‍ಚಂದ್ರಯಾನ -3 ಯಶಸ್ಸಿನಲ್ಲಿ ಹಿರಿಯ ವಿಜ್ಞಾನಿ ಧರ್ಮಸ್ಥಳದ ಪಿ. ವಾಸುದೇವ ರಾವ್ ಸೇವೆ

Suddi Udaya

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ದಿ| ಪಿ. ಗಣಪತಿ ರಾವ್ ಹಾಗೂ ಲಕ್ಷ್ಮೀ ದಂಪತಿಯ ಪುತ್ರ ಪಣಿಯಾಡಿ ವಾಸುದೇವ ರಾವ್, ಇಸ್ರೋದಲ್ಲಿ ಹಿರಿಯ ವಿಜ್ಞಾನಿ, ಚಂದ್ರಯಾನದ ಉಪಗ್ರಹ ಹೊತ್ತೊಯ್ಯಲು ಎಲ್‌ವಿಎಂ-3 ಮತ್ತು ಎಲ್ 110-10 ರಾಕೆಟ್‌ ಗಳಿದ್ದು, ಈ ಪೈಕಿ ಇಂಧನ ಹಾಗೂ ಆಕ್ಸಿಜನ್ ಹೊತ್ತೊಯ್ಯುವ ಪ್ರಥಮ ಸ್ಟೇಜ್, ಎಲ್110-10ನ್ನು ತಯಾರಿ ಹಾಗೂ ಪರೀಕ್ಷೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಿಡಿ ಭಾಗವನ್ನು ಬೆಂಗಳೂರು ಎಚ್ ಎಎಲ್‌ನಲ್ಲಿ ಸಿದ್ಧಪಡಿಸಿ ಇಸ್ರೋದ ತಿರುವನಂತಪುರದಲ್ಲಿ ಇರುವ ಮಹೇಂದ್ರಗಿರಿಗೆ ಕಳುಹಿಸಿಕೊಡುವವರೆಗಿನ ಕಾರ್ಯವನ್ನು ತನ್ನ ತಂಡದೊಂದಿಗೆ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.

ಅವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಧರ್ಮಸ್ಥಳದಲ್ಲಿ, ಉಜಿರೆ ಎಸ್‌ ಡಿಎಂನಲ್ಲಿ ಪಿಯುಸಿ, ಬಳಿಕ ಮಂಗಳೂರು ಕೆಪಿಟಿ ಯಲ್ಲಿ ಡಿಪ್ಲೊಮಾ ರಾಜ್ಯಕ್ಕೆ 4ನೇ ರ್‍ಯಾಂಕ್, ಮಂಡ್ಯ ಡಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ (ರಾಜ್ಯಕ್ಕೆ 6ನೇ ರ್‍ಯಾಂಕ್ ಪಡೆದು ಇಸ್ರೋದ ತ್ರಿವೆಂಡ್ರಮ್‌ನಲ್ಲಿರುವ ಮಹೇಂದ್ರ ಗಿರಿಗೆ ನೇಮಕಗೊಂಡಿದ್ದರು.

ಇಸ್ರೋದಲ್ಲಿ 32 ವರ್ಷ ಸೇವೆ ಸಲ್ಲಿಸಿದ್ದು 2024 ಆಗಸ್ಟ್‌ಗೆ ನಿವೃತ್ತರಾಗಲಿದ್ದಾರೆ.

ಇವರು ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್ ರವರ ಸಹೋದರ.

ಪತ್ನಿ ಕಾವೇರಿ ಹಾಗೂ ಎಂಜಿನಿಯ‌ರ್ ಪದವಿ ಪೂರ್ಣಗೊಳಿಸಿದ ಮೂವರು ಪುತ್ರರೊಂದಿಗೆ ಬೆಂಗಳೂರಿನಲ್ಲಿದ್ದಾರೆ.

Leave a Comment

error: Content is protected !!