23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಕರ್ನಾಟಕ ಮುಸ್ಲಿಂ ಜಮಾಅತ್ ಕಾಜೂರ್ ಸರ್ಕಲ್ : ಪ್ರಜಾಭಾರತ ಸಂಗಮ

ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾಅತ್ ಕಾಜೂರು ಸರ್ಕಲ್ ಇದರ ವತಿಯಿಂದ ಆ.25 ರಂದು ಕಿಲ್ಲೂರು ಆಶಿಕ್ ಮನ್ಝಿಲ್ ನಲ್ಲಿ ಸವ೯ಧರ್ಮಿಯರ ಸೌಹಾದ೯ ಒಗ್ಗೂಡುವಿಕೆಯಲ್ಲಿ ಪ್ರಜಾಭಾರತ ಕಾರ್ಯಕ್ರಮ‌ ನಡೆಯಿತು.

ಕಾಜೂರು ಸರ್ಕಲ್ ಅಧ್ಯಕ್ಷ ದಿಡುಪೆ ಮುಹಮ್ಮದ್ ಅಲ ಅಧ್ಯಕ್ಷತೆ ವಹಿಸಿದ್ದರು. ಇಸ್ಮಾಯಿಲ್ ಫೈಝಿ ದುಆ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ಕೃಷ್ಣಪ್ಪ ಪೂಜಾರಿ ಕಿಲ್ಲೂರು, ತುಂಗಪ್ಪ ಪೂಜಾರಿ ಕಾಜೂರು, ವೀರಪ್ಪ ದೇವಾಡಿಗ ಬಂಗಾಡಿ ತಮ್ಮ ಬಾಲ್ಯ ಕಾಲದ ಸೌಹಾರ್ದದ ಬದುಕನ್ನು ಹಂಚಿಕೊಂಡರು.

ಕಾಜೂರು ದರ್ಗಾ ಶರೀಫ್ ಮುದರ್ರಿಸ್ ತೌಸೀಫ್ ಸ‌ಅದಿ ಹರೇಕಳ ಮುಖ್ಯ ಭಾಷಣ ಮಾಡಿ ಕೋಮು ಸೌಹಾರ್ದತೆಯ ಅನಿವಾರ್ಯತೆಯನ್ನು ತಿಳಿಸಿದರು.

ಕಾಜೂರು ದರ್ಗಾ ಶರೀಫಿನ ಪ್ರಧಾನ ಕಾರ್ಯದರ್ಶಿ ಎಸ್‌ವೈಎಸ್ ಬೆಳ್ತಂಗಡಿ ಝೋನ್ ಕೋಶಾಧಿಕಾರಿ ಜೆ.ಎಚ್. ಅಬೂಬಕ್ಕರ್ ಸಿದ್ದೀಕ್ ಕಾಜೂರು, ಝೋನ್ ಸದಸ್ಯ ಕೆ.ಪಿ ಮುಹಮ್ಮದ್, ಕಿಲ್ಲೂರು ಮಸೀದಿ ಉಸ್ತುವಾರಿ ಹಂಝತ್, ಕೆ ಮುಹಮ್ಮದ್ ಕಿಲ್ಲೂರು ಹಾಗೂ ಎರ್ಮಾಳ, ಕಿಲ್ಲೂರು, ಪೆರ್ದಾಡಿ, ಕಾಜೂರು ಯುನಿಟ್ ಮತ್ತು ಸರ್ಜಲ್ ಗಳ ಪ್ರಮುಖರು ಪಾಲ್ಗೊಂಡಿದ್ದರು.

Related posts

ಅ. 25: ಬರೆಂಗಾಯದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕೊಕ್ಕಡ ವಲಯದಲ್ಲಿ ಸಿದ್ಧಿವಿನಾಯಕ ಹೊಸ ಸಂಘ ರಚನೆ

Suddi Udaya

ಭಾರೀ ಮಳೆಗೆ ಪಟ್ರಮೆ ಹಟ್ಟೆಕಲ್ಲು ನಲ್ಲಿ ಮನೆಯ ಗೋಡೆ ಕುಸಿತ

Suddi Udaya

ಯಶೋವರ್ಮರವರ ಜನ್ಮದಿನದ ಪ್ರಯುಕ್ತ ಎಸ್‌ಡಿಎಂ ಬಿವೋಕ್ ವಿಭಾಗದ ವತಿಯಿಂದ ವಿವಿಧ ಕಾರ್ಯಕ್ರಮ

Suddi Udaya

ಬಳೆಂಜ: ಕಾಪಿನಡ್ಕದಲ್ಲಿ ಪ್ರವಾಸಿಗರ ಕಾರು ಧರೆಗೆ ಡಿಕ್ಕಿ; ಚಾಲಕ ಸೇರಿದಂತೆ ಪ್ರಯಾಣಿಕರಿಗೆ ಗಾಯ

Suddi Udaya

ಕಸ್ತೂರಿ ರಂಗನ್ ವರದಿ ವಿರೋಧಿಸಿ ನಾರಾವಿ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya
error: Content is protected !!