24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಧರ್ಮಸ್ಥಳದಲ್ಲಿ ಯಾತ್ರಾರ್ಥಿಯ ಬ್ಯಾಗ್‌ನಲ್ಲಿದ್ದ ನಗದು ಸಹಿತ ರೂ.2 ಲಕ್ಷ ಸೊತ್ತು ಕಳವು: ದೇವರ ದರ್ಶನಕ್ಕೆ ಹೋಗಿದ್ದಾಗ ಕಾರಿನ ಗಾಜು ಒಡೆದು ಕೃತ್ಯ

ಧರ್ಮಸ್ಥಳ : ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ಬಂದಿದ್ದ ಗದಗ ಮೂಲದ ಯಾತ್ರಾರ್ಥಿಗಳ ಕಾರಿನ ಗಾಜು ಒಡೆದು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಗದಗ ಮಾಗಡಿ ಗ್ರಾಮದ ನಿವಾಸಿ ಬಸವರಾಜ ಗುಡಸಲಮನಿ ಎಂಬವರು ಆ.26 ರಂದು ಬೆಳಿಗ್ಗೆ ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ತಮ್ಮ ಕಾರಿನಲ್ಲಿ ಬಂದಿದ್ದರು. ಕಾರನ್ನು ಲಾಕ್ ಮಾಡಿ ದೇವಸ್ಥಾನದ ಹತ್ತಿರ ನಿಲ್ಲಿಸಿ ದೇವರ ದರ್ಶನಕ್ಕೆ ಹೋಗಿದ್ದ ವೇಳೆ ಈ ಕೃತ್ಯ ನಡೆದಿದೆ. ಕಳ್ಳರು ಅವರು ದೇವರ ದರ್ಶನಕ್ಕೆ ಹೋಗಿದ್ದ ವೇಳೆ ಕಾರಿನ ಗಾಜನ್ನು ಒಡೆದು ಕಾರಿನ ಒಳಗಿದ್ದ ವ್ಯಾನಿಟಿ ಬ್ಯಾಗ್ ನಲ್ಲಿಟ್ಟಿದ್ದ ರೂ.1.96 ಲಕ್ಷ ಮೌಲ್ಯದ 40 ಗ್ರಾಂ ತೂಕದ ಕರಿಮಣಿ ಸರ ಮತ್ತು ಸುಮಾರು ರೂ. 4 ಸಾವಿರ ಮೌಲ್ಯದ 1 ಮೊಬೈಲ್‌ನ್ನು ಕಳವು ಗೈದಿದ್ದರು.

ಬಸವರಾಜು ಅವರು ದೇವರ ದರ್ಶನ ಮುಗಿಸಿ ಹಿಂತಿರುಗಿದ ವೇಳೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ನ್ನು ಯಾರೋ ಕಳ್ಳರು ಒಡೆದು ಅದರಲ್ಲಿದ್ದ ವಸ್ತುಗಳನ್ನು ಕಳವುಗೈದಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪುಂಜಾಲಕಟ್ಟೆ  ಕರ್ನಾಟಕ ಪಬ್ಲಿಕ್ ಶಾಲೆ : ಶಾಲಾ ಪ್ರಾರಂಭೋತ್ಸವ

Suddi Udaya

ಶ್ರೀ ರಾಮಕ್ಷೇತ್ರದಲ್ಲಿ 63ನೇ ವರ್ಷದ ಶ್ರೀರಾಮ ತಾರಕ ಮಂತ್ರ ಸಪ್ತಾಹಕ್ಕೆ ಚಾಲನೆ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಂದಾದೀಪವನ್ನು ಬೆಳಗಿಸಿದ ಶಾಸಕ ಹರೀಶ್ ಪೂಂಜ

Suddi Udaya

ಬೀಜಾಡಿಯ ಯೋಧ ಅನೂಪ್ ಪೂಜಾರಿಯವರ ಶವ ಪೆಟ್ಟಿಗೆಗೆ ಹೆಗಲು ಕೊಟ್ಟ ಸಂಸದ ಕ್ಯಾ| ಬ್ರಿಜೇಶ್ ಚೌಟ

Suddi Udaya

ಅರಸಿನಮಕ್ಕಿ ಮೂಲ್ಯರ ಯಾನೆ ಕುಲಾಲರ ಸಂಘ: 29ನೇ ವರ್ಷದ ವಾರ್ಷಿಕೋತ್ಸವ-ಸತ್ಯನಾರಾಯಣ ಪೂಜೆ

Suddi Udaya

ಬೆಳಾಲು ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆ

Suddi Udaya

ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜು: ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya
error: Content is protected !!