32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕು.ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ 2011ರಲ್ಲಿ ನಡೆದ ಕು.ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಮಾಡಿದ ಪ್ರಕರಣ ಮರು ತನಿಖೆಗೆ ಆಗ್ರಹ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ. ಪ್ರಕಾಶ ರವರ ಮೂಲಕ ಆ.24 ರಂದು ಮನವಿ ನೀಡಿದರು.

ಈ ಸಂದರ್ಭದಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾದ ನವೀನ್ ಕುಮಾರ್ ವಾದ್ಯಕೋಡಿ, ಕಾರ್ಯದರ್ಶಿ ಕೇಶವ ಗೌಡ ಕಂಗಿತ್ತಿಲು, ಗೌರವ ಅಧ್ಯಕ್ಷ ನಾರಾಯಣ ಗೌಡ ಮೈಂದಕೋಡಿ, ತಾಲೂಕು ಸಂಘದ ನಿರ್ದೇಶಕ ರವೀಂದ್ರನಾಥ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದಯಾಮಣಿ, ಉಪಾಧ್ಯಕ್ಷ ಹರೀಶ್ ಗೌಡ , ತಾಲೂಕು ಯುವ ಗೌಡ ಸಂಘದ ಕಾರ್ಯದರ್ಶಿ ದಿನೇಶ್ ಗೌಡ, ಹಾಗೂ ಸಂಘದ ಮಾಜಿ ಅಧ್ಯಕ್ಷ ದಾಮೋದರ ಗೌಡ, ಗೀತಾ ರಾಮಣ್ಣ ಗೌಡ ಮತ್ತು ಗ್ರಾಮ ಸಮಿತಿ ಯುವ ಘಟಕ ಅಧ್ಯಕ್ಷ ಚಂದ್ರಶೇಖರ ಮಾವಿನ ಕಟ್ಟೆ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಗೌಡ, ಯಶವಂತ ಗೌಡ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸಂಘದ ಮಹಿಳಾ ಸದಸ್ಯರು ಹಾಜರಿದ್ದರು.

Related posts

ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕೊಕ್ರಾಡಿ ಸ.ಪ್ರೌ. ಶಾಲಾ ಶಿಕ್ಷಕಿ, ಅಕ್ಕಮ್ಮ ರವರಿಗೆ ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

Suddi Udaya

ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಿರ್ದೇಶಕರಾಗಿ ಸಹಕಾರ ಭಾರತಿ ಅಭ್ಯರ್ಥಿ ಉಮೇಶ್.ಎಂ.ಕೆ ಅವಿರೋಧವಾಗಿ ಆಯ್ಕೆ

Suddi Udaya

ತಣ್ಣೀರುಪಂತ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಟೈಲರಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟನೆ

Suddi Udaya

ಭೀಕರ ಮಳೆಗೆ ನಾವೂರು ಪೂವಪ್ಪ ಗೌಡ ರವರ ಮನೆಯ ಹಿಂಭಾಗ ಗುಡ್ಡ ಕುಸಿತ: ಅಪಾರ ಹಾನಿ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಕಂಪ್ಯೂಟರ್‌ ಅಕೌಂಟಿಂಗ್‌ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಉಜಿರೆ ಗ್ರಾ.ಪಂ.ನಲ್ಲಿ ಇಂಧನ ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು ಕೊಯ್ಲು ಬಗ್ಗೆ ಅರಿವು ಕಾರ್ಯಕ್ರಮ

Suddi Udaya
error: Content is protected !!