ಅಳದಂಗಡಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬೆಳ್ತಂಗಡಿ ಮತ್ತು ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆ ಇವರ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಬಾಲಕ -ಬಾಲಕಿಯರ ಖೋ -ಖೋ ಪಂದ್ಯಾಟ ವಂ. ಫಾ| ಎಲಿಯಾಸ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ, ಶ್ರೀಮತಿ ಸರಸ್ವತಿ (ಗ್ರಾಮ ಪಂಚಾಯತ್ ಅಧ್ಯಕ್ಷರು ಅಳದಂಗಡಿ ) ಇವರ ಅಮೃತ ಹಸ್ತದಿಂದ ಶಾಲಾ ಮಕ್ಕಳ ನೃತ್ಯದೊಂದಿಗೆ ಉದ್ಘಾಟನೆಗೊಂಡಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಸುಜಯ ಅವರು ತುಂಬಾ ಸುಂದರವಾಗಿ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದ ಶಾಲೆಯ ಸಂಚಾಲಕರಾದ ವಂ. ಫಾ| ಹಾಗೂ ಶಾಲಾ ಸಮಿತಿಗಳನ್ನು ಅಭಿನಂದಿಸಿ, ಎಲ್ಲಾ ಮಕ್ಕಳು ಉತ್ತಮವಾಗಿ ಆಟವಾಡಿ ಎಂದರು.
ಮಕ್ಕಳ ಬೆಳವಣಿಗೆಗೆ ಕ್ರೀಡೆ ಬಹಳ ಮುಖ್ಯವಾಗಿದ್ದು, ಎಲ್ಲಾ ಮಕ್ಕಳು ಖುಷಿಯಿಂದ ಖೋ -ಖೋ ಆಟ ಆಡಿ ವಿಜೇತರಾಗಿ ನಿಮ್ಮ ಶಾಲೆ, ಗ್ರಾಮಕ್ಕೆ, ತಾಲ್ಲೂಕಿಗೆ ಒಳ್ಳೆ ಹೆಸರನ್ನು ತನ್ನಿ ಎಂದು ಕ್ರೀಡಾ ಉದ್ಘಾಟಕರಾದ ಶ್ರೀಮತಿ ಸರಸ್ವತಿ ಅವರು ಆಶಿಸಿದರು.
ಸೋಲೇ ಗೆಲುವಿನ ಮೆಟ್ಟಿಲು, ಸತತ ಪ್ರಯತ್ನ ನಮ್ಮ ಯಶಸ್ಸನ್ನ ನಿರ್ಣಯಿಸುತ್ತೆ. ಹಾಗಾಗಿ ಎಲ್ಲರು ಚೆನ್ನಾಗಿ ಆಟವಾಡಿ ಎಂದು ದಕ್ಷಿಣಕನ್ನಡ ಖೋ ಖೋ ಅಸೋಸಿಯೆಷನ್ ಅಧ್ಯಕ್ಷರು , ಆಳ್ವಾಸ್ ಕಾಲೇಜು ದೈಹಿಕ ಶಿಕ್ಷಣ ಪ್ರಾಧ್ಯಾಪಕರು ಪ್ರದೀಪ್ ಎಸ್ ತಿಳಿಸಿದರು.
ಪ್ರತಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಕ್ರೀಡೆ ಅತೀ ಮಹತ್ವದ್ದು, ಹಾಗಾಗಿ ಎಲ್ಲಾ ಮಕ್ಕಳು ಒಳ್ಳೆಯ ಹುಮ್ಮಸಿನಿಂದ ಆಟವಾಡಿ ಹಾಗೂ ಎಲ್ಲರು ಪ್ರಥಮ ಸ್ಥಾನ ಬರಲು ಸಾಧ್ಯವಿಲ್ಲದಿದ್ದರೂ ನೀವೆಲ್ಲರೂ ಗೆಲ್ಲುವ ಗುರಿಯೊಂದಿಗೆ ಆಟವಾಡಿದಾಗ ಮುಂದೊಂದು ದಿನ ಯಶಸ್ಸಿನ ಶಿಖರವನ್ನ ತಲುಪುವಿರಿ ಎಂದು ಕಾರ್ಯಕ್ರಮದ ಅಧ್ಯಕ್ಷರಾದ ವಂದನೀಯ ಫಾದರ್ ಎಲಿಯಾಸ್ ಡಿಸೋಜ ಅವರು ಮಕ್ಕಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬ್ದುಲ್ ಖಾದರ್, ಪ್ರಶಾಂತ್ ವೇಗಸ್, ಕುಮಾರಿ ಲಲಿತಾ, ನಾರಾವಿ ವಲಯ ಕ್ರೀಡಾ ಮೇಲ್ವಚಾರಕರಾದ ಶ್ರೀ ಕೃಷ್ಣಪ್ಪ ಪೂಜಾರಿ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸ್ಟಿವನ್ ಪಾಯ್ಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ಯಾಮ ಸುಂದರ ಭಟ್, ಹಾಗೂ ಶಾಲಾ ಸಹ ಶಿಕ್ಷಕಿ ಸಿಸ್ಟರ್ ಫ್ರಾನ್ಸಿಸ್ ಮೇರಿ ಉಪಸ್ಥಿತರಿದ್ದರು.
ಕ್ರೀಡಾಂಗಣದ ಉದ್ಘಾಟನೆಯನ್ನು ವಂದನೀಯ ಫಾದರ್ ಎಲಿಯಾಸ್ ಡಿಸೋಜ, ಪ್ರದೀಪ್ ಎಸ್, ಶ್ಯಾಮ್ ಸುಂದರ್ ಭಟ್ ಇವರು ನೆರವೇರಿಸಿದರು.