕರಣದಲ್ಲಿ ಆಯೋಗ ಯಾವ ರೀತಿಯಾಗಿ ಕೆಲಸ ಮಾಡಬಹುದು ಎಂಬ ವಿಚಾರವನ್ನು ಪರಿಶೀಲಿಸುತ್ತೇವೆ, ಕಾನೂನು ಪ್ರಕಾರವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಆಯೋಗ ಸಿದ್ದವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

‌ಸೌಜನ್ಯಳ ಸಹೋದರರ ಶಿಕ್ಷಣ ಮುಗಿದಿದ್ದು ಮನೆಯಲ್ಲಿ ಯಾರಿಗಾದರೂ ಸರಕಾರಿ ಉದ್ಯೋಗ ನೀಡಲು ಸಾದ್ಯವಿದೆಯೇ ಎಂಬುದನ್ನು ಪರಿಶೀಲಿಸುವುದಾಗಿಯೂ ಅವರು ತಿಳಿಸಿದರು.

ಈ ಪರಿಸರಕ್ಕೆ ಬಸ್ಸಿನ ವ್ಯವಸ್ಥೆ ಮಾಡಬೇಕು ಹಾಗೂ ಇಲ್ಲೊಂದು ಅಂಗನವಾಡಿ ಕೇಂದ್ರವಿರಬೇಕು ಎಂಬ ಬಗೆಗೆ ಬಹುದಿನಗಳಿಂದ ಬೇಡಿಕೆಯಿರುವುದಾಗಿ ಸೌಜನ್ಯಳ ಮನೆಯವರು ತಿಳಿಸಿದಾಗ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಿಡಿಪಿಒ ಪ್ರಿಯಾ ಆಗ್ನೆಸ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ LAV(Lo Assistance Visit) ಕಾರ್ಯಕ್ರಮ

Suddi Udaya

ಲಯನ್ಸ್ ಕುಟುಂಬ ಮಿಲನ ಸಂಭ್ರಮದ ಹೊನಲು

Suddi Udaya

ಕಲ್ಮಂಜ: ನಿಡಿಗಲ್ ಗೆಳೆಯರ ಬಳಗದ ನೂತನ ಸಭಾಂಗಣ ನಿರ್ಮಾಣದ ಶಿಲಾನ್ಯಾಸ

Suddi Udaya

ಮಚ್ಚಿನ ಸ.ಉ.ಪ್ರಾ. ಶಾಲೆಯ ನೂತನ ತರಗತಿ ಕೊಠಡಿ, ಗ್ರಂಥಾಲಯ ಕೊಠಡಿ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

Suddi Udaya

ಪುತ್ತೂರು ಅಧಿವಕ್ತಾ ಪರಿಷತ್, ದ.ಕ. ಜಿಲ್ಲೆ ಮತ್ತು ಮಹಿಳಾ ಬಂಧುತ್ವ ವೇದಿಕೆ ಸಹಯೋಗದೊಂದಿಗೆ ಮಹಿಳಾ ದಿನಾಚರಣೆ

Suddi Udaya

ಮಚ್ಚಿನದಲ್ಲಿ ಚಿರತೆ ಓಡಾಟ: ಜನರಲ್ಲಿ ಆತಂಕ

Suddi Udaya
error: Content is protected !!