ಉಜಿರೆ ರಬ್ಬರ್ ಸೊಸೈಟಿ : ರೂ.17.98 ಲಕ್ಷ ನಿವ್ವಳ ಲಾಭ-ಸದಸ್ಯರಿಗೆ ಶೇ.7 ಡಿವಿಡೆಂಟ್ : ರೂ.5ಸಾವಿರ ಮಿತಿಗೊಳಪಟ್ಟ ಖರೀದಿಗೆ ಬೋನಸ್

Suddi Udaya

ಉಜಿರೆ: 2022-23 ನೇ ಸಾಲಿನಲ್ಲಿ ಉಜಿರೆ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕಾಣಾ ಸಹಕಾರ ಸಂಘವು ರೂ.17.89 ಲಕ್ಷ ನಿವ್ವಳ ಲಾಭ ಗಳಿಸಿರುತ್ತಿದ್ದು ಸದಸ್ಯರಿಗೆ ಶೇ.7 ಪಾಲು ಡಿವಿಡೆಂಟ್ ಘೋಷಿಸಲಾಗಿದೆ. ಸಂಘಕ್ಕೆ ರಬ್ಬರು ಮಾರಾಟ ಮಾಡಿದ ಸದಸ್ಯರಿಗೆ ಕಿಲೋ ಒಂದರ ರೂ.0.50 ರಂತೆ ಗರಿಷ್ಠ ರೂ.5 ಸಾವಿರ ಮಿತಿಗೊಳಪಟ್ಟು ಖರೀದಿ ಬೋನಸ್ ನೀಡುವುದಾಗಿ ನಿರ್ಣಯಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಜಿ. ಭಿಡೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ವಿಶೇಷ ಸಾಧನೆ: ಸದಸ್ಯರ ಉತ್ಪನ್ನಗಳಿಗೆ ಅತ್ಯಧಿಕ ಧಾರಣೆ ದೊರೆಯಲು ಅನುಕೂಲವಾಗುವಂತೆ ಸದಸ್ಯರನ್ನು ಅಂತರರಾಷ್ಟ್ರೀಯವಾಗಿ ಅತ್ಯುತ್ತಮ ದರ್ಜೆಯ ರಬ್ಬರಾದ RSS-IX ಕಲ್ಟರ್ ತಯಾರಿಸಲು ಪ್ರೋತ್ಸಾಹಿಸಿ ಮಾರುಕಟ್ಟೆ ಒದಗಿಸಿರುತ್ತದೆ. ವರದಿ ಸಾಲಿನಲ್ಲಿ ಒಟ್ಟು 277 RSS-IX ರಬ್ಬರ್ ಉತ್ಪಾದನೆಯಾಗಿದೆ. ಈ ದರ್ಜೆಯ ರಬ್ಬರಿಗೆRSS 4 ರ ಧಾರಣೆಗಿಂತ ಕನಿಷ್ಠ ರೂ. 10.00 ರಿಂದ ರೂ.20. ರವರೆಗೆ ಅಧಿಕ ಧಾರಣೆಯು ಬೆಳೆಗಾರರಿಗೆ ದೊರಕಿರುತ್ತದೆ. ಸಂಘದ ವ್ಯವಹಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಂಘದ ಸದಸ್ಯರು ಬೆಳೆಸಿದ ಕಾಳುಮೆಣಸು ಖರೀದಿ ವ್ಯವಹಾರವನ್ನು ಪ್ರಾರಂಭಿಸಲಾಗಿರುತ್ತದೆ. ವರದಿ ಸಾಲಿನಲ್ಲಿ ಒಟ್ಟು 4.19ಲಕ್ಷ ಮೌಲ್ಯದ 870.300 ಕೆ.ಜಿ ಕಾಳುಮೆಣಸು ಖರೀದಿ ಮಾಡಲಾಗಿದೆ. 3) ಸದಸ್ಯರ ಉತ್ಪನ್ನಕ್ಕೆ ಅಧಿಕ ಧಾರಣೆ ದೊರೆಯಲು ಅನುಕೂಲವಾಗುವಂತೆ ರಬ್ಬರನ್ನು ಸಂಘದಲ್ಲಿ ದಾಸ್ತನು ಇಡುವ ಸೌಲಭ್ಯ ನೀಡುತ್ತಿದ್ದು, ವರದಿ ಸಾಲಿನಲ್ಲಿ ಸುಮಾರು 11054ಟನ್ ರಬ್ಬರ್ ಸಂಘದಲ್ಲಿ ದಾಸ್ತಾನು ಇಡಲಾಗಿದ್ದು ಸುಮಾರು 250ಕ್ಕೂ ಮೇಲ್ಪಟ್ಟು ಸದಸ್ಯರು ಇದರ ಪ್ರಯೋಜನ ಪಡಕೊಂಡಿರುತ್ತಾರೆ. ಬೆಳೆಗಾರರಿಗೆ ಸ್ಪರ್ಧಾತ್ಮಕ ದರದಲ್ಲಿ ಕ್ಲಪ್ತ ಸಮಯದಲ್ಲಿ ರಸಗೊಬ್ಬರ ಒದಗಿಸಲು ಕ್ರಮ ಕೈಗೊಂಡು ವರದಿ ಸಾಲಿನಲ್ಲಿ 600ಟನ್ ರಸಗೊಬ್ಬರ ಮಾಡಲಾಗಿದೆ. ನಮ್ಮ ಜಿಲ್ಲೆಯ ವಿವಿಧ ರಬ್ಬರು ವ್ಯವಹಾರ ನಡೆಸುವ ಇತರ ಸಂಸ್ಥೆಗಳಿಗೂ ಮಾರುಕಟ್ಟೆ ಒದಗಿಸುವಲ್ಲಿ ಸಹಕರಿಸಲಾಗಿರುತ್ತದೆ. ನೈಜ ರಬ್ಬರನ್ನು ಮುಖ್ಯವಾಗಿ ರಾಷ್ಟ್ರದ ಪ್ರತಿಷ್ಠಿತ ಟಯರ್ ಕಂಪೆನಿಗಳಾದ MRF ಮತ್ತು Apollo ಅಲ್ಲದೆ ದೇಶದ ಮೂಲೆ ಮೂಲೆಯ ಸುಮಾರು 150ಕ್ಕೂ ಮೇಲ್ಪಟ್ಟು ಉತ್ಪಾದಕ ಕಂಪೆನಿಗಳೊಂದಿಗೆ ವ್ಯವಹರಿಸಲಾಗಿದ್ದು, ಕೃಷಿಕರ ಉತ್ಪನ್ನಗಳನ್ನು ಉತ್ಪಾದಕರಿಗೆ ನೇರವಾಗಿ ಮಾರಾಟ ಮಾಡುವ ಮೂಲಕ ಬೆಳೆಗಾರರಿಗೆ ಗರಿಷ್ಠ ಧಾರಣೆ ಸಿಗುವಂತೆ ಪ್ರಯತ್ನಪಡುತ್ತಿದ್ದೇವೆ. ಸಂಸ್ಕರಣ ಘಟಕದ ಆವರಣದಲ್ಲಿ ವೇಬ್ರಿಡ್ಜ್ ನಿರ್ಮಿಸಲಾಗಿದ್ದು ಇದರ ಉಪಯೋಗವನ್ನು ಸಾರ್ವಜನಿಕರು ಪಡಕೊಳ್ಳಬಹುದಾಗಿದೆ ಎಂದು ತಿಳಿಸಿದರು.


ಸಂಘದ ಪ್ರಮುಖ ಯೋಜನೆಗಳು: ಸಂಘವು ನಡೆಸುತ್ತಿರುವ ಎಲ್ಲಾ ಖರೀದಿ ಕೇಂದ್ರಗಳನ್ನು ಕಂಪ್ಯೂಟರೀಕರಣಗೊಸಿ ಆನ್‌ಲೈನ್ ಮಾಡುವುದು. ಸಂಘದ ವ್ಯವಹಾರ ವಿಸ್ತರಿಸುವ ನಿಟ್ಟನಲ್ಲಿ ತಾಲೂಕಿನಲ್ಲಿ ಹಾಗೂ ತಾಲೂಕಿನ ಹೊರಗಡೆ ಅಗತ್ಯವಿದ್ದ ಸೇವಾ ಕೇಂದ್ರ ತೆರೆಯುವುದು..ಸಂಘದ ಶಾಖೆಗಳಿಗೆ ಸ್ವಂತ ನಿವೇಶನ ಖರೀದಿಸಿ ಸ್ವಂತ ಕಟ್ಟಡ ರಚನೆ ಮಾಡುವುದು. ರಬ್ಬರು ಮಂಡಳಿಯ ಸಹಯೋಗದೊಂದಿಗೆ ರಬ್ಬರು ಟ್ಯಾಪಿಂಗ್ ತರಬೇತಿ ಶಾಲೆ ಪ್ರಾರಂಭಿಸುವುದು.
ಸಂಘದ ಖರೀದಿ ಕೆಂದ್ರಗಳು :
ಗುರುವಾಯನಕೆರೆ, ಹೆಬ್ರಿ, ಗಂಡಿಬಾಗಿಲು, ತೋಟತ್ತಾಡಿ, ಅರಸಿನಮಕ್ಕಿ, ಶಿಬಾಜೆ, ಮುಂಡ್ರಪ್ಪಾಡಿ, ಕಾಯರ್ತಡ್ಕ, ಅಣಿಯೂರು, ಕಕ್ಕಿಂಜೆ, ಇಂದಬೆಟ್ಟು, ಕಡಿರುದ್ಯಾವರ, ಸಾಗರ, ನರಸಿಂಹರಾಜಪುರ, ಜಡ್ಕಲ್, ಹೊಸ್ಮಾರು, ಕಾರ್ಕಳ, ಉಪ್ಪಿನಂಗಡಿ, ಮೂರ್ಜೆ, ಕಾವು, ವಿಟ್ಲ, ತೀರ್ಥಹಳ್ಲೀ, ಪಡಂಗಡಿ, ಸಿದ್ಧಕಟ್ಟೆ, ಬೆಳಾಲು, ಶಿರ್ತಾಡಿ, ಮುಂಡಾಜೆ, ಈಶ್ವರ ಮಂಗಳ, ನಿಡ್ಲೆ, ಪಾಣಾಜೆ, ಕೊಕ್ಕಡ, ಅಜೆಕಾರು, ಅಳದಂಗಡಿ ಮುಂತಾದ ಕಡೆ ಖರೀದಿ ಕೇಂದ್ರಗಳನ್ನು ಹೊಂದಿದೆ ಎಂದರು.

ಸಂಸ್ಕರಣ ಘಟಕಗಳು: ಸಂಘದಿಂದ ನಡೆಸಲ್ಪಡುವ ಉತ್ಪಾದನಾ ಘಟಕದ ವಾಹನದ ಬಿಡಿ ಭಾಗ, ದ್ವಿಚಕ್ರ ವಾಹನಗಳ ಫೂಟ್‌ಮ್ಯಾಟ್, ಪಂಪ್‌ಸೆಟ್ ಬಿಡಿ ಭಾಗ, ಕೈಗಾರಿಕಾ ವಸ್ತುಗಳು, ಮಡ್‌ಗಾರ್ಡ್‌ ಪ್ಲಾಪ್, ಟಯರ್ ಪ್ಲಾಪ್ಅಲ್ಲದೆ ಕೆಲವು ಕೈಗಾರಿಕೆಗೆ ಬೇಕಾದ ರಬ್ಬರು ಬಿಡಿಭಾಗಗಳ ಉತ್ಪಾದನೆಯೊಂದಿಗೆ ವರದಿ ಸಾಲಿನಲ್ಲಿ ಒಟ್ಟು ರೂ 1.29 ಕೋಟ ಮಾರಾಟ ಉತ್ಪಾದನಾ ಘಟಕದಲ್ಲಿ ಸಾಧಿಸಲಾಗಿರುತ್ತದೆ.

ವರದಿ ಸಾಲಿನಲ್ಲಿ ಮುಖ್ಯವಾಗಿ ವಿಎಸ್ ಟಿ ಟಿಲ್ಲರ್ ನ ಬಿಡಿ ಭಾಗ ಮತ್ತು ಕೇಜ್ ಮ್ಯಾಟ್ ಉತ್ಪಾದನೆ ಮಾಡಿರುತ್ತಿದ್ದು ಉತ್ತಮ ಬೇಡಿಕೆ ಇರುತ್ತದೆ. ವರದಿ ಸಾಲಿನಲ್ಲಿ ಕಾರ್ಖಾನೆಯ ಸಾಮರ್ಥ್ಯದ ಶೇ.94ರಷ್ಟು ಉತ್ಪಾದನೆ ಮಾಡಲಾಗಿದೆ.

ಸಂಘದಿಂದ ನಡೆಸಲ್ಪಡುವ ರಬ್ಬರು ನರ್ಸರಿಯು ಉಜಿರೆಯಿಂದ 4ಕಿ.ಮಿ ದೂರದಲ್ಲಿ, ಕನ್ಯಾಡಿ ಗ್ರಾಮದ ಗುರಿಪಳ್ಳದಲ್ಲಿ ಸಂಘವು ಸ್ವಂತ ಜಾಗ ಖರೀದಿಸಿ ನರ್ಸರಿ ಸ್ಥಾಪಿಸಿದ್ದು ವರದಿ ಸಾಲಿನಲ್ಲಿ ಒಟ್ಟು 7460 ತೊಟ್ಟಿ ಗಿಡಗಳನ್ನು ಮಾರಾಟ ಮಾಡಲಾಗಿದ್ದು, ರಬ್ಬರು ಧಾರಣೆಯು ಕಡಿಮೆ ಇರುವುದರಿಂದ ಬೆಳೆಗಾರರು ಹೊಸದಾಗಿ ರಬ್ಬರು ಕೃಷಿಗೆ ಆಸಕ್ತಿ ತೋರಿಸದಿರುವ ಕಾರಣ ನರ್ಸರಿ ನಷ್ಟದಲ್ಲಿರುತ್ತದೆ.

ಸದಸ್ಯರ ಬಹುದಿನದ ಬೇಡಿಕೆಯಾಗಿದ್ದ ರಬ್ಬರು ಹಾಲು ಖರೀದಿಯನ್ನು ಪ್ರಾರಂಭಿಸಿರುತ್ತಿದ್ದು ವರದಿ ಸಾಲಿನಲ್ಲಿ ಒಟ್ಟು ರೂ.67.14ಲಕ್ಷದ ಲ್ಯಾಟೆಕ್ಸ್ ಮಾರಾಟ ಮಾಡಲಾಗಿರುತ್ತದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅನಂತ ಭಟ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜು ಶೆಟ್ಟಿ, ನಿದೇ೯ಶಕರುಗಳಾದ ಸೋಮನಾಥ ಬಂಗೇರ, ಹೆಚ್. ಪದ್ಮ ಗೌಡ,‌ .ಕೆ. ಜೆ. ಅಗಸ್ಟಿನ್, ವಿ.ವಿ. ಅಬ್ರಾಹಂ, ಕೆ.ಬಾಲಕೃಷ್ಣ ಗೌಡ, ಬೈರಪ್ಪ, ಕೆ. ರಾಮ ನಾಯ್ಕ, ಅಬ್ರಾಹಂ ಬಿ.ಎಸ್ ಮೊದಲಾದವರು ಉಪಸ್ಥಿತರಿದ್ದರು.

Leave a Comment

error: Content is protected !!