25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಬೆಳ್ತಂಗಡಿ ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಈಡೇರಿಸುವಂತೆ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ಮನವಿ

ಬೆಳ್ತಂಗಡಿ: ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಈಡೇರಿಸುವಂತೆ ಬೆಳ್ತಂಗಡಿ ತಾಲೂಕಿನ ಅತಿಥಿ ಶಿಕ್ಷಕರಿಂದ ತಹಶೀಲ್ದಾರರಾದ ಸುರೇಶ್ ಕುಮಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವರಿಗೆ ಮನವಿ ನೀಡಲಾಯಿತು.

ರಾಜ್ಯದಲ್ಲಿ ಸುಮಾರು 33,150 ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಮಕ್ಕಳ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಅತಿಥಿ ಶಿಕ್ಷಕರನ್ನು ಪ್ರತಿವರ್ಷ ಸರಕಾರವು ನೇಮಕ ಮಾಡಿಕೊಳ್ಳುತ್ತಿದೆ ಆದರೆ ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಈಡೇರಿಸುವಂತೆ ಹಲವಾರು ಬಾರಿ ಸಂಬಂಧಿಸಿದ ಸರಕಾರಕ್ಕೆ, ಅಧಿಕಾರಿಗಳಿಗೆ, ಇಲಾಖೆಗಳಿಗೆ ಮನವಿಯನ್ನು ಸಲ್ಲಿಸಿದರು ಸಹ ಯಾವುದೇ ಕ್ರಮಗಳನ್ನು ಕೈಗೊಳ್ಳದೆ. ನಮ್ಮ ಯಾವುದೇ ಸಮಸ್ಯೆ ಮತ್ತು ಬೇಡಿಕೆಗಳು ಈಡೇರಿರುವುದಿಲ್ಲ.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷಾರತೆ ಇಲಾಖೆ ಈಗಾಗಲೇ. ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಂಡಿದ್ದು, ಆ ಆದೇಶದಲ್ಲಿ ನಮ್ಮ ಬೇಡಿಕೆ ಮತ್ತು ಸಮಸ್ಯೆಗಳಿಗೆ ಸ್ಪಂಧಿಸಿರುವುದಿಲ್ಲ. ಇದರ ಜೊತೆಯಲ್ಲಿ ಮೆರೀಟ್‌ ಆಧಾರದಲ್ಲಿ ನೇಮಕಾತಿ ಎಂದು ಸೂಚಿಸಿರುವುದರಿಂದ ಸತತ 10-11 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಆದ್ದರಿಂದ ಈ ಪ್ರಮುಖ ವಿಷಯವನ್ನು ಪರಿಗಣಿಸಿ ಶಿಘ್ರವೇ ಪರಿಹರಿಸುತ್ತಿರೆಂದು ನಂಬಿರುತ್ತೆವೆ.

ಕರ್ನಾಟಕ ಸರಕಾರವು ದಿನಾಂಕ: 09-08-2019 ರಂದು ಈಗಾಗಲೇ ವಿವಿಧ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ‘ಡಿ’ ದರ್ಜೆ ಸಿಬ್ಬಂಧಿಗಳಿಗೆ ಕನಿಷ್ಠ ವೇತನ ನೀಡುವುದನ್ನು ಕಾರ್ಮಿಕ ಇಲಾಖೆಯು ಆದೇಶಿಸಿದೆ. ಅದರಂತೆ ನಮ್ಮ ಶಿಕ್ಷಣ ಇಲಾಖೆಯು ಸಹ ಅತಿಥಿ ಶಿಕ್ಷಕರಿಗೆ ವೇತನವನ್ನು ಹೆಚ್ಚಿಸಬೇಕಾಗಿ ಈ ಹಿಂದೆ ಹಲವು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿದರೂ ಕೂಡ ಈಡೇರಿಸದೆ ಇರುವುದು ನಮ್ಮ ದುರ್ದೈವವಾಗಿದೆ, ಆದ್ದರಿಂದ ನಮ್ಮ ಪ್ರಮುಖ ಬೇಡಿಕೆಗಳನ್ನು ಮತ್ತು ಸಮಸ್ಯೆಗಳನ್ನು ಹಿಡೇರಿಸುವಂತೆ ಒತ್ತಾಯಿಸಲಾಗಿದೆ.

ಬೇಡಿಕೆಗಳಾದ: ಪ್ರತಿ ವರ್ಷ ನೇಮಕಾತಿ ಪ್ರಕ್ರಿಯೆಯಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಾಗ ಸೇವಾ ಹಿರಿತನವನ್ನು ಪರಿಗಣಿಸಿ ಮೊದಲ ಆದ್ಯತೆ ಕೊಡುವುದು ಮತ್ತು ಮೆರಿಟ್ ಪದ್ಧತಿ ತೆಗೆದು ಹಾಕುವುದು,2) ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅತಿಥಿ ಶಿಕ್ಷಕ/ಶಿಕ್ಷಕಿರಿಗೆ ಸೇವಾ ಭದ್ರತೆಯನ್ನು ನೀಡಬೇಕು. 3) .ಸರಕಾರಿ ಶಿಕ್ಷಕರಂತೆ ಮಧ್ಯಂತರ ರಜೆ ಮತ್ತು ಮಾರ್ಚ್ ತಿಂಗಳ ಬೇಸಿಗೆ ರಜೆಯಲ್ಲಿಯೂ ಸಹ 12 ತಿಂಗಳ ವೇತನವನ್ನು ನೀಡುವುದರ ಜೊತೆಗೆ ಸೇವೆಯಲ್ಲಿ ಮುಂದುವರೆಸಿ ನೇಮಕಾತಿಯಲ್ಲಿ 5% ಕೃಪಾಂಕ ನೀಡಬೇಕು. 4) ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವೇತನವನ್ನು ಹೆಚ್ಚಿಸುವುದು ಮತ್ತು ಸುಪ್ರೀಮ್‌ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ಆದೇಶದ ಬಗ್ಗೆ ಗೌರವಿಸಿ ನಮಗೆ ನ್ಯಾಯ ಒದಗಿಸಬೇಕು.5) ಅತಿಥಿ ಶಿಕ್ಷಕರಿಗೆ ದೆಹಲಿ, ಹರಿಯಾಣ, ಪಂಜಾಬ ಮತ್ತು ಉತ್ತರ ಪ್ರದೇಶ ಸರ್ಕಾರ ಕೈಗೊಂಡ ನಿರ್ಣಯಗಳನ್ನು ನಮ್ಮ ಸರ್ಕಾರವು ಕೈಗೊಂಡು ಅತಿಥಿ ಶಿಕ್ಷಕರನ್ನ ಖಾಯಂ ಗೊಳಿಸಬೇಕು. 6) ಪ್ರತಿ ವರ್ಷ ಸೇವೆಸಲ್ಲಿಸಿದ ಅತಿಥಿ ಶಿಕ್ಷಕ – ಶಿಕ್ಷಕಿರಿಗೆ ಆಯಾ ಶಾಲೆಗಳಲ್ಲಿ ಸೇವಾ ದೃಢೀಕರಣ ಪತ್ರವನ್ನು ನೀಡಬೇಕು. 7) ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿರುವಾಗ ಆಕಸ್ಮಿಕ ಅವಘಡಗಳು ಸಂಭವಿಸಿ ಜೀವಕ್ಕೆ ತೊಂದರೆಯಾದರೆ ಅಂತಹ ಕುಟುಂಬಕ್ಕೆ ಪರಿಹಾರ ಧನ ಅಥವಾ ಜೀವ ವಿಮಾ ಯೋಜನೆಯನ್ನು ಕಲ್ಪಿಸುವುದು. 8) ಪ್ರತಿ ತಿಂಗಳಿಗೆ ಸರಿಯಾಗಿ ವೇತನವನ್ನು ಮಾಡಬೇಕು. ಅತಿಥಿ ಶಿಕ್ಷಕರ ಬ್ಯಾಂಕಖಾತೆಗೆ ನೇರವಾಗಿ ಜಮಾ ಮಾಡಬೇಕು.9) ಅತಿಥಿ ಶಿಕ್ಷಕ ಎಂಬ ಪದವನ್ನು ತೆಗೆದುಹಾಕಿ ಗೌರವ ಶಿಕ್ಷಕ ಎಂದು ನಮೂದಿಸಬೇಕು. 10) ಖಾಯಂ ಶಿಕ್ಷಕರಂತೆ ನಮಗೂ ಕೂಡ ಸಮಾನ ಸ್ಥಾನಮಾನ ಹಾಗೂ ವಿವಿಧ ತರಬೇತಿಗಳಿಗೆ ಅವಕಾಶ ನೀಡಬೇಕು, ಮತ್ತು ಶಿಕ್ಷಕರ ಹಾಜರಾತಿಯಲ್ಲಿ ಅತಿಥಿ ಶಿಕ್ಷಕರ ಹಾಜರಾತಿ ಸೇರ್ಪಡೆಗೊಳಿಸಬೇಕು.

Related posts

ಜು.6 ರಿಂದ ಬೆಳ್ತಂಗಡಿ ಆನ್ ಸಿಲ್ಕ್ಸ್ ನಲ್ಲಿ ಆಷಾಢ ಬಂಪರ್ ಸೇಲ್: ಪ್ರತಿ ಖರೀದಿಗೆ ಶೇ. 50 ರಿಯಾಯಿತಿ

Suddi Udaya

ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ: ನೆಕ್ಕಿಲು ಸ.ಕಿ.ಪ್ರಾ. ಶಾಲೆಗೆ ಹಲವು ಪ್ರಶಸ್ತಿ

Suddi Udaya

ಉಜಿರೆಯಲ್ಲಿ ಗಾಳಿ- ಮಳೆಗೆ ವಾಹನಗಳ ಮೇಲೆ ಬಿದ್ದ ಮರ, ಒರ್ವರಿಗೆ ಗಾಯ, ಸಂಚಾರ ಅಸ್ತವ್ಯಸ್ಥ

Suddi Udaya

ಮಾ.16: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಿಳಾ ಉದ್ಯಮಿಗಳ ಕಾರ್ಯಾಗಾರ

Suddi Udaya

ಶತಾಯುಷಿ ಪಟ್ರಮೆ ಅಶ್ಚತ್ತಡಿ ನಿವಾಸಿ ಪಮಣ ಗೌಡ ನಿಧನ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya
error: Content is protected !!