April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ನೇತ್ರ ತಜ್ಞರಾಗಿ ಡಾ| ರಮೇಶ್ ನೇಮಕ

ಬೆಳ್ತಂಗಡಿ: ಚಿಕ್ಕಮಗಳೂರು ಜಿಲ್ಲಾ ಮಲ್ಲೇಗೌಡ ಸರಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದ ಡಾ| ರಮೇಶ್ ಅವರು ಬೆಳ್ತಂಗಡಿ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಕಣ್ಣಿನ ತಜ್ಞರಾಗಿ ನೇಮಕಗೊಂಡಿದ್ದಾರೆ.


ಇವರು ಮಂಗಳೂರಿನ ಪ್ರತಿಷ್ಠಿತ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪಡೆದು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಬಳಿಕ ಪಿ.ಜಿ ಮಾಡಿ ಕಣ್ಣಿನ ತಜ್ಞರಾಗಿ ಉತ್ತರ ಕರ್ನಾಟಕದ ಸಿಂಧನೂರು, ತುಮಕೂರುನಲ್ಲಿ ಕಾರ್ಯನಿರ್ವಹಿಸಿದ್ದರು.

ಬಳಿಕ ಚಿಕ್ಕಮಗಳೂರು ಜಿಲ್ಲೆಯ ಮಲ್ಲೇಗೌಡ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 10 ವರ್ಷಗಳ ಕಾಲ ಹಿರಿಯ ನೇತ್ರ ತಜ್ಞರಾಗಿ ಸೇವೆ ಸಲ್ಲಿಸಿ ಇದೀಗ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ವರ್ಗಾವಣೆಗೊಂಡು ಆಗಮಿಸಿದ್ದಾರೆ.
ಡಾ. ರಮೇಶ್‌ರವರು ತನ್ನ ಪ್ರೌಢ ಶಿಕ್ಷಣವನ್ನು ಬೆಳ್ತಂಗಡಿ ಸರಕಾರಿ ಪ್ರೌಢ ಶಾಲೆಯಲ್ಲಿ, ಪಿಯುಸಿಯನ್ನು ಎಸ್.ಡಿ.ಎಂ ಉಜಿರೆಯಲ್ಲಿ ಪೂರೈಸಿದ್ದರು. ಇವರು ಬೆಳ್ತಂಗಡಿ ಕಸಬಾ ಗ್ರಾಮದ ಕಾರಂತ್ಯಾರು ದಿ| ಅಣ್ಣಪ್ಪ ಕುಲಾಲ್‌ರವರ ಪುತ್ರ.

ಇವರ ಧರ್ಮಪತ್ನಿ ಡಾ| ಹೇಮಲತಾ ಅವರು ಕೂಡಾ ಹಿರಿಯ ದಂತ ವೈದ್ಯೆಯಾಗಿ ಇದೇ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Related posts

ಕೊಕ್ಕಡ: ಉಪ್ಪಾರಪಳಿಕೆ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಆಚರಣೆ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಕೊಕ್ರಾಡಿ ಸರ್ಕಾರಿ ಪ್ರೌಢಶಾಲೆ ಮತ್ತು ಪ.ಪೂ. ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಕುಕ್ಕೇಡಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಅಕ್ರಮ ಇಸ್ಪೀಟ್ ಅಡ್ಡೆಗೆ ಪೊಲೀಸ್ ದಾಳಿ : ರೂ. 54 ಸಾವಿರ ನಗದು ಸಹಿತ 37 ಮಂದಿ ವಶ

Suddi Udaya

ಮಾ.16: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಿಳಾ ಉದ್ಯಮಿಗಳ ಕಾರ್ಯಾಗಾರ

Suddi Udaya

ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದ ಗರ್ಡಾಡಿಯ ಅತುಲ್ ಕೃಷ್ಣ ರಿಗೆ ಸನ್ಮಾನ

Suddi Udaya
error: Content is protected !!