28.1 C
ಪುತ್ತೂರು, ಬೆಳ್ತಂಗಡಿ
September 10, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿ

ಅಲ್ಯುಮಿನಿಯಂ ದೋಂಟಿಗೆ ವಿದ್ಯುತ್ ಸ್ಪರ್ಷ: ಸಿಹಿಯಾಳ ತೆಗೆಯುತ್ತಿದ್ದ ಕೃಷಿಕ ಸಾವು

ಬೆಳ್ತಂಗಡಿ: ಅಲ್ಯೂಮಿನಿಯಂ ಏಣಿಯು ಆಕಸ್ಮಿಕವಾಗಿ ವಿದ್ಯುತ್‌ ತಂತಿಗೆ ಸ್ಪರ್ಷಿಸಿ ಕಲ್ಮಂಜ ಗ್ರಾಮದ ಅಂಬಟೆ ಮನೆ ನಿವಾಸಿ, ಕೃಷಿಕ ಶಶಿಧರನ್ ನಾಯರ್ (68) ಸಾವನ್ನಪ್ಪಿದ್ದಾರೆ.

ಆ.12 ರಂದು ಶಶಿಧರನ್ ಅವರು ಮನೆಯ ಹತ್ತಿರ ಇರುವ ತೋಟದ ತೆಂಗಿನ ಮರದಿಂದ ಸೀಯಾಳ ತೆಗೆಯಲೆಂದು ಮನೆಯಲ್ಲಿದ್ದ ಅಲ್ಯುಮಿನಿಯಂ ದೋಂಟಿಯನ್ನು ತೆಗೆದುಕೊಂಡು ಹೋಗಿದ್ದು ಹೋದ ಸ್ವಲ್ಪ ಹೊತ್ತಿನಲ್ಲಿ ಜೋರಾಗಿ ಬೊಬ್ಬೆ ಹಾಕಿದಂತೆ ಶಬ್ದ ಕೇಳಿಬಂದಿತ್ತು. ಈ ವೇಳೆ ಪತ್ನಿ ‌ಜಯಪ್ರಕಾಶಿನಿ ಹಾಗೂ ಮನೆಯಲ್ಲಿದ್ದ ಆಂಟನಿ ಹೋಗಿ ನೋಡಿದಾಗ ಶಶಿಧರ‌ನ್ ಪ್ರಜ್ಞೆ ತಪ್ಪಿ ಬಿದ್ದಿದ್ದರು.

ಕೂಡಲೇ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದಾಗ‌ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವ ಕಾದಾಡಿ ತಿಳಿಸಿದ್ದಾರೆ.

ಅವರ ತೋಟದಲ್ಲಿ ಮೇಲ್ಗಡೆ ವಿದ್ಯುತ್‌ ತಂತಿಯು ಹಾದು ಹೋಗಿದ್ದು ವಿದ್ಯುತ್‌ ತಂತಿಗೆ ಶಶಿಧರ್‌ ನಾಯರ್‌ ರವರು ಹಿಡಿದುಕೊಂಡಿದ್ದ ಅಲ್ಯೂಮಿನಿಯಂ ದೋಂಟಿ ಆಕಸ್ಮಿಕವಾಗಿ ತಗುಲಿ ಅದರ ಮೂಲಕ ಶಶಿಧರನ್‌ ರವರ ದೇಹಕ್ಕೆ ವಿದ್ಯುತ್ ಪ್ರವಾಹಿಸಿ ವಿದ್ಯುತ್‌ ಶಾಕ್‌ ಹೊಡೆದು ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಕೇಸು ದಾಖಲಿಸಿದ್ದಾರೆ.

Related posts

ವೇಣೂರು ಎಸ್.ಡಿ.ಎಂ ಐಟಿಐ ಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಉಮೇಶ್ ಕೆ. ರವರಿಗೆ ಬೀಳ್ಕೊಡುಗೆ

Suddi Udaya

ಇಲಾಖಾಧಿಕಾರಿಗಳ ಗೈರು ಹಾಜರಾತಿಗೆ ಗ್ರಾಮಸ್ಥರು ಅಸಮಾಧಾನ- ಅಳದಂಗಡಿ ಗ್ರಾಮ ಸಭೆ

Suddi Udaya

ಸುದೆಮುಗೇರು ಅಂಗನವಾಡಿಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ : 9‌ಮಂದಿ ಪೌರ‌ ಕಾರ್ಮಿಕರಿಗೆ ಗೌರವಾರ್ಪಣೆ – ದಾನಿಗಳಿಗೆ ಸನ್ಮಾನ

Suddi Udaya

ಯಕ್ಷಗಾನ ಕಲಾವಿದ ರಮೇಶ್ ಶೆಟ್ಟಿ ಪೆರಿಂಜೆ ಅವರಿಗೆ ಸಿದ್ದಕಟ್ಟೆ ಯಕ್ಷ ಮಿತ್ರ ಪ್ರಶಸ್ತಿ ಪ್ರದಾನ

Suddi Udaya

ಉಜಿರೆ: ವಿನೋದ್ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ

Suddi Udaya

ಶಿಬರಾಜೆ ಪಾದೆ ಕುಶಾನಿ ರವರ ಹುಟ್ಟುಹಬ್ಬದ ಪ್ರಯುಕ್ತ ಅಂಗನವಾಡಿಗೆ ಚಾಪೆ ಕೊಡುಗೆ

Suddi Udaya
error: Content is protected !!