ಧರ್ಮಸ್ಥಳದಿಂದ ನಾರಾವಿಗೆ ಕೆಎಸ್ಸಾರ್ಟಿಸಿ ಬಸ್ ಮಂಜೂರು – ಶಾಸಕರ ಶಿಫಾರಸ್ಸಿನಂತೆ ಬಸ್ಸು ಮಂಜೂರಾಗಿದ್ದರೆ, ಅವರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ- ಬಸ್ಸು ಮಂಜೂರು ಮಾಡಿಸಿದ್ದು, ನಾನೇ ಎಂದು ನಾನು ಪ್ರಮಾಣ ಮಾಡುತ್ತೇನೆ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ ಸವಾಲು

Suddi Udaya

ಬೆಳ್ತಂಗಡಿ: ಧರ್ಮಸ್ಥಳದಿಂದ ನಾರಾವಿಗೆ ಕೆಎಸ್ಸಾರ್ಟಿಸಿ ಬಸ್ ಮಂಜೂರು ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ನಾನು ಪತ್ರ ಬರೆದಿದ್ದೆ. ಬಸ್ಸು ಮಂಜೂರುಗೊಂಡ ಬಳಿಕ ಶಾಸಕರು ತನ್ನ ಶಿಫಾರಸ್ಸಿನಂತೆ ಬಸ್ಸು ಮಂಜೂರುಗೊಂಡಿದೆ ಎಂದು ಹೇಳಿದ್ದಾರೆ. ಅದು ಹೌದಾಗಿದ್ದರೆ ಅವರು ಧರ್ಮಸ್ಥಳ ಮಂಜುನಾಥ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ, ಬಸ್ಸು ಮಂಜೂರು ಮಾಡಿಸಿದ್ದು, ನಾನೇ ಎಂದು ನಾನು ಪ್ರಮಾಣ ಮಾಡುತ್ತೇನೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಸವಾಲು ಹಾಕಿದ್ದಾರೆ.

ಅವರು ಆ.26ರಂದು ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನಾರಾವಿಯಿಂದ ಆರಂಭವಾಗಿ ಗುರುವಾಯನಕೆರೆ ಮಧ್ಯೆ ಧರ್ಮಸ್ಥಳ ಮಂಗಳೂರು ಕಡೆಗೆ ಹೋಗುವ ಹಲವಾರು ವಿದ್ಯಾರ್ಥಿಗಳು ಬೇರೆ, ಬೇರೆ ಇಲಾಖೆಗಳಲ್ಲಿ ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಸ್ಥರು ಇತರ ಸಾರ್ವಜನಿಕರು ದಿನ ನಿತ್ಯ ಸಂಚರಿಸಲು ಸಾರಿಗೆ ವ್ಯವಸ್ಥೆ ಇರುವುದಿಲ್ಲ ಎಂದು ಸಲ್ಲಿಸಿದ ಬೇಡಿಕೆಯಂತೆ ನಾನು ಸಾರಿಗೆ ಸಚಿವರಿಗೆ, ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಬಸ್ಸು ಮಂಜೂರಾತಿಗೆ ಒತ್ತಾಯಿಸಿದ್ದೇನೆ. ಅದರಂತೆ ಈಗ ಧರ್ಮಸ್ಥಳದಿಂದ ನಾರಾವಿಗೆ ಬಸ್ಸು ಮಂಜೂರುಗೊಂಡಿದೆ. ಆದರೆ ಶಾಸಕ ಹರೀಶ್ ಪೂಂಜ ಅವರು ಬಸ್ಸು ತನ್ನ ಶಿಫಾರಸ್ಸಿನಂತಗೆ ಮಂಜೂರುಗೊಂಡಿರುವುದಾಗಿ ಹೇಳಿದ್ದು, ಮಾಧ್ಯಮಗಳಲ್ಲಿ ಬಂದಿದೆ. ಅವರು ಮಂಜೂರು ಮಾಡಿರುವುದು ಹೌದದಾರೆ ಅವರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ, ನಾನು ಬಂದು ನಾನೇ ಮಂಜೂರು ಮಾಡಿಸಿರುವುದು ಎಂದು ಪ್ರಮಾಣ ಮಾಡುತ್ತೇನೆ ಎಂದು ತಿಳಿಸಿದರು. ಮಂಜೂರಾದ ಬಸ್ಸು ಆ.25ಕ್ಕೆ ಚಾಲನೆ ದೊರೆಯಬೇಕಿತ್ತು. ಇದನ್ನು ರದ್ದುಗೊಳಿಸಿರುವುದು ನಾನೇ, ಮುಂದಕ್ಕಾದರೂ ಈ ರೀತಿ ಮಾಡಬಾರದು. ಬಸ್ಸನ್ನು ಶಾಸಕರೇ ಉದ್ಭಾಟಿಸಬೇಕು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು, ಈ ರೀತಿಯ ರಾಜಕೀಯ ಮಾಡಿದರೆ ನಾನು ಸಂಬಂಧಪಟ್ಟವರನ್ನು ತರಿಸಿ ಉದ್ಭಾಟಿಸುತ್ತೇನೆ ಎಂದು ತಿಳಿಸಿದರು. ಮುಂದೆ ನಿಮ್ಮನ್ನೇ ಕೇಳಿಯೇ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯ ಮಾಡಬೇಕಾ ಎಂದು ಪತ್ರಕರ್ತರೊರ್ವರು ಕೇಳಿದ ಪ್ರಶ್ನೆಗೆ ಗರಂ ಆದ ಬಂಗೇರರು ನಾನು ಮೊದಲೇ ಹೇಳಿದ್ದೇನೆ. ಬಸ್ಸು ಉದ್ಘಾಟನೆ ಶಾಸಕರೇ ಮಾಡಬೇಕೆಂದು ಆದರೆ ಇದರಲ್ಲಿ ರಾಜಕೀಯ ತರಬಾರದು ಎಂದು ಸ್ವಷ್ಟಪಡಿಸಿದರು.

Leave a Comment

error: Content is protected !!