July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ. ಯೋ. ಬಿಸಿ ಟ್ರಸ್ಟ್ ನಿಂದ ಸ್ವ ಉದ್ಯೋಗ ಪ್ರೇರಣಾ ಶಿಬಿರ

ವೇಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ (ರಿ), ಗುರುವಾಯನಕೆರೆ, ವೇಣೂರು ವಲಯದ ಕರಿಮಣೇಲು ಕಾರ್ಯಕ್ಷೇತ್ರ ದ ಪಡ್ಡ0ತಡ್ಕ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದನ್ವಯ ಸ್ವ ಉದ್ಯೋಗ ಪ್ರೇರಣಾ ಶಿಬಿರದ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷರಾದ ದೋಗೂ ನಾಯ್ಕರವರು ನೆರವೇರಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿದ್ದವನ ಉಜಿರೆಯ ರುಡ್ ಸೆಟ್ ಸಂಸ್ಥೆಯ ಸಿಬ್ಬಂದಿ ರಶ್ಮಿ ರವರು ರುಡ್ ಸೆಟ್ ಸಂಸ್ಥೆ ಬೆಳೆದು ಬಂದ ಬಗ್ಗೆ ಇಲ್ಲಿ ನೀಡುವ ತರಬೇತಿಗಳು, ತರಬೇತಿಯ ನಂತರ ಫಲಾನುಭವಿಗಳು ಸ್ವ ಉದ್ಯೋಗ ಮಾಡಲು ಪ್ರೇರಣೆ, ಬ್ಯಾಂಕ್ ನಲ್ಲಿ ಸಬ್ಸಿಡಿ ಯಲ್ಲಿ ಸಿಗುವ ಸಾಲಗಳ ಬಗ್ಗೆ ಮಾಹಿತಿ ನೀಡಲಾಗುತಿದೆ, ತರಬೇತಿ ಪಡೆಯುವುದು ಮುಖ್ಯವಲ್ಲ ನಂತರ ದಿನಗಳಲ್ಲಿ ಕಲಿತ ವಿದ್ಯೆ ಯಲ್ಲಿ ಸ್ವ ಉದ್ಯೋಗ ಮಾಡುವುದು ಮುಖ್ಯ ವಾಗಿರುತ್ತದೆ ಇದರ ಬಗ್ಗೆ ನಾವು ತರಬೇತಿಯ ಬಳಿಕವು ಫಲಾನುಭಾವಿಯ ಸಂಪರ್ಕದಲ್ಲಿ ಇರುತ್ತೇವೆ. ಯಾಕೆಂದ್ರೆ ಎಲ್ಲರಿಗೂ ಸರಕಾರಿ, ಹಾಗೂ ಖಾಸಗಿ ಉದ್ಯೋಗ ಸಿಗಲು ಸಾಧ್ಯವಿಲ್ಲ ಅದರಿಂದ ಸ್ವ ಉದ್ಯೋಗ ಮಾಡಬೇಕಾದ ಅನಿವಾರ್ಯತೆ ಇದೇ ಎಂದರು ನಮ್ಮ ತರಬೇತಿ ಸಂಸ್ಥೆಯಲ್ಲಿ ಕೃಷಿ ಸಂಬಂಧಿತ, ಉತ್ಪನ ಸಂಬಂಧಿತ, ಉದ್ಯಮಶೀಲತಾ ತರಭೇತಿ , ಸೇವೆಗೆ ಸಂಬಂಧಿಸಿದಂತೆ ಸೆಲ್ ಫೋನ್ ರಿಪೇರಿ, ಸಿ. ಸಿ ಟಿವಿ, ಕಂಪ್ಯೂಟರ್, ಗ್ರಹೋಪಯೋಗಿ ಉಪಕರಣಗಳ ರಿಪೇರಿ, ಹಾಗೂ ಇನ್ನಿತರ ತರಭೇತಿಗಳನ್ನು ನೀಡಲಾಗುವುದು ಕಲಿಯಲು ಆಸಕ್ತಿ ಇರುವವರು ಇ-ಮೆಲ್, ವೆಬ್ ಸೈಟ್, ದೂರವಾಣಿ ಮುಖಂತರವು ಅರ್ಜಿ ನೀಡಬಹುದು ಎಂದರು.

ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯಧಿಕಾರಿ ಹರಿಣಿ ಸೇವಾಪ್ರತಿನಿಧಿ ಶೋಭಾ, ಒಕ್ಕೂಟ ಪದಾಧಿಕಾರಿಗಳಾದ ಗಣೇಶ್, ಆನಂದ, ಯಶೋಧ ಹಾಗೂ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆ ಯನ್ನು ಶ್ವೇತಾ ರವರು ನೆರವೇರಿಸಿದರು.

Related posts

ನಿಡ್ಲೆ ಸರ್ಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ

Suddi Udaya

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ

Suddi Udaya

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ

Suddi Udaya

ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ: ವಾಣಿ ಕಾಲೇಜಿನ ಮೋಹಿತ್ ಪ್ರಥಮ ಸ್ಥಾನ

Suddi Udaya

ಮುಂಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ: ಶಾಲೆಗೆ ಕೊಡುಗೆ ನೀಡಿದ ದಾನಿಗಳಿಗೆ ಗೌರವಾರ್ಪಣೆ

Suddi Udaya

ಇತಿಹಾಸ ಪ್ರಸಿದ್ದ ಬಳಂಜ ದೇವಸ್ಥಾನದ ಭಕ್ತವೃಂದದಿಂದ ಶಾಸಕ ಹರೀಶ್ ಪೂಂಜರವರ ಭೇಟಿ

Suddi Udaya
error: Content is protected !!