23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಯೋಜನಾಧಿಕಾರಿ ಡಾ. ಪ್ರಸನ್ನಕುಮಾರ ಐತಾಳ್ ಅಧ್ಯಕ್ಷತೆ ವಹಿಸಿ ಸದ್ಭಾವನಾ ದಿನದ ಮಹತ್ವ ತಿಳಿಸಿದರು. ಹಾಗೆಯೇ ಸದ್ಭಾವನಾ ಪ್ರತಿಜ್ಞೆಯನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ವಿವಿಧ ಧರ್ಮಗಳಲ್ಲಿ ಸಾಮರಸ್ಯದ ಬಗ್ಗೆ ವಿದ್ಯಾರ್ಥಿಗಳಿಂದ ಗೋಷ್ಠಿ ನಡೆಯಿತು. ಹಿಂದೂ ಧರ್ಮದ ಬಗ್ಗೆ ಆದಿತ್ಯ ಹೆಗಡೆ , ಇಸ್ಲಾಂ ಧರ್ಮದ ಬಗ್ಗೆ ಮುಹಮ್ಮದ್ ಸಲೀಲ್ , ಜೈನ ಧರ್ಮದ ಬಗ್ಗೆ ಚಾರಿತ್ರ್ಯ ಜೈನ್ ಹಾಗೂ ಕ್ರಿಶ್ಚಿಯನ್ ಧರ್ಮದ ಬಗ್ಗೆ ಪ್ರೀತಮ್ ಮಿನೇಜಸ್ ಇವರು ಸಾಮರಸ್ಯದ ಬಗ್ಗೆ ಮಾತನಾಡಿದರು.

ರಾ.ಸೇ.ಯೋಜನೆಯ ನಾಯಕಿ ದಕ್ಷಾ ಸ್ವಾಗತಿಸಿ , ಅಕ್ಷತಾ ಎಂ.ಜಿ ವಂದಿಸಿದರು. ಡಯಾನಾ ನಿರೂಪಿಸಿದರು.

Related posts

ಬಡಗಕಾರಂದೂರು ಶಾಲಾಭಿವೃದ್ಧಿಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಶಾಲಾ ಎಸ್.ಡಿ.ಎಂ.ಸಿ ಯಿಂದ ಶಾಸಕ ಹರೀಶ್ ಪೂಂಜಾರವರಿಗೆ ಮನವಿ ಸಲ್ಲಿಕೆ

Suddi Udaya

ಮಚ್ಚಿನ: ಅಂಗನವಾಡಿ ಶಾಲಾ ಮಕ್ಕಳಿಗೆ ಭಜನೆ ಪುಸ್ತಕ ವಿತರಣೆ

Suddi Udaya

ನಿವೃತ್ತಿಗೊಂಡ ಮುರಳಿ ಕೃಷ್ಣ ಆಚಾರ್ಯರಿಗೆ ಬಲ್ಮಠ ಸ.ಪ್ರ.ದ. ಮಹಿಳಾ ಕಾಲೇಜಿನಲ್ಲಿ ಸನ್ಮಾನ

Suddi Udaya

ನಡ-ಕನ್ಯಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

Suddi Udaya

ಡಾ| ವೈ.ಉಮಾನಾಥ ಶೆಣೈಯವರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ

Suddi Udaya

ಸುಲ್ಕೇರಿ ಬ್ರಹ್ಮ ಶ್ರೀ ಗುರು ನಾರಾಯಣ ಸೇವಾ ಸಮಿತಿಯಿಂದ ಸುಲ್ಕೇರಿ ಅಂಗನವಾಡಿ ಹಾಗೂ ಶ್ರೀರಾಮ ಶಾಲೆಯಲ್ಲಿ ಶ್ರಮದಾನ

Suddi Udaya
error: Content is protected !!