ಗುರುವಾಯನಕೆರೆ : ಕರ್ನಾಟಕ ಮುಸ್ಲಿಮ್ ಜಮಾಅತ್ ಗುರುವಾಯನಕೆರೆ ಸರ್ಕಲ್ ವತಿಯಿಂದ ಜಾರಿಗೆಬೈಲು ತಾಜುಲ್ ಉಲಮಾ ಸಭಾಂಗಣದಲ್ಲಿ “ಪ್ರಜಾ ಭಾರತ” ಎಂಬ ವಿಷಯದ ಕುರಿತು ಸೌಹಾರ್ಧ ಸಮಾಜದ ಸವಿ ನೆನಪುಗಳು ಕಾರ್ಯಕ್ರಮ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕೆ.ಎಮ್.ಜೆ. ಗುರುವಾಯನಕೆರೆ ಸರ್ಕಲ್ ನ ಅಧ್ಯಕ್ಷರಾದ ಹಮೀದ್ ಮುಸ್ಲಿಯಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಸ್.ಎಮ್. ಕೋಯಾ, ಜಾರಿಗೆಬೈಲು ಮುದರ್ರಿಸ್ ರಾದ ಮಹಮ್ಮದ್ ಯಾಸಿರ್ ಫಾಝಿಲ್ ಅಲ್ ಫುರ್ಖಾನಿ, ಕಳಿಯ ಸಿ.ಎ.ಬ್ಯಾಂಕಿನ ಅಧ್ಯಕ್ಷರಾದ ವಸಂತ ಮಜಲು, ನಿವೃತ್ತ ಮುಖ್ಯೋಪಾಧ್ಯಾಯರಾದ ಪ್ರಭಾಕರ್ ರಾವ್ ನಾಳ, ರಾಘವ.ಎಚ್.ಗೇರುಕಟ್ಟೆ, ನಿವೃತ್ತ ಪತ್ರಾಂಕಿತ ಅಧಿಕಾರಿ ಶಂಭು ಶರ್ಮಾ, ಪತ್ರಕರ್ತರಾದ ಕೆ.ನಾಣ್ಯಪ್ಪ ಗೌಡ, ನಿವೃತ್ತ ಸೈನಿಕರಾದ ಮಹಮ್ಮದ್ ರಫೀ ಬೆಳ್ತಂಗಡಿ, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್, ಜಾರಿಗೆಬೈಲು ಮಸೀದಿ ಅಧ್ಯಕ್ಷರಾದ ಮಹಮ್ಮದ್ ರಫೀಕ್ ಮುಸ್ಲಿಯಾರ್ ಸೌಹಾರ್ಧತೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡರು., ಎ.ಕೆ. ಅಹಮ್ಮದ್, ಅಬೂಬಕ್ಕರ್ ಹಾಜಿ ಪೆಳತ್ತಲಿಕೆ, ಹಾಜಿ ಅಬೂಬಕ್ಕರ್ ಕಜೆಮಾರು, ಅಬೂಸ್ಟಾಲಿಹ್ ಮುಳ್ಳಗುಡ್ಡೆ, ಹಂಝ ಗೋವಿಂದೂರು, ಹಾರಿಶ್ ಕುಕ್ಕುಡಿ, ಸಿದ್ದೀಕ್.ಜಿ. ಎಚ್., ಮಹಮ್ಮದ್ ಸೇರಾಜೆ ಉಪಸ್ಥಿತರಿದ್ದರು. ಹಾಜಿ ಹಸೈನಾರ್ ಗುರುವಾಯನಕೆರೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.