25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಗುರುವಾಯನಕೆರೆ:ಎಕ್ಸೆಲ್ ಕಾಲೇಜಿನಲ್ಲಿ ಪ್ರತಿಭಾವಂತರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್ : ಶೈಕ್ಷಣಿಕ ಸಾಧನೆಗಳ ಮೂಲಕ ರಾಜ್ಯದಲ್ಲಿ ಗುರುತಿಸ್ಪಟ್ಟ ಕಾಲೇಜು ಎಕ್ಸೆಲ್

ಗುರುವಾಯನಕೆರೆ: ಎಕ್ಸೆಲ್ ಕಾಲೇಜಿನಲ್ಲಿ ಪ್ರತಿಭಾವಂತರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್ ತನ್ನ ಶೈಕ್ಷಣಿಕ ಸಾಧನೆಗಳ ಮೂಲಕ ರಾಜ್ಯದ ಶೈಕ್ಷಣಿಕ ಭೂಪಟದಲ್ಲಿ ಅನನ್ಯ ಸ್ಥಾನವನ್ನು ಗಳಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ,ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಗುರುವಾಯನಕೆರೆಯ ವಿಶಾಲ ದಂಡೆಯ ಮೇಲೆ, ನಿಸರ್ಗ ರಮಣೀಯ ತಾಣ ದಲ್ಲಿರುವ ಎಕ್ಸೆಲ್ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸಿದವರು ನೀಟ್ ಟ್ರೈನರ್ ಹಾಗೂ ರಸಾಯನ ವಿಜ್ಞಾನ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದ ಸುಮಂತ್ ಕುಮಾರ್ ಜೈನ್ ಅವರು. ನೂರಾರು ವಿದ್ಯಾರ್ಥಿಗಳ ಹಾಗೂ ಹೆತ್ತವರ ಬೇಡಿಕೆಯ ಮೇರೆಗೆ ಇವರು ಲಾಂಗ್ ಟರ್ಮ್ ನೀಟ್ ಕೋಚಿಂಗ್ ಸೆಂಟರ್ ನ್ನು ಪ್ರಾರಂಭಿಸಿದ್ದಾರೆ.

ಲಾಂಗ್ ಟರ್ಮ್ ನೀಟ್ : ಡಾಕ್ಟರ್ ಆಗ ಬೇಕೆಂದು ಗುರಿ ಇಟ್ಟುಕೊಂಡ ವಿದ್ಯಾರ್ಥಿಗಳು ಪಿಯುಸಿಯಲ್ಲಿ ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗಾಗಿ ನೀಟ್ ಪರೀಕ್ಷೆ ಯನ್ನು ಬರೆದು, ನಿರೀಕ್ಷಿತ ಅಂಕಗಳು ಬಾರದಿರುವಾಗ ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗಾಗಿಯೆ ಸಂಪೂರ್ಣ ತಯಾರಾಗಿ , ಒಂದು ವರ್ಷಗಳ ಪರ್ಯಂತ ತರಬೇತಿ ಪಡೆಯುವುದನ್ನು ನೀಟ್ ಲಾಂಗ್ ಟರ್ಮ್ ತರಬೇತಿ ಎನ್ನುತ್ತಾರೆ.ನೀಟ್ ಪರೀಕ್ಷೆಯಲ್ಲಿ ರಾಂಕ್ ಪಡೆಯಲು ಎಷ್ಟೋ ಸಲ ಪ್ರತಿಭಾವಂತರಿಗೆ ಕೂಡಾ ಸಾಧ್ಯವಾಗುವುದಿಲ್ಲ. ಸರಿಯಾದ ಕೋಚಿಂಗ್ ದೊರಕದಿರುವುದು, ಯೋಗ್ಯ ಸ್ಟಡಿ ಮೆಟೀರಿಯಲ್ ಸಿಗದಿರುವುದು, ಸೂಕ್ತ ಮಾರ್ಗದರ್ಶನದ ಕೊರತೆ, ವಿಷಯಗಳನ್ನು ನೆನಪಿಟ್ಟುಕೊಳ್ಳುವ ತಂತ್ರಗಳ ಅರಿವಿಲ್ಲದಿರುವಿಕೆ, ಪರಿಣಾಮಕಾರಿಯಾಗಿರದ ಪಾಠ ಪ್ರವಚನ ಮೊದಲಾದವು ಕಡಿಮೆ ಅಂಕ ಗಳಿಸಲು ಕಾರಣಗಳು. ಇವನ್ನೆಲ್ಲಾ ದೃಷ್ಟಿಯಲ್ಲಿರಿಸಿಕೊಂಡೇ ಎಕ್ಸೆಲ್ ಲಾಂಗ್ ಟರ್ಮ್ ಕೋಚಿಂಗ್ ಸೆಂಟರ್ ಕಾರ್ಯ ನಿರ್ವಹಿಸುತ್ತದೆ.ರಿಪಿಟರ್ಸ್ ಮನೋವಿಜ್ಞಾನ ಅರ್ಥ ಮಾಡಿಕೊಂಡು, ಅವರು ಅಧಿಕ ಅಂಕ ಗಳಿಸಲು ಬೇಕಾಗುವ ಎಲ್ಲಾ ವಿಧಾನಗಳನ್ನು ಎಕ್ಸೆಲ್ ನಲ್ಲಿ ಹೇಳಿ ಕೊಡಲಾಗುತ್ತದೆ.

ಎಕ್ಸೆಲ್ ನ ವೈಶಿಷ್ಟ್ಯ: ವೈದ್ಯಕೀಯ ಶಿಕ್ಷಣ ಪಡೆಯಲು ರಾಷ್ಟ್ರ ಮಟ್ಟದಲ್ಲಿ ಈ ಬಾರಿ ಸುಮಾರು ಇಪ್ಪತ್ತೊಂದು ಲಕ್ಷದಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇಂಥ ಕಠಿಣ ಸ್ಪರ್ಧೆಯ ನಡುವೆ ಸೀಮಿತ ಸಂಖ್ಯೆಯ ಸೀಟುಗಳಿರುವಾಗ, ಎಕ್ಸೆಲ್ ನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ನೀಟ್ ಬರೆದ 180 ವಿದ್ಯಾರ್ಥಿಗಳ ಪೈಕಿ 176 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. 26 ಮಂದಿಗೆ 550ಕ್ಕಿಂತ ಹೆಚ್ಚು ಅಂಕಗಳು, 11 ವಿದ್ಯಾರ್ಥಿಗಳಿಗೆ 600 ಕ್ಕಿಂತ ಅಧಿಕ ಅಂಕಗಳು ಬಂದಿರುವುದು ಗಮನಾರ್ಹ. 35 ನೆಯ ರಾಷ್ಟ್ರೀಯ ಕೆಟಗರಿ ರಾಂಕ್ ಪಡೆದುಕೊಂಡ ಸಂಜನಾ ಈರೈನವರ್ ಭೋಪಾಲ್ ನ ಏಮ್ಸ್ (AIIMS) ನಲ್ಲಿ ಸ್ಥಾನ ಪಡೆದರೆ,720ರ ಪೈಕಿ 692 ಅಂಕಗಳನ್ನು ಪಡೆದ ಆದಿತ್ ಜೈನ್ ವಿಶ್ವ ವಿಖ್ಯಾತ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮೆಡಿಕಲ್ ಕೋರ್ಸ್ ಗೆ ಆಯ್ಕೆಯಾಗಿದ್ದಾರೆ. ಇಂಥ ಅಪೂರ್ವ ಸಾಧನೆಗೆ ಎಕ್ಸೆಲ್ ನಲ್ಲಿರುವ ಪಾಠ ಪ್ರವಚನಗಳು ವ್ಯವಸ್ಥೆಯೇ ಕಾರಣವೆನ್ನುವುದು ವಿದ್ಯಾರ್ಥಿಗಳ ಅಭಿಮತ.

ಹುಡುಗ ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ : ಎಕ್ಸೆಲ್ ನಲ್ಲಿ ಬಾಲಕ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್, ಪ್ರತ್ಯೇಕ ಸ್ಟಡಿ ಅವರ್, ಯೋಗ ಧ್ಯಾನ ತರಬೇತಿ, ಸ್ಮರಣ ಶಕ್ತಿ ಹೆಚ್ಚಿಸುವ ತಂತ್ರಗಳನ್ನು ಹೇಳಿಕೊಡಲಾಗುತ್ತದೆ. 24×7 ಆರೋಗ್ಯ ಸೇವೆ, ಬಿಸಿನೀರಿನ ವ್ಯವಸ್ಥೆ, ಲಾಂಡ್ರಿ , ಇ- ಲೈಬ್ರೆರಿ ಮೊದಲಾಗಿ ಹತ್ತಾರು ವಿದ್ಯಾರ್ಥಿ ಸ್ನೇಹಿ ಸೌಕರ್ಯಗಳು ಎಕ್ಸೆಲ್ ನಲ್ಲಿವೆ.*ಪ್ರಾಧ್ಯಾಪಕರು ಎಕ್ಸೆಲ್ ನ ಆಸ್ತಿ*ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದ , ಅನುಭವಿ, ಪ್ರತಿಭಾವಂತ, ಉನ್ನತ ಶೈಕ್ಷಣಿಕ ಅರ್ಹತೆಗಳಿರುವ ಇದೀಗ ಎಕ್ಸೆಲ್ ನಲ್ಲಿ ಇದ್ದಾರೆ. ಭಾರತದಲ್ಲಿ ಮಾತ್ರವಲ್ಲ… ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಈ ಪ್ರಾಧ್ಯಾಪಕರ ವಿದ್ಯಾರ್ಥಿಗಳು ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ.ಭೌತವಿಜ್ಞಾನ ವಿಭಾಗ : ಡಾ.ಸತ್ಯ ನಾರಾಯಣ ಭಟ್.15 ವರ್ಷಗಳ ಬೋಧನಾನುಭವ* ಮಧು ಸೂದನ್ ರೆಡ್ಡಿ : 20 ವರ್ಷಗಳ ಬೋಧನಾನುಭವ* ದಿವ್ಯಾ ಹೆಗಡೆ: 12 ವರ್ಷಗಳ ಬೋಧನಾನುಭವ* ಮನೋಹರ್ : 10 ವರ್ಷಗಳ ಬೋಧನಾನುಭವ* ಜೋಸ್ಟಮ್ : 10 ವರ್ಷಗಳ ಬೋಧನಾನುಭವ*ಶರತ್ ಕ್ರಾಸ್ತಾ : 8 ವರ್ಷಗಳ ಬೋಧನಾನುಭವ.ರಸಾಯನ ವಿಜ್ಞಾನ* ಸುಮಂತ್ ಕುಮಾರ್ ಜೈನ್ : 16 ವರ್ಷಗಳ ಬೋಧನಾನುಭವ ವೆಂಕಟೇಶ್ : 20 ವರ್ಷಗಳ ಬೋಧನಾನುಭವ* ಜೈಸ್ ಆಂಟನಿ : 15 ವರ್ಷಗಳ ಬೋಧನಾನುಭವ* ಕೇಶವ ರಾವ್ : 12 ವರ್ಷಗಳ ಬೋಧನಾನುಭವ* ಈಶ್ವರ್ ಶರ್ಮ : 8 ವರ್ಷಗಳ ಬೋಧನಾನುಭವ* ದೀಕ್ಷಿತ : 10 ವರ್ಷಗಳ ಬೋಧನಾನುಭವ*ಜೀವ ವಿಜ್ಞಾನ* : * ಚಿಗುರು ಪ್ರಕಾಶ್ : 22 ವರ್ಷಗಳ ಬೋಧನಾನುಭವ* ಅಜಯ್ ವಿಲ್ಸನ್ : 20 ವರ್ಷಗಳ ಬೋಧನಾನುಭವಡಾ. ಕೃಷ್ಣ ರೆಡ್ಡಿ : 8 ವರ್ಷಗಳ ಬೋಧನಾನುಭವ. ದೀಪಾ : 15 ವರ್ಷಗಳ ಬೋಧನಾನುಭವಸಪ್ನಾ ಪಾಯಸ್ : 12 ವರ್ಷಗಳ ಬೋಧನಾನುಭವ.

ಪ್ರತಿಭಾವಂತರಿಗೆ ಎಕ್ಸೆಲ್ ನಲ್ಲಿ ರಿಯಾಯಿತಿ: ಈ ಬಾರಿ ಯ ನೀಟ್ ಪರೀಕ್ಷೆ ಯಲ್ಲಿ 450 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಕೋಚಿಂಗ್ ನೀಡಲಾಗುತ್ತದೆ. 400 ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಫೀಸಿನಲ್ಲಿ 50 ಶೇಕಡಾ ರಿಯಾಯಿತಿ ನೀಡಲಾಗುತ್ತದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9880899769/9902284110 ಸಂಪರ್ಕಿಸ ಬಹುದು.

Related posts

ಕೊಕ್ಕಡ: ಡ್ರೈವರ್ ಮೂರ್ಛೆಕ್ಕೊಳಗಾಗಿ ಏಕಾಏಕಿ ಚಲಿಸಿದ ವಾಹನ : ಜಂಕ್ಷನ್ ನಲ್ಲಿ ನಿಂತಿದ್ದ ಮಹಿಳೆಗೆ ಡಿಕ್ಕಿ

Suddi Udaya

ಧರ್ಮಸ್ಥಳ : ಸರ್ಕಾರಿ ಆಸ್ಪತ್ರೆಗೆ ಔಷಧಿ ಕೊಡುಗೆ

Suddi Udaya

ಹೊಸಂಗಡಿ: ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗದ ನಿರ್ವಹಣೆ ಕುರಿತು ತರಬೇತಿ

Suddi Udaya

ಮಾ.17 : ಬೆಳ್ತಂಗಡಿ, ಧರ್ಮಸ್ಥಳ,ಕಕ್ಕಿಂಜೆ ಹಾಗೂ ವೇಣೂರು ವಿದ್ಯುತ್ ಉಪಕೇಂದ್ರಗಳಿಂದ ಹೊರಡುವ ಎಲ್ಲ 11 ಕೆವಿ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಉಜಿರೆ ಎಸ್ ಡಿ ಎಮ್ ಕಾಲೇಜಿನಲ್ಲಿ “ಇತಿಹಾಸ ನಿರ್ಮಿಸಿದ ಇತಿಹಾಸಕಾರ” ಡಾ. ಪಾದೂರು ಗುರುರಾಜ್ ಭಟ್ ರವರ ಶತಮಾನದ ಸಂಸ್ಮರಣೆ

Suddi Udaya

ಎಸೆಸೆಲ್ಸಿ ಫಲಿತಾಂಶ ಪ್ರಕಟ- ಈ ಬಾರಿಯೂ ಬಾಲಕಿಯರೇ ಮೇಲುಗೈ

Suddi Udaya
error: Content is protected !!