ಬೆಳ್ತಂಗಡಿ: ಚಂದ್ರಯಾನ 3 ಯಶಸ್ವಿಯಾದ ಹಿನ್ನೆಲೆಯಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮಿಸಲಾಯಿತು,
ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಹರ್ಷಿತ್ ಇವರು ಚಂದ್ರಯಾನ 3 ರ ಪ್ರಾಮುಖ್ಯತೆಯ ಬಗ್ಗೆ ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಮತ್ತು ರೆಡ್ ಕ್ರಾಸ್ ಘಟಕದ ಸ್ವಯಂ ಸೇವಕರಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ವಹಿಸಿ ಚಂದ್ರಯಾನ 3 ನಮ್ಮ ದೇಶದ ಹೆಮ್ಮೆ ಎಂದು ಸಂತಸದ ಮಾತುಗಳನ್ನಡಿದರು, ಉಪ ಪ್ರಾಂಶುಪಾಲರದ ವಿಷ್ಣು ಪ್ರಕಾಶ್, ಎನ್. ಎಸ್. ಎಸ್. ಯೋಜನಾಧಿಕಾರಿ ಶಂಕರ್ ರಾವ್, ರೋವರ್ಸ್ ರೇಂಜರ್ಸ್ ನಿರ್ದೇಶಕರುಗಳಾದ ಬೆಳಿಯಪ್ಪ ಮತ್ತು ರಕ್ಷಾ ಉಪಸ್ಥಿತರಿದ್ದರು.